HomeLatest News'ಒಂದು ಇಲಿ ಅಲ್ಲ ಸಂಘಿಲಿ ಸಿಕ್ಕಿದೆ'; ನೀಟ್ ಕುರಿತು ಮಾತನಾಡಿದ್ದ ಟೀಚರ್ ಪೂರ್ಣಿಮಾಗೆ ಜೀವ ಬೆದರಿಕೆ...

‘ಒಂದು ಇಲಿ ಅಲ್ಲ ಸಂಘಿಲಿ ಸಿಕ್ಕಿದೆ’; ನೀಟ್ ಕುರಿತು ಮಾತನಾಡಿದ್ದ ಟೀಚರ್ ಪೂರ್ಣಿಮಾಗೆ ಜೀವ ಬೆದರಿಕೆ ಹಾಕಿದ್ದವ ಅರೆಸ್ಟ್!

ನೀಟ್ ಅಕ್ರಮದ ಕುರಿತು ದೇಶದಾದ್ಯಂತ ದೊಡ್ಡ ಕ್ರಾಂತಿಯೇ ನಡೆಯಿತು. ಕಾಕ್ರೋಚ್‌ಗಳು ಹಾಗೂ ಯುವ ಜನತೆ ಸೇರಿಕೊಂಡು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎನ್ನುತ್ತಿದ್ದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಮಾಡಿಬಿಟ್ಟರು.

ದೇಶದ ವಿವಿಧ ನಗರಗಳು ಹಾಗೂ ಆನ್‌ಲೈನ್‌ನಲ್ಲಿ ಕೇಳಿಬಂದ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ ಧರ್ಮಂದ್ರ ಪ್ರಧಾನ್‌ರನ್ನು ಶಿಕ್ಷಣ ಸಚಿವ ಸ್ಥಾನದಿಂದ ಕೈಬಿಟ್ಟಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲಿ ಪರ ಹಾಗೂ ವಿರೋಧಗಳು ವ್ಯಕ್ತವಾದವು. ಅನೇಕ ಮಂದಿ ಮೃತಪಟ್ಟ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಹಾಗೂ ಮುಂದೆ ಮತ್ತೆ ಇಂತಹ ತಪ್ಪು ಜರುಗಬಾರದು ಎಂದು ಪ್ರತಿಭಟನೆಯನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಪ್ರತಿಭಟನೆಯನ್ನು ವಿರೋಧಿಸಿದರು. ಪ್ರತಿಭಟನೆಯನ್ನು ವಿರೋಧಿಸುವ ಭರದಲ್ಲಿ ಪ್ರತಿಭಟನೆಯನ್ನು ಬೆಂಬಲಿಸಿದವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ನಾಲಿಗೆ ಹರಿಬಿಟ್ಟರು.

ಸಾಮಾಜಿಕ ಜಾಲತಾಣದಲ್ಲಿ ಪದ್ಯ ಹಾಗೂ ಒಳ್ಳೆಯ ಸಂದೇಶವಿರುವ ಪುಸ್ತಕಗಳ ಸಾಲುಗಳನ್ನು ಓದಿಹೇಳುತ್ತಾ ಖ್ಯಾತಿಯನ್ನು ಗಳಿಸಿದ ಖಾಸಗಿ ಶಾಲಾ ಪ್ರಿನ್ಸಿಪಾಲ್ ಪೂರ್ಣಿಮಾ ಗಗನ್ ಸಹ ಪ್ರತಿಭಟನೆಯನ್ನು ಬೆಂಬಲಿಸಿ ಕಣ್ಣೀರಿಟ್ಟು ವಿದ್ಯಾರ್ಥಿಗಳ ಪರವಾಗಿ ವಿಡಿಯೊ ಮಾಡಿದ್ದರು.

ಆದರೆ ಈ ವಿಡಿಯೊಗೆ ಕೆಲವರು ಕೆಟ್ಟ ಕಾಮೆಂಟ್ ಮಾಡಿದ್ದರು. ಅಲ್ಲದೇ ಪೂರ್ಣಿಮಾ ಗಗನ್‌ಗೆ ಅಶ್ಲೀಲ ಸಂದೇಶ ಮತ್ತು ಜೀವ ಬೆದರಿಕೆಯನ್ನೂ ಸಹ ಹಾಕಿದ್ದರು. ಈ ಸಂದೇಶಗಳು, ಪೋಸ್ಟ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ ಪೂರ್ಣಿಮಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಅವರು ಸೈಬರ್ ಕ್ರೈಮ್ ಮೊರೆ ಹೋಗಿದ್ದರು.

ಇದೀಗ ಆ ಪೈಕಿ ಓರ್ವನ ಬಂಧನವಾಗಿರುವ ವಿಷಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಒಂದು ಇಲಿ ಅಲ್ಲ ಸಂಘಿಲಿ ಸಿಕ್ಕಿದೆ. ಇನ್ನೂ ಬೊಗಳುತ್ತಲೇ ಇರುವ ಗ್ರಾಮ ಸಿಂಹಗಳಿಗೂ ಮುಕ್ತಿ ಸಿಗಲಿದೆ. ಸಂವಿಧಾನಕ್ಕೆ ಸೋಲಿಲ್ಲ, ಇನ್ಯಾವುದೇ ಹೆಣ್ಣನ್ನು ಅಸಭ್ಯವಾಗಿ ಬಯ್ಯೋಕು ಮುಂಚೆ ಮುಟ್ಟಿ ನೋಡ್ಕೋಬೇಕು. ನೆನಪಿರಲಿ ರಮ್ಯಾ ಮೇಡಂ ಕೇಸ್‌ನಲ್ಲಿ ಒಳಗೆ ಹೋದವರು ಒಂಬತ್ತು ತಿಂಗಳಿನಿಂದ ಜೈಲಲ್ಲೇ ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಪೂರ್ವಪರ ನೋಡದೇ ಜೀವ ಬೆದರಿಕೆ ಕೊಟ್ಟ ಒಂದು ಪ್ರಾಣಿಯನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

https://www.instagram.com/p/DbVVPnuRMCL

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular