HomeLatest Newsವೈರಲ್ ಪೋಸ್ಟ್‌ನಿಂದ ಶುರುವಾಯ್ತು ಹೊಸ ಕಿರಿಕ್: ಸೋನಾಕ್ಷಿ ಸಿನ್ಹಾ ಲುಕ್ ಮತ್ತು ಮಾತಿನ ಶೈಲಿಯನ್ನು ರೇಗಿಸಿದ್ರಾ...

ವೈರಲ್ ಪೋಸ್ಟ್‌ನಿಂದ ಶುರುವಾಯ್ತು ಹೊಸ ಕಿರಿಕ್: ಸೋನಾಕ್ಷಿ ಸಿನ್ಹಾ ಲುಕ್ ಮತ್ತು ಮಾತಿನ ಶೈಲಿಯನ್ನು ರೇಗಿಸಿದ್ರಾ ಕಂಗನಾ?

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ವೈರಲ್ ಆದ ಇನ್ಸ್ಟಾಗ್ರಾಮ್ ಪೋಸ್ಟ್ ಒಂದಕ್ಕೆ ಅವರು ಲೈಕ್ ಒತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ನೀಡಿದ ಸ್ಪಷ್ಟನೆ ಇದೀಗ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆ ಇರಬಹುದೇ ಎಂಬ ಅನುಮಾನಕ್ಕೆ ಹಾದಿಮಾಡಿಕೊಟ್ಟಿದೆ.

ವೈರಲ್ ಪೋಸ್ಟ್ ಮತ್ತು ಕಂಗನಾ ಸ್ಪಷ್ಟನೆ

ಕೆಲ ದಿನಗಳ ಹಿಂದೆ ವೈರಲ್ ಆದ ಸ್ಕ್ರೀನ್‌ಶಾಟ್ ಒಂದರಲ್ಲಿ, ವೈದ್ಯಕೀಯ ಪರೀಕ್ಷೆಯ ಪ್ರತಿಭಟನೆ ವಿಚಾರವಾಗಿ ಇತ್ತೀಚೆಗೆ ಧ್ವನಿ ಎತ್ತಿದ್ದ ನಟಿಯೊಬ್ಬರು ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟದ ವೇಳೆ ಮೌನ ವಹಿಸಿದ್ದಾರೆ ಎಂದು ಟೀಕಿಸಲಾಗಿತ್ತು. ಈ ಪೋಸ್ಟ್‌ನಲ್ಲಿ ನಟಿಯ ದೇಹದ ತೂಕವನ್ನು ಹೇವ್ಯವಾಗಿ ನಿಂದಿಸಲಾಗಿತ್ತು. ಈ ಪೋಸ್ಟ್‌ಗೆ ಕಂಗನಾ ಲೈಕ್ ಮಾಡಿದ್ದಾರೆ ಎಂದು ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ತಕ್ಷಣ ಸ್ಪಷ್ಟನೆ ನೀಡಿದ ಕಂಗನಾ, ತಾವೆಂದೂ ಯಾರನ್ನೂ ದೇಹದ ತೂಕದ ಆಧಾರದ ಮೇಲೆ ನಿಂದಿಸುವುದಿಲ್ಲ. ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಸಂಪೂರ್ಣವಾಗಿ ನಕಲಿ ಎಂದು ಸ್ಪಷ್ಟಪಡಿಸಿದರು.

ಪರೋಕ್ಷ ವಾಗ್ದಾಳಿ ಹಾಗೂ ಹೊಸ ಚರ್ಚೆ

ವಿವಾದ ನಿರಾಕರಿಸಿದ ಬೆನ್ನಲ್ಲೇ ಕಂಗನಾ ಹಂಚಿಕೊಂಡ ಮತ್ತೊಂದು ಸಂದೇಶ ಹೊಸ ಸಂಚಲನ ಮೂಡಿಸಿದೆ. ಅದರಲ್ಲಿ ಅವರು, “ಇತ್ತೀಚೆಗೆ ನಟಿಯೊಬ್ಬರು ಜೇಬುಗಳ್ಳರಂತೆ ಉಡುಪು ಧರಿಸಿ ಮಾತನಾಡುತ್ತಿರುವುದನ್ನು ಗಮನಿಸಿದ್ದೇನೆ. ಹಿಂದೆ ಅತ್ಯಂತ ಘನತೆಯಿಂದ ಉಡುಪು ಧರಿಸಿ ಮಾತನಾಡುತ್ತಿದ್ದ ಅವರು, ಈಗ ಶಾರ್ಟ್ಸ್ ಹಾಗೂ ತಲೆಕೆಳಗಾಗಿ ಹ್ಯಾಟ್ ಧರಿಸಿ ವರ್ತಿಸುತ್ತಿದ್ದಾರೆ. ಪ್ರೀತಿ ಹಾಗೂ ಸಂಬಂಧಗಳಲ್ಲಿ ನಾವಿರುವಾಗ ಧರಿಸುವ ಉಡುಪು ನಮ್ಮ ಮನಸ್ಥಿತಿಯನ್ನು ಬಿಂಬಿಸುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಈ ರೀತಿ ಜೇಬುಗಳ್ಳರಂತೆ ಭಾವಿಸುವಂತೆ ಮಾಡುತ್ತಿದ್ದರೆ ನನಗೆ ಬೇಸರವಾಗುತ್ತದೆ. ನಿಮಗಾಗಿ ಶೈಲಿಯ ಸಲಹೆ ಬೇಕಿದ್ದರೆ ನೀಡಲು ನಾನು ಸದಾ ಸಿದ್ಧ” ಎಂದು ಬರೆದುಕೊಂಡಿದ್ದಾರೆ.

ಕಂಗನಾ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಜಾಲತಾಣ ಬಳಕೆದಾರರು ಇದು ನಟಿ ಸೋನಾಕ್ಷಿ ಸಿನ್ಹಾ ಅವರನ್ನೇ ಉದ್ದೇಶಿಸಿ ಹೇಳಿದ ಮಾತುಗಳು ಎಂದು ಅಭಿಪ್ರಾಯಪಡುತ್ತಿದ್ದಾರೆ. ಈ ವಿಷಯವಾಗಿ ಸೋನಾಕ್ಷಿ ಸಿನ್ಹಾ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Kangana Ranaut vs Bollywood 🚨

– ​Yesterday Sonakshi liked an anti-Kangana post.
– ​Today Kangana straight up called her a “pocketmaar.”
– ​Roasted her half pants, ulta cap, and roadside thief behavior.
– ​She used to dance with Kohli and Anushka, now hates them for no reason.
-… pic.twitter.com/fihA3zkL6S

— Aadi (@Gitekimhit) August 3, 2026

Crazy scenes going on, Kangana Vs The whole Urdoowood.🚨💀

> First Sonakshi sinha started liking posts targeting Kangana and added fuel in it.

>Now, Kangana Ranaut openly called her a pocketmar and gutterchap

>She took a dig at Sonakshi Sinha dressing sense and her husband… pic.twitter.com/qudKFvTlFo

— Courageous (@CourageousRo) August 3, 2026

Kangana Ranaut slammed Sonakshi Sinha on her Instagram story.😭🔥

She called Sonakshi Sinha ‘gutt£r-class’ and a pickpocket indirectly. This girl is so savage.

Nowadays she is cooking liberals 😹🔥 pic.twitter.com/226qq12Wrz

— Mohit (@Warlock_mohit) August 3, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular