HomeLatest Newsರಾಜ್ಯದಲ್ಲಿ ಹೇಯ ಕೃತ್ಯ: ಸತ್ತವರಿಗೆ ಗುಂಡಿ ಅಗೆಯಲು ನಿರಾಕರಿಸಿದ ದಲಿತರಿಗೆ ನೀರು ಕೊಡಲ್ಲ, ದಾರಿ ಬಿಡಲ್ಲ...

ರಾಜ್ಯದಲ್ಲಿ ಹೇಯ ಕೃತ್ಯ: ಸತ್ತವರಿಗೆ ಗುಂಡಿ ಅಗೆಯಲು ನಿರಾಕರಿಸಿದ ದಲಿತರಿಗೆ ನೀರು ಕೊಡಲ್ಲ, ದಾರಿ ಬಿಡಲ್ಲ ಎಂದ ಸವರ್ಣೀಯರು; ನಾವೆಲ್ಲ ಒಂದು ಎಂದವರು ಎಲ್ಲಿ?

ಯಾದಗಿರಿ: ಭಾರತ ಸಂವಿಧಾನದ ನಿಯಮಗಳನ್ನು ಅನುಸರಿಸಿ ನಡೆಯುತ್ತಿರುವ ದೇಶವಾದರೂ ಇನ್ನೂ ಸಹ ದಲಿತರ ಮೇಲೆ ಶೋಷಣೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ವಾರಕ್ಕೊಂದಾದರೂ ಅಸ್ಪೃಶ್ಯತೆ ಕುರಿತಾದ ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ.

ಇದೀಗ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲೂ ಇದೇ ರೀತಿಯ ಸುದ್ದಿಯೊಂದು ಕೇಳಿಬಂದಿದ್ದು, ಮೃತಪಟ್ಟವರ ಅಂತ್ಯಕ್ರಿಯೆಗೆ ಗುಂಡಿ ಅಗೆಯಲು ನಿರಾಕರಿಸಿದ ದಲಿತರ ಮೇಲೆ ಸವರ್ಣೀಯರು ದಬ್ಬಾಳಿಕೆ ನಡೆಸಲು ಮುಂದಾದ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುರಪುರ ತಾಲೂಕಿನ ಶಖಾಪುರ ಗ್ರಾಮದಲ್ಲಿ ಕಳೆದ ವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆಗಾಗಿ ಗುಂಡಿ ಅಗೆಯಲು ದಲಿತ ವ್ಯಕ್ತಿಗೆ ಹೇಳಲಾಗಿದೆ. ಈ ಹಿಂದಿನಿಂದಲೂ ಸಾಂಪ್ರದಾಯಕವಾಗಿ ಗುಂಡಿ ಅಗೆಯುವ ಕೆಲಸವನ್ನು ದಲಿತರು ಮಾಡುತ್ತಾ ಬಂದಿದ್ದರಿಂದ ಗುಂಡಿ ಅಗೆಯಲು ಹೇಳಲಾಗಿದ್ದು, ಇದನ್ನು ದಲಿತ ಸಮುದಾಯ ತಿರಸ್ಕರಿಸಿದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಅಲ್ಲದೇ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ನೀವು ಗುಂಡಿ ಅಗೆಯಬೇಕು ಇಲ್ಲದಿದ್ದರೆ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಇನ್ನು ಜಮೀನಿಗೆ ಹಾದು ಹೋಗುವ ರಸ್ತೆಗೂ ನಿರ್ಬಂಧ ಹೇರಲಾಗಿದ್ದು, ಕುಡಿಯುವ ನೀರಿಗೂ ತಡೆ ಒಡ್ಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಕುರಿತು ವಾರ್ತಾಭಾರತಿ ವರದಿ ಮಾಡಿದ್ದು, ನೆಟ್ಟಿಗರು ನಾವೆಲ್ಲರೂ ಒಂದೇ ಎಂದು ಬೊಬ್ಬೆ ಹೊಡೆಯುತ್ತಿದ್ದ ಪಡೆ ಎಲ್ಲಿ, ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ, ದಲಿತರ ಮೇಲೆ ದಬ್ಬಾಳಿಕೆ ಈಗಲೂ ಜಾರಿಯಲ್ಲಿದೆ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular