HomeEntertainmentಪ್ರಜ್ವಲ್ ದೇವರಾಜ್ ಕರಾವಳಿಗೆ ಭರ್ಜರಿ ರೆಸ್ಪಾನ್ಸ್: 6 ದಿನಗಳಲ್ಲಿ 5 ಲಕ್ಷ+ ವೀಕ್ಷಕರು, ಗಲ್ಫ್‌ನಲ್ಲಿ ಬಿಡುಗಡೆಗೆ...

ಪ್ರಜ್ವಲ್ ದೇವರಾಜ್ ಕರಾವಳಿಗೆ ಭರ್ಜರಿ ರೆಸ್ಪಾನ್ಸ್: 6 ದಿನಗಳಲ್ಲಿ 5 ಲಕ್ಷ+ ವೀಕ್ಷಕರು, ಗಲ್ಫ್‌ನಲ್ಲಿ ಬಿಡುಗಡೆಗೆ ಸಜ್ಜು

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಎಲ್ಲರ ಕಣ್ಣು ಕರಾವಳಿ ಚಿತ್ರದ ಮೇಲೆಯೇ ನೆಟ್ಟಿದೆ. ಜುಲೈ 24 ರಂದು ರಾಜ್ಯಾದ್ಯಂತ ಬರೊಬ್ಬರಿ 175ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ತೆರೆಕಂಡಿದ್ದ ಈ ಸಿನಿಮಾ, ಈಗ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಇಟ್ಟಿದೆ. ಪ್ರೇಕ್ಷಕರಿಂದ ಸಿಗುತ್ತಿರುವ ನಿರೀಕ್ಷೆಗೂ ಮೀರಿದ ಬೆಂಬಲ ಕಂಡು ಪ್ರದರ್ಶನಗಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಲಾಗುತ್ತಿದೆ.

ಮೊದಲ ದಿನವೇ ಕಮಾಲ್ ಈಗ 6 ಕೋಟಿ ಕ್ಲಬ್ ರಿಲೀಸ್ ಆದ ಮೊದಲ ದಿನವೇ ₹1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಶುಭಾರಂಭ ಕಂಡಿದ್ದ ಕರಾವಳಿ ಈಗ ಒಟ್ಟಾರೆಯಾಗಿ ₹6 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂಬ ಬಿಸಿಬಿಸಿ ಮಾಹಿತಿ ಗಾಂಧಿನಗರದ ಪಂಡಿತರಿಂದ ಸಿಕ್ಕಿದೆ. ಪ್ರಸ್ತುತ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯಲ್ಲಿ ಈ ಮಟ್ಟದ ಕಲೆಕ್ಷನ್ ನಿಜಕ್ಕೂ ಸ್ಯಾಂಡಲ್‌ವುಡ್‌ಗೆ ಹೊಸ ಚೈತನ್ಯ ತಂದಿದೆ. ಅಷ್ಟೇ ಅಲ್ಲ, ಈ ವರ್ಷ ಅತ್ಯುತ್ತಮ ಓಪನಿಂಗ್ ಪಡೆದ ಶ್ರೇಷ್ಠ ಕನ್ನಡ ಸಿನಿಮಾಗಳ ಪಟ್ಟಿಗೆ ಕರಾವಳಿ ಸೇರಿಕೊಂಡಿದೆ.

6 ದಿನಕ್ಕೆ 5 ಲಕ್ಷ ಮಂದಿ ವೀಕ್ಷಣೆ

ಚಿತ್ರಮಂದಿರಗಳತ್ತ ಹರಿದು ಬರುತ್ತಿರುವ ಪ್ರೇಕ್ಷಕರ ಮಹಾಪೂರ ನಿಲ್ಲುತ್ತಲೇ ಇಲ್ಲ. ಬಿಡುಗಡೆಯಾದ ಕೇವಲ 6 ದಿನಗಳಲ್ಲೇ 5 ಲಕ್ಷಕ್ಕೂ ಹೆಚ್ಚು ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರಭಾಷೆಯಲ್ಲೂ ಡಿಮ್ಯಾಂಡ್: ಶೀಘ್ರದಲ್ಲೇ ಡಬ್ಬಿಂಗ್ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ, ಗಡಿಯಾಚೆಗೂ ಕರಾವಳಿಯ ಅಲೆ ತಲುಪಿದೆ. ಪ್ರೇಕ್ಷಕರ ಈ ಅಭೂತಪೂರ್ವ ಪ್ರೀತಿಗೆ ಮನಸೋತಿರುವ ಪರಭಾಷಾ ವಿತರಕರು ಸಿನಿಮಾಗಾಗಿ ಕ್ಯೂ ನಿಂತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಚಿತ್ರತಂಡದ ನಿಕಟ ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular