HomeLatest Newsಭಾರತೀಯ ನೋಟು ಮುದ್ರಣ ವೆಚ್ಚ ಎಷ್ಟು? ಸರ್ಕಾರ ಬೇಕಾದಷ್ಟು ಹಣ ಏಕೆ ಮುದ್ರಿಸಲ್ಲ?

ಭಾರತೀಯ ನೋಟು ಮುದ್ರಣ ವೆಚ್ಚ ಎಷ್ಟು? ಸರ್ಕಾರ ಬೇಕಾದಷ್ಟು ಹಣ ಏಕೆ ಮುದ್ರಿಸಲ್ಲ?

ಬೆಂಗಳೂರು: ನಾವು ಪ್ರತಿದಿನ ಕೈಯಲ್ಲಿ ಹಿಡಿಯುವ 10, 100 ಅಥವಾ 500 ರೂಪಾಯಿ ನೋಟುಗಳನ್ನು ಮುದ್ರಿಸಲು ಸರ್ಕಾರಕ್ಕೆ ಎಷ್ಟು ವೆಚ್ಚವಾಗುತ್ತದೆ ಗೊತ್ತಾ? ಮುದ್ರಣಕ್ಕೆ ತಗುಲುವ ವೆಚ್ಚ ತೀರಾ ಕಮ್ಮಿ ಇದ್ದರೂ, ಆ ನೋಟಿನ ಮೌಲ್ಯ ಮಾತ್ರ ಬೆಟ್ಟದಷ್ಟಿರುತ್ತದೆ

ಹಾಗಿದ್ದರೆ, ಅಷ್ಟೊಂದು ಕಮ್ಮಿ ವೆಚ್ಚದಲ್ಲಿ ಹಣ ಮುದ್ರಿಸುವುದಾದರೆ, ರಿಸರ್ವ್ ಬ್ಯಾಂಕ್ ಬೇಕಾಬಿಟ್ಟಿ ನೋಟುಗಳನ್ನು ಮುದ್ರಿಸಿ ಪ್ರತಿಯೊಬ್ಬ ಭಾರತೀಯನನ್ನೂ ಶ್ರೀಮಂತನನ್ನಾಗಿ ಮಾಡಬಾರದೇ?’ ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡುವುದುಂಟು. ಆದರೆ, ಇದರ ಬೆನ್ನಲ್ಲೇ ದೇಶದ ಆರ್ಥಿಕತೆಯ ಬೃಹತ್ ನಿಯಮಾವಳಿಗಳು ಅಡಗಿವೆ.

ಭಾರತೀಯ ನೋಟುಗಳು ಅಚ್ಚಾಗುವುದು ಎಲ್ಲಿ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಯಲ್ಲಿ ಒಟ್ಟು ನಾಲ್ಕು ಪ್ರಮುಖ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ:

ನಾಸಿಕ್ (ಮಹಾರಾಷ್ಟ್ರ)

ದೇವಾಸ್ (ಮಧ್ಯಪ್ರದೇಶ)

ಮೈಸೂರು (ಕರ್ನಾಟಕ)

ಸಾಲ್ಬೋನಿ (ಪಶ್ಚಿಮ ಬಂಗಾಳ)

ಮಾರುಕಟ್ಟೆಯಲ್ಲಿ ಯಾವ ಮುಖಬೆಲೆಯ ನೋಟು ಎಷ್ಟು ಚಲಾವಣೆಯಲ್ಲಿರಬೇಕು ಎಂಬುದನ್ನು ದೇಶದ ಆರ್ಥಿಕ ಬೆಳವಣಿಗೆ, ಹಣದುಬ್ಬರ, ಡಿಜಿಟಲ್ ವಹಿವಾಟಿನ ಪ್ರಮಾಣ ಹಾಗೂ ಹಳೆಯ ನೋಟುಗಳ ಬದಲಾವಣೆಯ ಅಗತ್ಯವನ್ನು ಆಧರಿಸಿ RBI ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತೀರ್ಮಾನಿಸುತ್ತವೆ.

ಯಾವ ನೋಟಿಗೆ ಎಷ್ಟು ಖರ್ಚು?

ನೋಟಿನ ಮೌಲ್ಯ ಹೆಚ್ಚಿದ್ದ ತಕ್ಷಣ ಅದರ ಮುದ್ರಣ ವೆಚ್ಚವೂ ಹೆಚ್ಚಿರುತ್ತದೆ ಎಂದೇನೂ ಇಲ್ಲ. ವಿಶೇಷ ಕಾಗದ, ವಾಟರ್‌ಮಾರ್ಕ್, ಭದ್ರತಾ ದಾರ (Security Thread) ಹಾಗೂ ಬಣ್ಣ ಬದಲಿಸುವ ವಿಶೇಷ ಮಸಿಯನ್ನು ಬಳಸಿ ನೋಟುಗಳನ್ನು ಸಿದ್ಧಪಡಿಸಲಾಗುತ್ತದೆ. ಆರ್‌ಬಿಐ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಪ್ರತಿ ನೋಟಿನ ಅಂದಾಜು ತಯಾರಿಕಾ ವೆಚ್ಚ ಹೀಗಿದೆ:

ನೋಟುಗಳ ಮುದ್ರಣ ವೆಚ್ಚದ ಪಟ್ಟಿ:

₹10 ನೋಟು: ₹0.96

₹20 ನೋಟು: ₹0.95

₹50 ನೋಟು: ₹1.13

₹100 ನೋಟು: ₹1.77

₹200 ನೋಟು: ₹2.37

₹500 ನೋಟು: ₹2.29

ನೋಟಿನ ನೈಜ ಮೌಲ್ಯ ನಿರ್ಧಾರವಾಗುವುದು ಅದರ ಮುದ್ರಣ ವೆಚ್ಚದಿಂದಲ್ಲ; ಬದಲಿಗೆ ದೇಶದ ಆರ್ಥಿಕ ಸ್ಥಿರತೆ ಮತ್ತು ರಿಸರ್ವ್ ಬ್ಯಾಂಕ್ ನೀಡುವ ಭರವಸೆಯ ಆಧಾರದ ಮೇಲೆ

ಅಪಾರ ಪ್ರಮಾಣದ ಹಣ ಮುದ್ರಿಸಿದರೆ ಏನಾಗುತ್ತದೆ?

ಸರ್ಕಾರ ಬೇಕಾಬಿಟ್ಟಿ ಹಣ ಮುದ್ರಿಸಿ ಹಂಚಿದರೆ ಬಡತನ ಮಂಜಿನಂತೆ ಕರಗಿಹೋಗುತ್ತದೆ ಎಂದುಕೊಂಡರೆ ಅದು ದೊಡ್ಡ ಭ್ರಮೆ.ಮಾರುಕಟ್ಟೆಯಲ್ಲಿ ಸರಕುಗಳ ಉತ್ಪಾದನೆ ಹೆಚ್ಚಾಗದೆ ಬರೀ ಜನರ ಕೈಯಲ್ಲಿ ಹಣದ ಹರಿವು ಹೆಚ್ಚಾದರೆ, ಪ್ರತಿಯೊಂದು ವಸ್ತುವಿನ ಬೆಲೆಯೂ ಆಕಾಶ ಮುಟ್ಟುತ್ತದೆ. ಇದನ್ನೇ ಆರ್ಥಿಕ ತಜ್ಞರು ಹಣದುಬ್ಬರ ಎಂದು ಕರೆಯುತ್ತಾರೆ. ಉದಾಹರಣೆಗೆ, ಇಂದು ₹50ಗೆ ಸಿಗುವ ವಸ್ತುವಿಗೆ ಎಲ್ಲರ ಬಳಿಯೂ ಯಥೇಚ್ಛ ಹಣವಿದ್ದರೆ ₹150 ಕೊಟ್ಟು ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ ರೂಪಾಯಿಯ ಖರೀದಿ ಶಕ್ತಿ ಸಂಪೂರ್ಣ ಶೂನ್ಯಕ್ಕಿಳಿಯುತ್ತದೆ.

ಐತಿಹಾಸಿಕ ದುರಂತ: ಜಿಂಬಾಬ್ವೆ ಹಾಗೂ ವೆನೆಜುವೆಲಾ ದೇಶಗಳು ನಿಯಂತ್ರಣವಿಲ್ಲದೆ ಹಣ ಮುದ್ರಿಸಿ ‘ಅತಿಹೆಚ್ಚಿನ ಹಣದುಬ್ಬರ’ಕ್ಕೆ (Hyperinflation) ಸಿಲುಕಿದ್ದವು. ಅಲ್ಲಿ ಒಂದು ತುಂಡು ಬ್ರೆಡ್ ಕೊಳ್ಳಲು ನೋಟುಗಳ ಚೀಲವನ್ನೇ ಒಯ್ಯಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.

ಹಳೆಯ, ಹಾಳಾದ ನೋಟುಗಳು ಏನಾಗುತ್ತವೆ?

ಚಲಾವಣೆಯಲ್ಲಿದ್ದು ಹರಿದುಹೋದ, ಮಸುಕಾದ ನೋಟುಗಳನ್ನು ಬ್ಯಾಂಕ್‌ಗಳು ಸಂಗ್ರಹಿಸಿ ಆರ್‌ಬಿಐಗೆ ತಲುಪಿಸುತ್ತವೆ. ಆರ್‌ಬಿಐನ “ಕ್ಲೀನ್ ನೋಟ್ ಪಾಲಿಸಿ” ಅಡಿಯಲ್ಲಿ ಇವುಗಳನ್ನು ತಪಾಸಣೆ ನಡೆಸಿ, ಆಟೋಮ್ಯಾಟಿಕ್ ಯಂತ್ರಗಳ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಗುತ್ತದೆ. ತದನಂತರ ಅಷ್ಟೇ ಪ್ರಮಾಣದ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular