ಮೈಸೂರು ನಗರದ ಸಮೀಪವಿರುವ ಚಾಮುಂಡಿ ಬೆಟ್ಟದಲ್ಲಿ ನಿನ್ನೆ ಮೂರನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯಿಂದಲೇ ಜನರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಚಾಮುಂಡಿ ದೇವಿಯ ದರ್ಶನ ಪಡೆದರು.
ಇನ್ನು ಪ್ರತಿ ವಾರದಂತೆ ಈ ವಾರವೂ ರಾಜಕಾರಣಿಗಳು, ಕೆಲ ಸೆಲೆಬ್ರಿಟಿಗಳು ವಿಶೇಷ ಪ್ರವೇಶ ಪಡೆದುಕೊಂಡು ಸರಾಗವಾಗಿ ದರ್ಶನ ಪಡೆದುಕೊಂಡರು. ಇತ್ತ ಜನ ಸಾಮಾನ್ಯರು ಕ್ಯೂನಲ್ಲಿ ಗಂಟೆಗಟ್ಟಲೆ ಕಾದು ದೇವಿಯ ಕೃಪೆಗೆ ಪಾತ್ರರಾದರು.
ಇದೇ ಸಾಲಿನಲ್ಲಿ ನಿಂತಿದ್ದ ದರ್ಶನ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಫೋಟೊವನ್ನು ಹೊತ್ತು ತಂದು ಅಭಿಮಾನ ಮೆರೆದಿದ್ದ. ಆದರೆ ಇದನ್ನು ಕಂಡ ಪೊಲೀಸ್ ಪೇದೆ ದರ್ಶನ್ ಫೋಟೊವನ್ನು ಅಭಿಮಾನಿಯಿಂದ ಕಸಿದುಕೊಂಡಿದ್ದು, ಈ ರೀತಿ ದರ್ಶನ್ ಫೋಟೊ ಕಸಿದುಕೊಳ್ಳಲಾಗಿದೆ ಎಂದು ಗ್ಯಾರಂಟಿ ನ್ಯೂಸ್ ವಿಡಿಯೊ ಹಂಚಿಕೊಂಡಿದೆ.
ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಅಭಿಮಾನಿಗಳು ಫೋಟೊ ಕಿತ್ತುಕೊಳ್ಳಬಹುದು, ಆದರೆ ಮನಸ್ಸಿನಲ್ಲಿರುವ ಅಭಿಮಾನವನ್ನು ಕಿತ್ತುಕೊಳ್ಳಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
https://www.instagram.com/reel/DbchAsPP_qb

