HomeLatest NewsBREAKING : ಜಮ್ಮು-ಕಾಶ್ಮೀರ CM ಒಮರ್ ಅಬ್ದುಲ್ಲಾ–ಪಾಯಲ್ ದಾಂಪತ್ಯಕ್ಕೆ ಅಂತ್ಯ: ವಿಚ್ಛೇದನಕ್ಕೆ ಸುಪ್ರೀಂಕೋರ್ಟ್ ಅನುಮೋದನೆ

BREAKING : ಜಮ್ಮು-ಕಾಶ್ಮೀರ CM ಒಮರ್ ಅಬ್ದುಲ್ಲಾ–ಪಾಯಲ್ ದಾಂಪತ್ಯಕ್ಕೆ ಅಂತ್ಯ: ವಿಚ್ಛೇದನಕ್ಕೆ ಸುಪ್ರೀಂಕೋರ್ಟ್ ಅನುಮೋದನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರಿಂದ ದೂರವಾಗಿದ್ದ ಪತ್ನಿ ಪಾಯಲ್ ಅಬ್ದುಲ್ಲಾ ಅವರ ವಿವಾಹ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮೋದನೆ ನೀಡಿದೆ. ಪರಸ್ಪರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ಇಬ್ಬರೂ ತೀರ್ಮಾನಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡುವುದಾಗಿ ಹೇಳಿದೆ.

ಒಮರ್ ಅಬ್ದುಲ್ಲಾ, ತಮ್ಮ ವಿವಾಹವನ್ನು ರದ್ದುಪಡಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆಯ ವೇಳೆ, ಇಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಹಿಂಪಡೆಯಲು ಸಹ ಒಪ್ಪಿಕೊಂಡಿದ್ದಾರೆ.

ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅವರು 1994ರಲ್ಲಿ ದೆಹಲಿಯ ಓಬೆರಾಯ್ ಹೋಟೆಲ್‌ನಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಬಳಿಕ ವಿವಾಹವಾಗಿದ್ದರು. ಈ ದಂಪತಿಗೆ ಜಹೀರ್ ಮತ್ತು ಜಮೀರ್ ಎಂಬ ಇಬ್ಬರು ಪುತ್ರರಿದ್ದಾರೆ.ಇಬ್ಬರೂ 2009ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, 2011ರಲ್ಲಿ ಒಮರ್ ಅಬ್ದುಲ್ಲಾ ತಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದರು. ಸುಮಾರು 17 ವರ್ಷಗಳ ದಾಂಪತ್ಯ ಜೀವನ ಬಳಿಕ ಇಬ್ಬರೂ ಬೇರ್ಪಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಂಪತಿಯ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, “ಇಬ್ಬರೂ ಈಗ ಸ್ವಾತಂತ್ರ್ಯವನ್ನು ಅಪ್ಪಿಕೊಂಡಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ತಿಂಗಳ ಆರಂಭದಲ್ಲೇ ಸಂವಿಧಾನದ 142ನೇ ವಿಧಿಯಡಿ ಪರಸ್ಪರ ಒಪ್ಪಿಗೆಯ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿತ್ತು ಎಂದೂ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ, “ಒಪ್ಪಂದದ ಷರತ್ತುಗಳಿಗೆ ಅನುಗುಣವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸುತ್ತೇವೆ” ಎಂದು ತಿಳಿಸಿತು.

ಈ ಹಿಂದೆ ನಡೆದ ವಿಚಾರಣೆಯಲ್ಲಿ, ಕಳೆದ 16 ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿರುವುದನ್ನು ಉಲ್ಲೇಖಿಸಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧವನ್ನು “ಸಂಪೂರ್ಣವಾಗಿ ಮುಗಿದಿರುವ ದಾಂಪತ್ಯ” ಎಂದು ಅಭಿಪ್ರಾಯಪಟ್ಟಿತ್ತು. ಒಮರ್ ಅಬ್ದುಲ್ಲಾ ಆರಂಭದಲ್ಲಿ ಪತ್ನಿ ತೊರೆದು ಹೋಗಿರುವುದು (Desertion) ಹಾಗೂ ಕ್ರೌರ್ಯ (Cruelty) ಆಧಾರದ ಮೇಲೆ ವಿಚ್ಛೇದನ ಕೋರಿದ್ದರು. ಆದರೆ, 2016ರಲ್ಲಿ ಕುಟುಂಬ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ದೆಹಲಿ ಹೈಕೋರ್ಟ್ ಕೂಡ 2023ರ ಡಿಸೆಂಬರ್‌ನಲ್ಲಿ ಕುಟುಂಬ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿತ್ತು.

ಹೈಕೋರ್ಟ್, ಪಾಯಲ್ ಅವರಿಗೆ ತಿಂಗಳಿಗೆ ₹1.5 ಲಕ್ಷ ಜೀವನಾಂಶ ಹಾಗೂ ಪುತ್ರನ ಶಿಕ್ಷಣ ವೆಚ್ಚಕ್ಕಾಗಿ ₹60 ಸಾವಿರ ಪಾವತಿಸುವಂತೆ ಒಮರ್ ಅಬ್ದುಲ್ಲಾಗೆ ನಿರ್ದೇಶನ ನೀಡಿತ್ತು. ಈಗ ಇಬ್ಬರೂ ಸೌಹಾರ್ದಯುತವಾಗಿ ಎಲ್ಲ ವಿವಾದಗಳನ್ನು ಬಗೆಹರಿಸಿಕೊಂಡು, ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಸಮ್ಮತಿಸಿರುವುದರಿಂದ, ಸಂವಿಧಾನದ 142ನೇ ವಿಧಿಯಡಿ ಸುಪ್ರೀಂ ಕೋರ್ಟ್ ವಿವಾಹವನ್ನು ಅಧಿಕೃತವಾಗಿ ರದ್ದುಪಡಿಸಲು ನಿರ್ಧರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular