ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವುದು ಸಾಮಾನ್ಯ. ಆದರೆ ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳುವುದೂ ಅಷ್ಟೇ ಮುಖ್ಯ. ನೀವು ಉಳಿತಾಯ ಖಾತೆ (Savings Account) ತೆರೆಯುವಾಗ ನಿಮ್ಮ ವಾಸಿಸುವ ಪ್ರದೇಶ (ಗ್ರಾಮೀಣ, ಅರೆನಗರ ಅಥವಾ ನಗರ/ಮೆಟ್ರೋ) ಹಾಗೂ ಖಾತೆಯ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಮೊತ್ತ ಬದಲಾಗುತ್ತದೆ. ಈ ನಿಯಮ ಪಾಲಿಸದಿದ್ದರೆ ಬ್ಯಾಂಕ್‌ಗಳು ‘ನಾನ್-ಮೈಂಟೆನನ್ಸ್ ಚಾರ್ಜ್’ (Non-Maintenance Charges) ಹೆಸರಿನಲ್ಲಿ ದಂಡ ವಿಧಿಸುತ್ತವೆ.
ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕರೂ ಕನಿಷ್ಠ ಬ್ಯಾಲೆನ್ಸ್ ನಿಯಮಗಳ ಬಗ್ಗೆ ತಿಳಿದಿರಬೇಕು. ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ, ವಿವಿಧ ಬ್ಯಾಂಕ್‌ಗಳು ₹10ರಿಂದ ₹600ರವರೆಗೆ ದಂಡ ವಿಧಿಸುತ್ತವೆ. ಈ ದಂಡದ ಜೊತೆಗೆ 18% ಜಿಎಸ್‌ಟಿಯೂ ಅನ್ವಯವಾಗುವುದರಿಂದ, ಅನಗತ್ಯ ವೆಚ್ಚ ತಪ್ಪಿಸಲು ನಿಮ್ಮ ಖಾತೆಗೆ ಅನ್ವಯಿಸುವ ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ.
ಪ್ರಮುಖ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ವಿಧಿಸುವ ಶುಲ್ಕದ ವಿವರ ಇಲ್ಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI – Savings Plus)
ಗ್ರಾಮೀಣ ಪ್ರದೇಶ: ಗರಿಷ್ಠ ₹10
ಅರೆನಗರ ಪ್ರದೇಶ: ಗರಿಷ್ಠ ₹12
ನಗರ/ಮೆಟ್ರೋ ಪ್ರದೇಶ: ಗರಿಷ್ಠ ₹15
HDFC ಬ್ಯಾಂಕ್ (Regular Savings Account)
ಗ್ರಾಮೀಣ ಪ್ರದೇಶ: ಗರಿಷ್ಠ ₹450
ಅರೆನಗರ ಪ್ರದೇಶ: ಗರಿಷ್ಠ ₹300
ನಗರ/ಮೆಟ್ರೋ ಪ್ರದೇಶ: ಗರಿಷ್ಠ ₹600
ಇಂಡಸ್‌ಇಂಡ್ ಬ್ಯಾಂಕ್ (Privilege Savings Account)
ಅಗತ್ಯವಿರುವ ಬ್ಯಾಲೆನ್ಸ್ ಕೊರತೆಯ 5%
ಕನಿಷ್ಠ ₹100 ರಿಂದ ಗರಿಷ್ಠ ₹500 ವರೆಗೆ
ಯೆಸ್ ಬ್ಯಾಂಕ್ (Savings Advantage Account)
ತಿಂಗಳಿಗೆ ಗರಿಷ್ಠ ₹500
ICICI ಬ್ಯಾಂಕ್ (Regular Savings Account)
ಗ್ರಾಮೀಣ ಪ್ರದೇಶ: ಅಗತ್ಯ AMB (Average Monthly Balance) ಕೊರತೆಯ 5%
ಅರೆನಗರ/ನಗರ/ಮೆಟ್ರೋ: ₹100 ಜೊತೆಗೆ ಕೊರತೆಯ 5%
ಪಂಜಾಬ್ ನ್ಯಾಷನಲ್ ಬ್ಯಾಂಕ್ (Savings Deposit General)
ಶಾಖೆಯಿರುವ ಪ್ರದೇಶ ಹಾಗೂ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (QAB) ಕೊರತೆಯ ಆಧಾರದ ಮೇಲೆ ₹25 ರಿಂದ ₹250 ವರೆಗೆ.
ಕೋಟಕ್ ಮಹೀಂದ್ರಾ ಬ್ಯಾಂಕ್ (Edge Savings Account)
ತಿಂಗಳಿಗೆ ಗರಿಷ್ಠ ₹500
ಖಾತೆದಾರರು ಗಮನಿಸಬೇಕಾದ ಪ್ರಮುಖ ಅಂಶಗಳು
ಸರಾಸರಿ ಬ್ಯಾಲೆನ್ಸ್ ಹೇಗೆ ಲೆಕ್ಕ ಹಾಕಲಾಗುತ್ತದೆ ?
ಹೆಚ್ಚಿನ ಬ್ಯಾಂಕ್‌ಗಳು Average Monthly Balance (AMB) ಅಥವಾ Quarterly Average Balance (QAB) ಆಧಾರದಲ್ಲಿ ಬ್ಯಾಲೆನ್ಸ್ ಲೆಕ್ಕ ಹಾಕುತ್ತವೆ. ಅಂದರೆ ತಿಂಗಳು ಅಥವಾ ತ್ರೈಮಾಸಿಕದಲ್ಲಿ ಪ್ರತಿದಿನ ಖಾತೆಯಲ್ಲಿದ್ದ ಹಣದ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಪ್ರತಿದಿನವೂ ನಿಗದಿತ ಮೊತ್ತ ಇರಲೇಬೇಕೆಂಬ ನಿಯಮವಿಲ್ಲ.ಮೇಲಿನ ಎಲ್ಲಾ ದಂಡದ ಮೊತ್ತಗಳಿಗೆ 18% ಜಿಎಸ್‌ಟಿ (GST) ಹೆಚ್ಚುವರಿಯಾಗಿ ಅನ್ವಯವಾಗುತ್ತದೆ.
ಜೀರೋ ಬ್ಯಾಲೆನ್ಸ್ ಖಾತೆಗಳಿಗೆ ವಿನಾಯಿತಿ
ಪ್ರಧಾನಮಂತ್ರಿ ಜನಧನ್ ಯೋಜನೆ (PMJDY) ಹಾಗೂ Basic Savings Bank Deposit Account (BSBDA) ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವಿಲ್ಲ. ಆದ್ದರಿಂದ ಈ ಖಾತೆಗಳಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಅನಗತ್ಯ ದಂಡದಿಂದ ತಪ್ಪಿಸಿಕೊಳ್ಳಲು, ನಿಮ್ಮ ಉಳಿತಾಯ ಖಾತೆಗೆ ಅನ್ವಯಿಸುವ ಕನಿಷ್ಠ ಬ್ಯಾಲೆನ್ಸ್ ಎಷ್ಟು ಎಂಬುದನ್ನು ತಿಳಿದುಕೊಂಡು, ಅದನ್ನು ನಿಯಮಿತವಾಗಿ ಕಾಯ್ದುಕೊಳ್ಳುವುದು ಉತ್ತಮ.

