ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ, ಸಂಪುಟ ವಿಸ್ತರಣೆ ಯಾವಾಗ ಆಗುತ್ತೋ ನನಗೂ ಗೊತ್ತಿಲ್ಲ. ನನ್ನನ್ನು ಕೇಳಿದರೆ ನಾನೇನು ಹೇಳಲಿ? ಎಂದಿದ್ದಾರೆ.
ಮಾಗಡಿಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಸಂಪುಟ ವಿಸ್ತರಣೆ ಯಾವಾಗ ಎಂಬುದು ನನಗೂ ಗೊತ್ತಿಲ್ಲ. ಒಮ್ಮೊಮ್ಮೆ ಹೀಗೆ ಆಗುತ್ತದೆ. ವಿರೋಧ ಪಕ್ಷಗಳ ಟೀಕ್ಲೆ ಎದುರಿಸಬೇಕಾಗುತ್ತದೆ ಎಂದರು.
99 ಪರ್ಸೆಂಟ್ ಸೋಮವಾರ ಸಚಿವ ಸಂಪುಟ ವಿಸ್ತರಣೆ ಎಂದು ಹೇಳಿದ್ದಾರೆ. ಒಂದು ಪರ್ಸೆಂಟ್ ಹೆಚ್ಚು ಕಡಿಮೆಯಾದರೆ ಏನು ಮಾಡೋದು? ಹೈಕಮಾಂಡ್ ಬಳಿಯೇ ಸಚಿವರ ಪಟ್ಟಿ ಇದೆ. ಲಕೋಟೆ ಓಪನ್ ಆದಾಗಲೇ ಯಾರು ಇದ್ದಾರೆ ಎಂಬುದು ಗೊತ್ತಾಗುವುದು. ಹೈಕಮಾಂಡ್ ನಾಯಕರೇ ಅಂತಿಮ ತೀರ್ಮಾನ ಮಾಡುವುದು ಎಂದು ಹೇಳಿದರು.

