90ರ ದಶಕದ ಬಾಲಿವುಡ್‌ನ ಅತ್ಯಂತ ಚರ್ಚಿತ ಜೋಡಿಗಳಾದ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹಾಗೂ ನಟಿ ಊರ್ಮಿಳಾ ಮಟೋಂಡ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಇಬ್ಬರು ಸಿನಿಮಾ ದಿಗ್ಗಜರು ಹಿಂದೆ ರಹಸ್ಯವಾಗಿ ಮದುವೆಯಾಗಿದ್ದರು ಎಂಬ ಬಾಂಬ್ ಒಂದನ್ನು ಹಿರಿಯ ಬಾಲಿವುಡ್ ಪತ್ರಕರ್ತರೊಬ್ಬರು ಸಿಡಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಜ್ಯೋತಿ ವೆಂಕಟೇಶ್ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರೇ ಸ್ವತಃ ನನಗೆ ಈ ವಿಷಯವನ್ನು ತಿಳಿಸಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ‘ಜೆಂಟಲ್‌ಮನ್’ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಸಿಕ್ಕಿದ್ದ ಚಿರಂಜೀವಿ, “ಎಲ್ಲಾ ವಿಷಯಗಳ ಬಗ್ಗೆ ಬರೆಯುವ ನೀವು ರಾಮ್ ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಮದುವೆ ಬಗ್ಗೆ ಯಾಕೆ ಬರೆಯಲಿಲ್ಲ?” ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.
ಆಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಈ ಜೋಡಿಯ ಕಲ್ಯಾಣ ನೆರವೇರಿತ್ತು. ಅಷ್ಟೇ ಅಲ್ಲದೆ ಮದುವೆ ಮಾಡಿಸಿದ ಪೂಜಾರಿಯ ಫೋನ್ ನಂಬರ್ ಸಹ ನನ್ನ ಬಳಿಯಿದೆ ಎಂದು ಚಿರಂಜೀವಿ ಹೇಳಿದ್ದಾಗಿ ಪತ್ರಕರ್ತ ತಿಳಿಸಿದ್ದಾರೆ. ಆದರೆ ಈ ಸುದ್ದಿ ಪ್ರಕಟಿಸುವ ಮುನ್ನ ನಟಿ ಊರ್ಮಿಳಾ ಅವರನ್ನೇ ನೇರವಾಗಿ ಸಂಪರ್ಕಿಸಿದಾಗ, ಅವರು ತೀವ್ರ ಭಾವುಕರಾಗಿ ಈ ರೀತಿ ಬರೆಯಬೇಡಿ ಎಂದು ಮನವಿ ಮಾಡಿದ್ದರಂತೆ. ಇನ್ನೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರ್ದೇಶಕ ಆರ್ ಜಿ ವಿ ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಊರ್ಮಿಳಾ ಅವರು ಈ ಸಂಬಂಧಕ್ಕೆ ಕಾನೂನುಬದ್ಧ ಮದುವೆಯ ಮುದ್ರೆ ಒತ್ತಲು ಬಯಸಿದ್ದರು. ಆದರೆ ಆರ್ ಜಿ ವಿ ಇದಕ್ಕೆ ಒಪ್ಪದಿದ್ದಾಗ ಇಬ್ಬರೂ ದೂರವಾದರು ಎನ್ನಲಾಗಿದೆ. ಈ ಇಬ್ಬರು ‘ರಂಗೀಲಾ’, ‘ಸತ್ಯ’, ‘ದೌಡ್’ ನಂತಹ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆರ್ ಜಿ ವಿ ತಮ್ಮ ಆತ್ಮಚರಿತ್ರೆಯಲ್ಲೂ ಊರ್ಮಿಳಾ ಅವರ ಸೌಂದರ್ಯಕ್ಕೆ ತಾವು ಮಾರುಹೋಗಿದ್ದಾಗಿ ಬರೆದುಕೊಂಡಿದ್ದರು. ಆದರೆ ಈ ಸೀಕ್ರೆಟ್ ಮದುವೆಯ ವಿಚಾರದ ಬಗ್ಗೆ ಆರ್ ಜಿ ವಿ ಆಗಲಿ ಅಥವಾ ಊರ್ಮಿಳಾ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
Jyothi Venkatesh spills tea on SECRET marriage of Ramgopal verma with urmila mamdodkat🤯
They married in Temple, Chiranjevii leaked temple priest’s direct phone number to expose the secret wedding👀
When asked Urmila, she started crying & Ram Gopal Varma replied “no comments” pic.twitter.com/xxeGrfMudP
— Chota Don (@choga_don) July 30, 2026

