HomeLatest Newsನಿಯಮ ಉಲ್ಲಂಘನೆ, ಮೈದಾನದಲ್ಲಿ ಗಲಾಟೆ: ಫಿಫಾ ವಿಶ್ವಕಪ್ ಬೆನ್ನಲ್ಲೇ ಅರ್ಜೆಂಟೀನಾ ತಂಡಕ್ಕೆ ಶುರುವಾಯ್ತು ಹೊಸ ಸಂಕಷ್ಟ!

ನಿಯಮ ಉಲ್ಲಂಘನೆ, ಮೈದಾನದಲ್ಲಿ ಗಲಾಟೆ: ಫಿಫಾ ವಿಶ್ವಕಪ್ ಬೆನ್ನಲ್ಲೇ ಅರ್ಜೆಂಟೀನಾ ತಂಡಕ್ಕೆ ಶುರುವಾಯ್ತು ಹೊಸ ಸಂಕಷ್ಟ!

2026ರ ಫಿಫಾ ವಿಶ್ವಕಪ್ ಟೂರ್ನಿಯ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ (ಎಎಫ್‌ಎ) ಮತ್ತು ಆ ದೇಶದ ಪ್ರಮುಖ ಆಟಗಾರರ ವಿರುದ್ಧ ಫಿಫಾ ಶಿಸ್ತು ಸಮಿತಿ ತನಿಖೆಗೆ ಆದೇಶಿಸಿದೆ. ಜಾಗತಿಕ ಫುಟ್‌ಬಾಲ್ ನಿಯಂತ್ರಣ ಮಂಡಳಿಯಾದ ಫಿಫಾ, ಈ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿರುವುದಾಗಿ ತಿಳಿಸಿದೆ.

ಟೂರ್ನಿಯ ವಿವಿಧ ಪಂದ್ಯಗಳ ಸಂದರ್ಭದಲ್ಲಿ ಅರ್ಜೆಂಟೀನಾ ತಂಡದ ಬೆಂಬಲಿಗರು ಮತ್ತು ಆಡಳಿತ ಮಂಡಳಿ ಕ್ರೀಡಾ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಕ್ರೀಡಾಂಗಣದಲ್ಲಿ ವರ್ಣಭೇದ ಹಾಗೂ ತಾರತಮ್ಯದ ಘೋಷಣೆಗಳನ್ನು ಕೂಗಿದ್ದು, ಆಟಗಾರರು ಮತ್ತು ಪ್ರೇಕ್ಷಕರು ಸೂಕ್ತವಲ್ಲದ ಸಂದೇಶಗಳನ್ನು ಪ್ರದರ್ಶಿಸಿದ್ದು, ಮೈದಾನಕ್ಕೆ ವಸ್ತುಗಳನ್ನು ಎಸೆದದ್ದು ಮತ್ತು ಪಂದ್ಯಗಳ ಆರಂಭ ವಿಳಂಬಗೊಳಿಸಿದ್ದಕ್ಕಾಗಿ ಶಿಸ್ತು ಕ್ರಮ ಎದುರಿಸಬೇಕಾಗಿದೆ. ಜೊತೆಗೆ ಭದ್ರತಾ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಮತ್ತು ಕ್ರೀಡಾಕೂಟವನ್ನು ಕ್ರೀಡೇತರ ಉದ್ದೇಶಗಳಿಗೆ ಬಳಸಿಕೊಂಡಿರುವುದೂ ತನಿಖೆಯ ವ್ಯಾಪ್ತಿಗೆ ಬಂದಿದೆ.

ಇಷ್ಟೇ ಅಲ್ಲದೆ, ಜುಲೈ 19ರಂದು ನಡೆದ ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಫೈನಲ್ ಪಂದ್ಯದ ಮುಕ್ತಾಯದ ನಂತರ ಮೈದಾನದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತ್ಯೇಕ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ರೋಚಕ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಅಂತರದಿಂದ ಗೆದ್ದು ಚಾಂಪಿಯನ್ ಆಗಿತ್ತು. ಪಂದ್ಯದ ಬಳಿಕ ಅರ್ಜೆಂಟೀನಾ ಆಟಗಾರರು ಮತ್ತು ಸಿಬ್ಬಂದಿ, ಸ್ಪೇನ್ ಆಟಗಾರರೊಂದಿಗೆ ಜಗಳಕ್ಕೆ ಬಿದ್ದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಿಫಾ ಶಿಸ್ತು ಹಾಗೂ ನೈತಿಕ ಸಂಶೋಧಕರ ವರದಿ ಆಧಾರದ ಮೇಲೆ ಅರ್ಜೆಂಟೀನಾದ ಆಟಗಾರರಾದ ನಹುಯೆಲ್ ಮೋಲಿನಾ, ಲಿಯಾಂಡ್ರೊ ಪರೆಡೆಸ್, ತಿಯಾಗೊ ಅಲ್ಮಾಡ ಹಾಗೂ ಸಹಾಯಕ ಸಿಬ್ಬಂದಿ ರೊಬೆರ್ಟೊ ಅಯಾಲ ವಿರುದ್ಧ ಹಲ್ಲೆಯ ಯತ್ನ ಮತ್ತು ಅಸಭ್ಯ ವರ್ತನೆಯ ಆರೋಪ ಹೊರಿಸಲಾಗಿದೆ. ಇದೇ ವೇಳೆ ಸ್ಪೇನ್ ದೇಶದ ಯುವ ಆಟಗಾರ ಗಾವಿ ವಿರುದ್ಧವೂ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ ಆರೋಪದಡಿ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ವಿಚಾರವಾಗಿ ಸಂಬಂಧಪಟ್ಟ ಆಟಗಾರರು ಹಾಗೂ ಸಂಸ್ಥೆಗೆ ತಮ್ಮ ಸ್ಪಷ್ಟನೆ ನೀಡಲು ಫಿಫಾ ಅವಕಾಶ ನೀಡಿದೆ. ಅವರಿಂದ ಹೇಳಿಕೆಗಳನ್ನು ಪಡೆದ ನಂತರ ಫಿಫಾ ಶಿಸ್ತು ಸಮಿತಿಯು ತನ್ನ ಅಂತಿಮ ತೀರ್ಪನ್ನು ಪ್ರಕಟಿಸಲಿದೆ.

FIFA has officially opened disciplinary proceedings against Argentina following the 2026 World Cup! 🚨🇦🇷

Charges include:
• Displaying a political banner (“Las Malvinas Son Argentinas”) after beating England
• Assault charges for Leandro Paredes (3 counts) & Nahuel Molina (2… pic.twitter.com/q1v001IvcS

— O-O-P (@okiTwits) July 29, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular