ಕಳೆದ ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದು, ಆಭರಣ ಪ್ರಿಯರಲ್ಲಿ ಕೊಂಚ ಭರವಸೆ ಮೂಡಿಸಿದ್ದ ಬಂಗಾರದ ಬೆಲೆ ಇದೀಗ ಮತ್ತೆ ಗಗನಮುಖಿಯಾಗಿದೆ. ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಅಮೆರಿಕದ ಫೆಡರಲ್ ರಿಸರ್ವ್ (US Fed Reserve) ತನ್ನ ಪ್ರಮುಖ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಜಾಗತಿಕ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಗ್ರಾಫ್ ದಿಢೀರ್ ಏರಿಕೆಯಾಗಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದಿರುವ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯ ವಾತಾವರಣದಿಂದಾಗಿ ಹೂಡಿಕೆದಾರರು ಸುರಕ್ಷಿತ ಮಾರ್ಗವಾಗಿ ಬಂಗಾರದತ್ತ ಧಾವಿಸುತ್ತಿರುವುದು ಈ ಬೆಲೆ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.
ಬೆಂಗಳೂರಿನಲ್ಲಿ ಜುಲೈ 31ರ ಇಂದಿನ ದರ ವಿವರ:
೨೨ ಕ್ಯಾರಟ್ ಆಭರಣ ಚಿನ್ನ: ನಿನ್ನೆ ಗುರುವಾರ ಪ್ರತಿ 10 ಗ್ರಾಂಗೆ ಭಾರಿ ₹750 ಏರಿಕೆಯಾಗಿದ್ದ ಆಭರಣ ಚಿನ್ನದ ಬೆಲೆ, ಇಂದು ಶುಕ್ರವಾರ ಮತ್ತೆ ₹250 ಹೆಚ್ಚಳವಾಗಿದೆ. ಇದರೊಂದಿಗೆ ನಗರದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ ₹1,32,550 ರಂತೆ ವಹಿವಾಟು ನಡೆಸುತ್ತಿದೆ.
೨೪ ಕ್ಯಾರಟ್ ಅಪರಂಜಿ ಚಿನ್ನ: ನಿನ್ನೆ ₹820 ಹೆಚ್ಚಾಗಿದ್ದ 24 ಕ್ಯಾರಟ್ ಶುದ್ಧ ಚಿನ್ನದ ದರದಲ್ಲಿ ಇಂದು ಮತ್ತೆ ₹270 ಏರಿಕೆಯಾಗಿದೆ. ಪ್ರಸ್ತುತ 10 ಗ್ರಾಂ ಅಪರಂಜಿ ಚಿನ್ನದ ದರ ₹1,44,600 ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಸ್ಥಿರತೆ: ಕೊಂಚ ನಿರಾಳತೆ
ಬಂಗಾರದ ದರ ದಿನದಿಂದ ದಿನಕ್ಕೆ ಏರುತ್ತಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಏರಿಳಿತ ಕಾಣಿಸದೆ ಸ್ಥಿರತೆ ಕಾಯ್ದುಕೊಂಡಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಬೆಂಗಳೂರಿನಲ್ಲಿ ಇಂದು ಜುಲೈ 31 ರಂದು 1 ಕೆಜಿ ಬೆಳ್ಳಿ ಬೆಲೆ ₹2.35 ಲಕ್ಷ ದಲ್ಲಿ ಮುಂದುವರಿದಿದೆ.
ಅಮೆರಿಕ ಫೆಡ್ ನಿರ್ಧಾರದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ (Spot Gold) ಬೆಲೆ ಪ್ರತಿ ಔನ್ಸ್ಗೆ ಸುಮಾರು 44 ಡಾಲರ್‌ಗಳಷ್ಟು ಜಿಗಿತ ಕಂಡಿದ್ದು, ಪ್ರಸ್ತುತ 4,083 ಡಾಲರ್‌ಗೆ ತಲುಪಿದೆ. ಇತ್ತ ಸ್ಪಾಟ್ ಸಿಲ್ವರ್ (Spot Silver) ದರ ಶೇಕಡಾ 1.47 ರಷ್ಟು ಏರಿಕೆಯಾಗಿ ಔನ್ಸ್‌ಗೆ 59 ಡಾಲರ್ ಮಟ್ಟದಲ್ಲಿದೆ
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ಚೆನ್ನೈ – ₹14,460
ಮುಂಬೈ – ₹14,460
ದೆಹಲಿ – ₹14,460
ಕೋಲ್ಕತಾ – ₹14,460
ಹೈದರಾಬಾದ್ – ₹14,460

