HomeLatest Newsಬರ ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?

ಬರ ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ: ಯಾರಿಗೆ ಯಾವ ಜಿಲ್ಲೆ?

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎದುರಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಸ್ಥಿತಿಯನ್ನು ಎದುರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಮರಪಾದಾದಿಯಲ್ಲಿ ರಂಗಕ್ಕಿಳಿದಿದ್ದು, ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸಂಪುಟದ ನೂತನ ಸಚಿವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ವಿಳಂಬ ಮಾಡದೆ ತಕ್ಷಣವೇ ತಮಗೆ ನಿಯೋಜಿಸಲಾದ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಗಳ ವಾಸ್ತವ ಸ್ಥಿತಿಗತಿ ಪರಿಶೀಲಿಸಬೇಕು ಎಂದು ಸಿಎಂ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕ್ಷೇತ್ರ ಮಟ್ಟದ ಪರಿಶೀಲನೆಗೆ ನಿರ್ದೇಶನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾದ್ಯಂತ ಒಂದು ಕಡೆ ಪ್ರವಾಹ ಹಾಗೂ ಮತ್ತೊಂದೆಡೆ ಮಳೆ ಕೊರತೆಯಿಂದ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಕೇವಲ ಸಭೆಗಳಿಗೆ ಸೀಮಿತವಾಗದೆ ನೇರವಾಗಿ ಸಾರ್ವಜನಿಕರನ್ನು ಭೇಟಿಯಾಗಿ ಕುಂದುಕೊರತೆ ಆಲಿಸಬೇಕು. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸರ್ಕಾರದ ಪರಿಹಾರ ಕ್ರಮಗಳು ತಳಮಟ್ಟದ ಸಂತ್ರಸ್ತರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ಯಾರಿಗೆ ಯಾವ ಜಿಲ್ಲೆ?

ಡಾ. ಜಿ. ಪರಮೇಶ್ವರ್ – ತುಮಕೂರು

ರಘುಮೂರ್ತಿ – ಚಿತ್ರದುರ್ಗ

ಬೈರತಿ ಸುರೇಶ್ -ಚಿಕ್ಕಬಳ್ಳಾಪುರ,

ಕೆ.ಎಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ,

ರಾಮಲಿಂಗಾ ರೆಡ್ಡಿ – ಕೋಲಾರ,

ಎಚ್. ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ

ಜಮೀರ್ ಅಹಮದ್ ಖಾನ್ – ವಿಜಯನಗರ

ಕೆ.ಜೆ. ಜಾರ್ಜ್ – ಚಿಕ್ಕಮಗಳೂರು

ಕೆ.ಎಂ. ಶಿವಲಿಂಗೇಗೌಡ – ಹಾಸನ

ಮಧು ಬಂಗಾರಪ್ಪ ಶಿವಮೊಗ್ಗ

ಎಂ.ಬಿ. ಪಾಟೀಲ್‌- ವಿಜಯಪುರ

ವಿಜಯಾನಂದ ಕಾಶಪ್ಪನವರ – ಬಾಗಲಕೋಟೆ

ಬಸವರಾಜ ರಾಯರೆಡ್ಡಿ – ಗದಗ

ಎಸ್. ಎಸ್. ಮಲ್ಲಿಕಾರ್ಜುನ -ದಾವಣಗೆರೆ

ರುದ್ರಪ್ಪ ಲಮಾಣಿ – ಹಾವೇರಿ

ಸತೀಶ್ ಜಾರಕಿಹೊಳಿ – ಬೆಳಗಾವಿ

ಸಂತೋಷ್ ಲಾಡ್ – ಧಾರವಾಡ

ಲಕ್ಷ್ಮಣ ಸವದಿ – ಉತ್ತರಕನ್ನಡ

ಪ್ರಿಯಾಂಕ್ ಖರ್ಗೆ- ಕಲಬುರಗಿ

ಅಜಯ್ ಸಿಂಗ್ – ರಾಯಚೂರು

ಈಶ್ವರ್ ಖಂಡ್ರೆ- ಬೀದರ್

ಯು.ಟಿ. ಖಾದರ್ – ದಕ್ಷಿಣ ಕನ್ನಡ ಮತ್ತು ಉಡುಪಿ

ಪಿ.ಎಂ. ನರೇಂದ್ರಸ್ವಾಮಿ – ಕೊಡಗು

ಯತೀಂದ್ರ ಸಿದ್ದರಾಮಯ್ಯ-ಮೈಸೂರು

ಚಲುವರಾಯಸ್ವಾಮಿ – ಮಂಡ್ಯ

ಪುಟ್ಟರಂಗಶೆಟ್ಟಿ – ಚಾಮರಾಜನಗರ

ಬಿ. ನಾಗೇಂದ್ರ – ಬಳ್ಳಾರಿ

ಶರಣ ಪ್ರಕಾಶ ಪಾಟೀಲ – ಯಾದಗಿರಿ

ಶಿವರಾಜ್ ತಂಗಡಗಿ – ಕೊಪ್ಪಳ

ಕೃಷ್ಣ ಬೈರೇಗೌಡ – ಬೆಂಗಳೂರು ನಗರ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular