HomeLatest Newsಕೇರಳದಲ್ಲಿ ಭಾರಿ ಮಳೆಗೆ ಭೀಕರ ಭೂಕುಸಿತ: ಮೂವರು ದುರ್ಮರಣ; ಹಲವರು ನಾಪತ್ತೆ

ಕೇರಳದಲ್ಲಿ ಭಾರಿ ಮಳೆಗೆ ಭೀಕರ ಭೂಕುಸಿತ: ಮೂವರು ದುರ್ಮರಣ; ಹಲವರು ನಾಪತ್ತೆ

ತಿರುವನಂತಪುರಂ: ಕೇರಳದಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿ ಅನಾಹುತಗಳು ಉಂಟಾಗಿವೆ. ಇಡುಕ್ಕಿ, ಕೊಟ್ಟಾಯಂ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.

ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಂತರ ಇಡುಕ್ಕಿ, ಕೊಟ್ಟಾಯಂ ಮತ್ತು ಪಟ್ಟಣಂತಿಟ್ಟದಲ್ಲಿ ಭೂಕುಸಿತ ವರದಿಯಾಗಿದೆ. ಮುಟ್ಟೋಮ್ ಚಲ್ಲವಾಯಲ್ ಮತ್ತು ಅಡೂರ್ ಬೆಟ್ಟದ ತೋಡುಪುಳ ಬಳಿ ಎರಡು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಪೂಂಜಾರ್ ಪಯ್ಯನಿತೋಟ್ಟಂ ಮತ್ತು ಪಟ್ಟನಂತಿಟ್ಟ ಥೂಂಪಕುಲಂನಲ್ಲಿಯೂ ಭೂಕುಸಿತ ಸಂಭವಿಸಿದೆ.

ಕುಡಯತ್ತೂರಿನ ಅಡೂರ್ ಬೆಟ್ಟದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮಶಿಕಲ್ಲೆಲ್ ರವಿ ನಾರಾಯಣನ್ ಅವರ ಪತ್ನಿ ಸುಮತಿ ಮೃತ ದುರ್ದೈವಿ. ಅವರ ಮಗ ರತೀಶ್ ಅವರನ್ನು ರಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಗಮೋನ್‌ನ ಕೊಲಾಹಲಮೇಡುವಿನಲ್ಲಿ ಪ್ರಭಾಕರನ್ ನಾಯರ್ (72) ಅವರ ಮನೆ ಭೂಕುಸಿತಕ್ಕೊಳಗಾಗಿದೆ. ಪ್ರಭಾಕರನ್ ನಾಯರ್ ಸಾವನ್ನಪ್ಪಿದ್ದಾರೆ. ಕೊಟ್ಟಾಯಂನ ಪೂಂಜಾರ್‌ನಲ್ಲಿರುವ ಮನೆಯ ಮೇಲೆ ಭೂಕುಸಿತ ಸಂಭವಿಸಿ ಇಡೀ ಕುಟುಣ್ಬ ಸದಸ್ಯರೇ ನಾಪತ್ತೆಯಾಗಿದ್ದಾರೆ. ಯುವತಿ ಜೋಸೆಫೀನ್ ಜಾನಿ ಅವರ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯ ಹಲವಾರು ಭಾಗಗಳಲ್ಲಿ ಇದೇ ರೀತಿ ಭೂಕುಸಿತ ಸಂಭವಿಸಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಕೊಟ್ಟರಕರ-ದಿಂಡಿಗಲ್ ರಾಷ್ಟ್ರೀಯ ಹೆದ್ದರಿಯಲ್ಲಿಯೂ ಭೂಕುಸಿತ ಸಾಂಭವಿಸಿದೆ. ಒಂದೆಡೆ ಪಂಪಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ಅಬ್ಬರಕ್ಕೆ ಈ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಲವೆಡೆ ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಜನರು ಮನೆಯ ಟೆರೇಸ್ ಮೇಲೆ ನಿಂತು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular