HomeLatest Newsಮೀಸಲಾತಿ ತೆಗೆಯಲು ಹೋರಾಟ ಬೇಕಿಲ್ಲ, ಈ 5 ಸ್ಟೆಪ್ಸ್ ಅನುಸರಿಸಿದರೆ ಸಾಕು: ದೇವಸ್ಥಾನದಲ್ಲಿ ದಲಿತರು ಪೂಜೆ...

ಮೀಸಲಾತಿ ತೆಗೆಯಲು ಹೋರಾಟ ಬೇಕಿಲ್ಲ, ಈ 5 ಸ್ಟೆಪ್ಸ್ ಅನುಸರಿಸಿದರೆ ಸಾಕು: ದೇವಸ್ಥಾನದಲ್ಲಿ ದಲಿತರು ಪೂಜೆ ಮಾಡಬೇಕು, ಮಿಕ್ಕಿದ್ದು…; ಯುವತಿಯ ವಿಡಿಯೊ ವೈರಲ್!

ನೀಟ್ ಅಕ್ರಮದ ವಿರುದ್ಧ ಯುವ ಜನತೆ ಹೋರಾಟ ಮಾಡಿ ಗೆಲುವು ಸಾಧಿಸಿದ ಬೆನ್ನಲ್ಲೇ ಗುಂಪೊಂದು ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದುಹಾಕಬೇಕು ಎಂದು ಪಟ್ಟುಹಿಡಿದು ಆಂದೋಲನವೊಂದನ್ನು ಆರಂಭಿಸಿದೆ.

ಇನ್ಟ್ರಾಗ್ರಾಮ್‌ನಲ್ಲಿ ‘ರಿಸರ್ವೇಷನ್ ಹಠಾವೋ ಆಂದೋಲನ’ ಎಂಬ ಪೇಜ್ ಆರಂಭಿಸಿ ಅದರಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದುಹಾಕಲು ಏನು ಮಾಡಬೇಕು ಎಂದು ವಿಡಿಯೊಗಳನ್ನು ಮಾಡಿ ಹರಿಬಿಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಜಾತಿ ಪದ್ಧತಿ ವಿರೋಧಿಗಳು ಮಾತ್ರ ಇದನ್ನು ಒಪ್ಪುತ್ತಿಲ್ಲ, ಮೀಸಲಾತಿ ಬಂದದ್ದೇ ಸವರ್ಣೀಯರು ಜಾತಿ ನಿಂದನೆ ಮಾಡಿ ಶೋಷಣೆ ಮಾಡಿದ್ದರಿಂದ, ಹೀಗಾಗಿ ಜಾತಿ ಪದ್ಧತಿಯನ್ನು ನಾಶ ಮಾಡಿಬಿಟ್ಟರೆ ಆಗ ಯಾವ ಜಾತಿಯೂ ಇರುವುದಿಲ್ಲ, ಜಾತಿ ಆಧಾರಿತ ಮೀಸಲಾತಿಯೂ ಇರುವುದಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ರಿಸರ್ವೇಷನ್ ಹಠಾವೋ ಆಂದೋಲನದ ಕುರಿತು ಜಾತಿ ಪಿಡುಗಿನ ವಿರುದ್ಧ ಇರುವವರು ಹಲವು ವಿಡಿಯೊಗಳನ್ನು ಮಾಡಿದ್ದು, ಈ ಪೈಕಿ ಕನ್ನಡದ ಯುವತಿಯೊಬ್ಬರು ಮಾಡಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಯುವತಿ ರಿಸರ್ವೇಷನ್ ತೆಗೆಯಲು ಇಷ್ಟೆಲ್ಲ ಆಂದೋಲನ ಮಾಡುವ ಅಗತ್ಯವಿಲ್ಲ, ನಾನು ಹೇಳುವ ಐದು ಹಂತಗಳನ್ನು ಅನುಸರಿಸಿ ಸಾಕು ಎಂದು ಪಟ್ಟಿಯನ್ನು ನೀಡಿದ್ದಾರೆ.

1. ಬ್ರಾಹ್ಮಣ ವರ್ಗ ಏನು ಕೆಲಸ ಮಾಡುತ್ತಿದೆಯೋ ಆ ಕೆಲಸ ಮಾಡುವ ಅವಕಾಶ ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರಿಗೆ ಸಿಗಬೇಕು.

2. ಅದೇ ರೀತಿ ಶೂದ್ರ ವರ್ಗ ಏನು ಕೆಲಸ ಮಾಡುತ್ತೋ ಆ ಅವಕಾಶ ಉಳಿದ ಮೂರು ವರ್ಗಕ್ಕೂ ಸಿಗಬೇಕು.

3. ಬಸವಣ್ಣನವರ ಸಿದ್ಧಾಂತದಂತೆ ಅಂತರ್ಜಾತಿ ವಿವಾಹಗಳು ನಡೆಯಬೇಕು.

4. ಹೆಸರಿನ ಪಕ್ಕ ಇರುವ ಜಾತಿ ಹೆಸರುಗಳನ್ನು ತೆಗೆದುಹಾಕಬೇಕು.

5. ಜಾತಿ ಪದ್ಧತಿಯ ಅಟ್ಟಹಾಸವನ್ನು ಬಿಚ್ಚಿಟ್ಟ ಪುಸ್ತಕಗಳನ್ನು ಓದಿ.

ಇಷ್ಟು ಮಾಡಿ ಸಾಕು ಮೀಸಲಾತಿ ತಾನಾಗೇ ಹೋಗಲಿದೆ ಎಂದು ತಿಳಿಸಿದ್ದಾರೆ.

https://x.com/KannadaVaccine/status/2082823690895634462?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular