HomeLatest Newsಓದುತ್ತಲೇ ತಿಂಗಳಿಗೆ ₹1 ಲಕ್ಷ ಸಂಪಾದಿಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿ.. ಒಂದು ಚಿಕ್ಕ ಅಡುಗೆ ಐಡಿಯಾದಿಂದ ಯಶಸ್ಸು.!

ಓದುತ್ತಲೇ ತಿಂಗಳಿಗೆ ₹1 ಲಕ್ಷ ಸಂಪಾದಿಸುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿ.. ಒಂದು ಚಿಕ್ಕ ಅಡುಗೆ ಐಡಿಯಾದಿಂದ ಯಶಸ್ಸು.!

ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಈ ಘಟನೆಯೇ ಒಂದು ಚಿಕ್ಕ ನಿದರ್ಶನ. ಒಂದು ಸಣ್ಣ ಆಲೋಚನೆ ಜೀವನವನ್ನೇ ಬದಲಾಯಿಸಬಹುದು ಎನ್ನುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ವಿಶಾಖಪಟ್ಟಣದ ಎಂಜಿನಿಯರಿಂಗ್ ವಿದ್ಯಾರ್ಥಿ ಸೂರ್ಯ ಸ್ವರೂಪ್ ಈ ಮಾತನ್ನು ನಿಜವಾಗಿಸಿದ್ದಾರೆ. ಒಂದು ವಿಭಿನ್ನ ರೆಸಿಪಿಯ ಮೂಲಕ ಅವರು ಓದುತ್ತಲೇ ತಿಂಗಳಿಗೆ ₹1 ಲಕ್ಷ ಆದಾಯ ಗಳಿಸಿ ಯುವಕರಿಗೆ ಮಾದರಿಯಾಗಿದ್ದಾರೆ.

ಹೌದು. ಎಂಜಿನಿಯರಿಂಗ್ ಓದುತ್ತಿದ್ದಾಗ ಬಂದ ಒಂದು ಚಿಕ್ಕ ಅಡುಗೆ ಐಡಿಯಾವನ್ನು ಯಶಸ್ವಿ ಉದ್ಯಮವನ್ನಾಗಿ ರೂಪಿಸಿದ ವಿಶಾಖಪಟ್ಟಣದ ವಿದ್ಯಾರ್ಥಿ ಸೂರ್ಯ ಸ್ವರೂಪ್ ಇಂದು ತಿಂಗಳಿಗೆ ಸುಮಾರು ₹1 ಲಕ್ಷ ಆದಾಯ ಗಳಿಸುತ್ತಿದ್ದಾರೆ. ‘ಚಿಕನ್ ಲೋಡೆಡ್ ಫ್ರೆಂಚ್ ಫ್ರೈಸ್’ ರೆಸಿಪಿಯಿಂದ ಆರಂಭವಾದ ಅವರ ಪ್ರಯಾಣ ಈಗ ಹಲವು ನಗರಗಳಲ್ಲಿ 16 ಫ್ರಾಂಚೈಸಿಗಳ ವರೆಗೆ ವಿಸ್ತರಿಸಿದ್ದು, ಓದುತ್ತಲೇ ಉದ್ಯಮ ಕಟ್ಟಿದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

2023ರಲ್ಲಿ ಅವರು ಓದುತ್ತಿದ್ದ ಕಾಲೇಜಿನಲ್ಲಿ ನಡೆದ ಫುಡ್ ಫೆಸ್ಟಿವಲ್ಗಾಗಿ ‘ಚಿಕನ್ ಲೋಡೆಡ್ ಫ್ರೆಂಚ್ ಫ್ರೈಸ್’ ಎಂಬ ವಿಶೇಷ ರೆಸಿಪಿಯನ್ನು ಸಿದ್ಧಪಡಿಸಿದ್ದರು. ಸ್ನೇಹಿತರು ಅದರ ರುಚಿಯನ್ನು ಮೆಚ್ಚಿ ಪ್ರಶಂಸಿಸಿದ ನಂತರ, ಇದೇ ರೆಸಿಪಿಯನ್ನು ವ್ಯವಹಾರವನ್ನಾಗಿ ರೂಪಿಸಬೇಕೆಂಬ ಆಲೋಚನೆ ಅವರಿಗೆ ಮೂಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಕಾಲೇಜಿನಲ್ಲಿ ನಡೆಯಲಿದ್ದ ಯೂತ್ ಗ್ಯಾದರಿಂಗ್ ಕಾರ್ಯಕ್ರಮದಲ್ಲಿ ಸ್ಟಾಲ್ ಹಾಕುವ ಉದ್ದೇಶದಿಂದ ಲೋನ್ ಆಪ್ ಮೂಲಕ ₹35 ಸಾವಿರ ಸಾಲ ಪಡೆದು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾದ ಕಾರಣ, ಖರೀದಿಸಿದ್ದ ಸಾಮಗ್ರಿಗಳು ಹಾಳಾಗಿ ಅವರಿಗೆ ದೊಡ್ಡ ನಿರಾಸೆಯಾಯಿತು.
ಸಾಲ ತೀರಿಸಲು ಸ್ನೇಹಿತರಿಂದ ₹80 ಸಾವಿರ ನೆರವು ಪಡೆದ ಸೂರ್ಯ, ಉಳಿದ ಹಣವನ್ನು ಬಳಸಿ 2025ರಲ್ಲಿ ವಿಶಾಖಪಟ್ಟಣದ ಎಂವಿಪಿ ಡಬಲ್ ರೋಡ್ ಫುಟ್ಪಾತ್ನಲ್ಲಿ ಲೋಡೆಡ್ ಫ್ರೆಂಚ್ ಫ್ರೈಸ್ ಸ್ಟಾಲ್ ಆರಂಭಿಸಿದರು. ಕೆಲವೇ ದಿನಗಳಲ್ಲಿ ಯುವಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತು, ಅವರ ವಿಶೇಷ ರೆಸಿಪಿ ಜನಪ್ರಿಯವಾಯಿತು.
ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಉತ್ಪನ್ನದ ಪ್ರಚಾರ ನಡೆಸಿದ ಸೂರ್ಯ ಅವರಿಗೆ ಫ್ರಾಂಚೈಸಿ ನೀಡುವಂತೆ ಅನೇಕರು ಮುಂದೆ ಬಂದರು. ಕೇವಲ ಒಂದು ವರ್ಷದೊಳಗೆ ವಿಶಾಖಪಟ್ಟಣದ ಮರ್ರಿಪಾಲೆಂ, ಸುಜಾತನಗರ, ಅನಕಾಪಲ್ಲಿ, ಜೊತೆಗೆ ಹೈದರಾಬಾದ್, ಬೆಂಗಳೂರು, ಚೆನ್ನೈ ಹಾಗೂ ಶೋಲಾಪುರ ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟು 16 ಫ್ರಾಂಚೈಸಿಗಳನ್ನು ನೀಡುವಲ್ಲಿ ಯಶಸ್ವಿಯಾದರು.

ತಮ್ಮ ಯಶಸ್ಸಿಗೆ ಕುಟುಂಬದವರು ಮತ್ತು ಸ್ನೇಹಿತರು ನೀಡಿದ ಪ್ರೋತ್ಸಾಹ ಹಾಗೂ ಆರ್ಥಿಕ ನೆರವೇ ಪ್ರಮುಖ ಕಾರಣ ಎಂದು ಸೂರ್ಯ ಹೇಳುತ್ತಾರೆ. ಒಂದು ಸಣ್ಣ ರೆಸಿಪಿ ಐಡಿಯಾವನ್ನು ಯಶಸ್ವಿ ಉದ್ಯಮವನ್ನಾಗಿ ಬೆಳೆಸಿದ ಅವರು, ಇಂದು ಓದುತ್ತಲೇ ತಿಂಗಳಿಗೆ ಸುಮಾರು ₹1 ಲಕ್ಷ ಆದಾಯ ಗಳಿಸುತ್ತಿದ್ದು, ಇನ್ನೂ 10 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ ಯುವಕರಿಗೆ ಪ್ರೇರಣೆಯಾಗಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular