HomeBusinessಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ಆಗಸ್ಟ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಂದ್, ಯಾವ್ಯಾವ ದಿನ ರಜೆ?...

ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ಆಗಸ್ಟ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್ ಬಂದ್, ಯಾವ್ಯಾವ ದಿನ ರಜೆ? ಇಲ್ಲಿದೆ ಸಂಪೂರ್ಣ ಲಿಸ್ಟ್

ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಆಲೋಚಿಸುತ್ತಿರುವ ಗ್ರಾಹಕರಿಗೆ ಪ್ರಮುಖ ಎಚ್ಚರಿಕೆ. ಮುಂದಿನ ಆಗಸ್ಟ್ (2026) ತಿಂಗಳಿನಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳು ಹಾಗೂ ನಗರಗಳಲ್ಲಿ ವಾರದ ರಜೆ ಮತ್ತು ಹಬ್ಬ-ಹರಿದಿನಗಳು ಸೇರಿದಂತೆ ಬರೋಬ್ಬರಿ 14 ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರಲಿವೆ.

ಎರಡನೇ ಮತ್ತು ನಾಲ್ಕನೇ ಶನಿವಾರ, ಐದು ಭಾನುವಾರಗಳ ಜೊತೆಗೆ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಹಬ್ಬಗಳ ಕಾರಣದಿಂದಾಗಿ ಒಟ್ಟು 7 ದಿನಗಳ ಕಾಲ ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ರಜೆಗಳು ಇರಲಿವೆ. ಹೀಗಾಗಿ ಶಾಖೆಗೆ ತೆರಳಿ ಚೆಕ್ ಕ್ಲಿಯರೆನ್ಸ್, ದೊಡ್ಡ ಮಟ್ಟದ ನಗದು ಠೇವಣಿ, ಡ್ರಾಫ್ಟ್ (DD) ಪಡೆಯುವುದು ಅಥವಾ ಡಾಕ್ಯುಮೆಂಟ್ ಕೆಲಸಗಳನ್ನು ಪೂರ್ಣಗೊಳಿಸಲು ಯೋಜಿಸುತ್ತಿದ್ದರೆ, ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿ ತೆರಳುವುದು ಸೂಕ್ತ.

ಡಿಜಿಟಲ್ ಪಾವತಿ ಸೇವೆಗಳು ಲಭ್ಯ

ಬ್ಯಾಂಕ್ ಶಾಖೆಗಳ ಭೌತಿಕ ವಹಿವಾಟುಗಳು ಸ್ಥಗಿತಗೊಂಡಿದ್ದರೂ, ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಡಿಜಿಟಲ್ ಸೇವೆಗಳು ಎಂದಿನಂತೆ 24 ಗಂಟೆಯೂ ಲಭ್ಯವಿರಲಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

UPI ಸೇವೆಗಳು: PhonePe, Google Pay, Paytm ಇತ್ಯಾದಿ.

ಇತರೆ ಸೇವೆಗಳು: ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂ (ATM) ನಗದು ಹಿಂಪಡೆಯುವಿಕೆ/ಠೇವಣಿ, ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ ವಹಿವಾಟುಗಳು ಸಾಮಾನ್ಯ ರೀತಿಯಲ್ಲಿ ಕಾರ್ಯಾಚರಿಸಲಿವೆ.

ವಾರದ ಸಾಮಾನ್ಯ ರಜೆಗಳು (ದೇಶಾದ್ಯಂತ ಅನ್ವಯ)

ಆಗಸ್ಟ್ 2 (ಭಾನುವಾರ): ವಾರದ ರಜೆ

ಆಗಸ್ಟ್ 8 (ಶನಿವಾರ): ತಿಂಗಳ ಎರಡನೇ ಶನಿವಾರ

ಆಗಸ್ಟ್ 9 (ಭಾನುವಾರ): ವಾರದ ರಜೆ

ಆಗಸ್ಟ್ 16 (ಭಾನುವಾರ): ವಾರದ ರಜೆ

ಆಗಸ್ಟ್ 22 (ಶನಿವಾರ): ತಿಂಗಳ ನಾಲ್ಕನೇ ಶನಿವಾರ

ಆಗಸ್ಟ್ 23 (ಭಾನುವಾರ): ವಾರದ ರಜೆ

ಆಗಸ್ಟ್ 30 (ಭಾನುವಾರ): ವಾರದ ರಜೆ

ಇದರೊಂದಿಗೆ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳ ರಜೆಗಳು:

ಆಗಸ್ಟ್ 4 (ಮಂಗಳವಾರ): ಕೆರ್ ಪೂಜೆ (ಅಗರ್ತಲಾ/ತ್ರಿಪುರಾದಲ್ಲಿ ಮಾತ್ರ ಬ್ಯಾಂಕ್ ರಜೆ).

ಆಗಸ್ಟ್ 13 (ಗುರುವಾರ): ಪೇಟ್ರಿಯಾಟ್ಸ್ ಡೇ (ಇಂಫಾಲ/ಮಣಿಪುರದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ).

ಆಗಸ್ಟ್ 15 (ಶನಿವಾರ): ಸ್ವಾತಂತ್ರ್ಯ ದಿನಾಚರಣೆ (ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಕಡ್ಡಾಯ ರಜೆ).

ಆಗಸ್ಟ್ 19 (ಬುಧವಾರ): ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಜಯಂತಿ (ಅಗರ್ತಲಾದಲ್ಲಿ ಮಾತ್ರ ರಜೆ).

ಆಗಸ್ಟ್ 25 (ಮಂಗಳವಾರ): ಮೊದಲ ಓಣಂ / ಮಿಲಾದ್-ಎ-ಶರೀಫ್ (ಕೊಚ್ಚಿ, ತಿರುವನಂತಪುರಂ ಮತ್ತು ವಿಜಯವಾಡದಲ್ಲಿ ಬ್ಯಾಂಕ್ ರಜೆ).

ಆಗಸ್ಟ್ 26 (ಬುಧವಾರ): ಈದ್-ಎ-ಮಿಲಾದ್ (ಮೊಹಮ್ಮದ್ ಪೈಗಂಬರ್ ಜನ್ಮದಿನ) / ತಿರುವೋಣಂ (ಬೆಂಗಳೂರು, ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಜೆ).

ಆಗಸ್ಟ್ 28 (ಶುಕ್ರವಾರ): ರಕ್ಷಾಬಂಧನ / ಶ್ರೀ ನಾರಾಯಣ ಗುರು ಜಯಂತಿ (ಅಹಮದಾಬಾದ್, ಭೋಪಾಲ್, ಜೈಪುರ, ಲಕ್ನೋ, ಕೊಚ್ಚಿ ಮತ್ತು ತಿರುವನಂತಪುರಂ ಮುಂತಾದ ನಿರ್ದಿಷ್ಟ ರಾಜ್ಯಗಳಲ್ಲಿ ರಜೆ).

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular