HomeLatest Newsತಂದೆಯ ವೈರಲ್ ಮೀಮ್ ಟ್ರೆಂಡ್‌ಗೆ ಮಗಳ ಎಂಟ್ರಿ: ರವಿ ಕಿಶನ್ ಕಾಲೆಳೆದ ರಿವ್ವಾ!

ತಂದೆಯ ವೈರಲ್ ಮೀಮ್ ಟ್ರೆಂಡ್‌ಗೆ ಮಗಳ ಎಂಟ್ರಿ: ರವಿ ಕಿಶನ್ ಕಾಲೆಳೆದ ರಿವ್ವಾ!

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಲ್ಲಿರುವ ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ಅವರಿಗೆ ಸಂಬಂಧಿಸಿದ ಮೀಮ್ಸ್‌ಗಳು ಸಖತ್ ಹಲ್‌ಚಲ್ ಸೃಷ್ಟಿಸುತ್ತಿವೆ. ರವಿ ಕಿಶನ್ ಅವರ ಹಳೆಯ ಸಂದರ್ಶನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ವೀಡಿಯೋ ತುಣುಕುಗಳನ್ನು ಬಳಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಈ ಸಾಲಿಗೆ ಸ್ವತಃ ರವಿ ಕಿಶನ್ ಅವರ ಪುತ್ರಿ ರಿವ್ವಾ ಕಿಶನ್ ಸೇರಿಕೊಂಡಿದ್ದು, ತಂದೆಯ ಕಾಲೆಳೆಯುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ರಿವ್ವಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಮೋಜಿನ ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಂಪು ಬಣ್ಣದ ಟೆಲಿಫೋನ್ ಬೂತ್‌ನಲ್ಲಿ ರವಿ ಕಿಶನ್ ನಿಂತು ಫೋನ್‌ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಿದ್ದರೆ, ಹೊರಗಡೆ ಕಾಯುತ್ತಿರುವ ರಿವ್ವಾ ಅವರಿಗೆ ಫೋನ್‌ನಲ್ಲಿ ಮಾತನಾಡಲು ಅವಕಾಶವೇ ಸಿಗುವುದಿಲ್ಲ. ಅಮ್ಮನ ಜೊತೆ ಮಾತನಾಡಬೇಕು ಎಂದು ರಿವ್ವಾ ಕಾಯುತ್ತಿದ್ದರೂ ರವಿ ಕಿಶನ್ ಬೂತ್‌ನಿಂದ ಹೊರಬರುವುದೇ ಇಲ್ಲ.

ಈ ವೀಡಿಯೋಗೆ ಹಿನ್ನೆಲೆ ಸಂಗೀತವಾಗಿ ರವಿ ಕಿಶನ್ ಮೀಮ್ಸ್‌ಗಳಲ್ಲಿ ಬಳಸಲಾಗುವ ಅರೂಬ್ ಖಾನ್ ಅವರ ಜನಪ್ರಿಯ ಗೂಚಿ ಹಾಡನ್ನು ಬಳಸಲಾಗಿದೆ. ಈ ವೀಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ದೇಶದ ಸೇವೆಗೆ ತುರ್ತು ಕರೆ ಬಂದಿದೆ ಅದಕ್ಕೆ ರವಿ ಕಿಶನ್ ಫೋನ್ ಬಿಡುತ್ತಿಲ್ಲ ಎಂದು ಕೆಲವರು ತಮಾಷೆ ಮಾಡಿದರೆ, ಟ್ರೆಂಡ್ ಫಾಲೋ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಅಲಿಯಾನ್ಸ್ ರಿಯಾಲಿಟಿ ಶೋನಲ್ಲಿ ತಂದೆ-ಮಗಳು ಒಟ್ಟಿಗೆ ಭಾಗವಹಿಸಿದ್ದರು. ಆದರೆ ಮಧ್ಯದಲ್ಲೇ ರವಿ ಕಿಶನ್ ದೇಶ ಸೇವೆಗೆ ಹೋಗಬೇಕು ಎಂದು ಹೇಳಿ ಶೋ ತೊರೆದಿದ್ದರು. ಆ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮೀಮ್ಸ್ ಆಗಿ ಬದಲಾಗಿತ್ತು.

https://www.instagram.com/reel/DboDitciLyb

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular