HomeLatest Newsಮೂರು ಭಾಗಗಳ ಬದಲಿಗೆ ಎರಡೇ ಭಾಗದಲ್ಲಿ 'ರಾಮಾಯಣ': ನಿರ್ದೇಶಕ ನಿತೀಶ್ ತಿವಾರಿ ನೀಡಿದ ಕಾರಣವೇನು?

ಮೂರು ಭಾಗಗಳ ಬದಲಿಗೆ ಎರಡೇ ಭಾಗದಲ್ಲಿ ‘ರಾಮಾಯಣ’: ನಿರ್ದೇಶಕ ನಿತೀಶ್ ತಿವಾರಿ ನೀಡಿದ ಕಾರಣವೇನು?

ಭಾರತೀಯ ಮಹಾಕಾವ್ಯ ಆಧಾರಿತ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ. ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ತೆರೆಕಾಣಲಿದೆ.

ಇತ್ತೀಚೆಗೆ ನಡೆದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) 2026 ಸಮಾರಂಭದಲ್ಲಿ ಭಾಗವಹಿಸಿದ್ದ ನಿರ್ದೇಶಕ ನಿತೀಶ್ ತಿವಾರಿ, ಈ ಸಿನಿಮಾದ ಆರಂಭಿಕ ಯೋಜನೆಯ ಕುರಿತು ಕುತೂಹಲಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಮೊದಲು ಈ ಕಥೆಯನ್ನು ಮೂರು ಭಾಗಗಳಲ್ಲಿ ತರಲು ನಿರ್ಮಾಪಕರು ಯೋಜಿಸಿದ್ದರು. ಆದರೆ ಆ ಬಳಿಕ ಎರಡು ಭಾಗಗಳಿಗೆ ಸೀಮಿತಗೊಳಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.

ಈ ನಿರ್ಧಾರದ ಕುರಿತು ವಿವರಣೆ ನೀಡಿದ ತಿವಾರಿ, ರಾಮಾಯಣವು ಭಾವನಾತ್ಮಕವಾಗಿ ಅತ್ಯಂತ ಆಳವಾದ ಕಥೆಯಾಗಿದ್ದು, ಪಾತ್ರಗಳಿಗೆ ಮತ್ತು ಸಂಬಂಧಗಳಿಗೆ ಸೂಕ್ತ ನ್ಯಾಯ ಒದಗಿಸಲು ಹೆಚ್ಚಿನ ಸಮಯದ ಅಗತ್ಯವಿತ್ತು. ಕೇವಲ ಒಂದು ಭಾಗದಲ್ಲಿ ಕಥೆಯನ್ನು ಮುಗಿಸಿದ್ದರೆ ಭಾವನಾತ್ಮಕ ಅಂಶಗಳು ಕೈತಪ್ಪಿಹೋಗುತ್ತಿದ್ದವು. ಆದರೆ ಮೂರು ಭಾಗಗಳಾಗಿ ಮಾಡಿದರೆ, ಮೂರನೇ ಭಾಗವು ಕೇವಲ ಯುದ್ಧದ ಸನ್ನಿವೇಶಗಳಿಗೇ ಸೀಮಿತವಾಗಿ ಭಾವನಾತ್ಮಕ ಸನ್ನಿವೇಶಗಳಿಗೆ ಜಾಗವಿಲ್ಲದಂತಾಗುತ್ತಿತ್ತು. ಹೀಗಾಗಿ ಸಮಗ್ರ ಚರ್ಚೆಯ ನಂತರ ಎರಡು ಭಾಗಗಳ ರೂಪದಲ್ಲಿ ತರುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾವಣನ ಪಾತ್ರದಲ್ಲಿ ನಟ ಯಶ್ ಅವರ ಉಪಸ್ಥಿತಿ ಪ್ರಮುಖ ಆಕರ್ಷಣೆಯಾಗಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ದೃಶ್ಯ ವೈಭವದಲ್ಲಿ ಸನ್ನಿ ದೇವೋಲ್, ವಿವೇಕ್ ಒಬೆರಾಯ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. IMAX ತಂತ್ರಜ್ಞಾನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular