HomeBusinessITR ಫೈಲಿಂಗ್‌ಗೆ ಎಷ್ಟು ಖರ್ಚು? ವಿವಿಧ ವೆಬ್‌ಸೈಟ್‌ಗಳ ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ

ITR ಫೈಲಿಂಗ್‌ಗೆ ಎಷ್ಟು ಖರ್ಚು? ವಿವಿಧ ವೆಬ್‌ಸೈಟ್‌ಗಳ ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ದೇಶಾದ್ಯಂತ 2025-26ರ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಕೆಗೆ ಕೌಂಟ್‌ಡೌನ್ ಶುರುವಾಗಿದೆ ತೆರಿಗೆ ಆಡಿಟ್‌ಗೆ ಒಳಪಡದ ವೇತನದಾರರು, ಪಿಂಚಣಿದಾರರು, ವಿದ್ಯಾರ್ಥಿಗಳು ಹಾಗೂ ಇತರ ವ್ಯಕ್ತಿಗಳಿಗೆ ರಿಟರ್ನ್ಸ್ ಸಲ್ಲಿಸಲು 2026ರ ಜುಲೈ 31 ಕೊನೆಯ ದಿನಾಂಕವಾಗಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೀವೇ ಉಚಿತವಾಗಿ ITR ಸಲ್ಲಿಸಬಹುದಾದರೂ, ಸಂಕೀರ್ಣ ಆದಾಯ, ಶೇರು ಮಾರುಕಟ್ಟೆ , ಕ್ಯಾಪಿಟಲ್ ಗೇನ್ಸ್ ಅಥವಾ ವಿದೇಶಿ ಆದಾಯ ಹೊಂದಿರುವವರಿಗೆ ಖಾಸಗಿ ವೆಬ್‌ಸೈಟ್‌ಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ನೆರವು ಪಡೆಯುವುದು ಹೆಚ್ಚು ಸೂಕ್ತ.

ಎಫ್‌ಐಐ ಪಾಲು ಹೆಚ್ಚಿಸಿಕೊಂಡ ಪ್ರಮುಖ ಕಂಪನಿಗಳ ಪಟ್ಟಿ:

ಸ್ಟರ್ಲೈಟ್ ಟೆಕ್ನಾಲಜೀಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

6 ತಿಂಗಳ ರಿಟರ್ನ್ಸ್: 451%

ಪ್ರಸ್ತುತ ಬೆಲೆ: ₹518

FII ಪಾಲು ಏರಿಕೆ: 10.93% ನಿಂದ 18.22% ಗೆ

ಡಿ ಡೆವಲಪ್‌ಮೆಂಟ್

6 ತಿಂಗಳ ರಿಟರ್ನ್ಸ್: 234%

ಪ್ರಸ್ತುತ ಬೆಲೆ: ₹687

FII ಪಾಲು ಏರಿಕೆ: 0.77% ನಿಂದ 2.17% ಗೆ

ಇಂಡೋ ಟೆಕ್ ಟ್ರಾನ್ಸ್‌ಫಾರ್ಮರ್ಸ್

6 ತಿಂಗಳ ರಿಟರ್ನ್ಸ್: 139%

ಪ್ರಸ್ತುತ ಬೆಲೆ: ₹3,415

FII ಪಾಲು ಏರಿಕೆ: 0.19% ನಿಂದ 0.28% ಗೆ

ಕೆಎಸ್‌ಎಚ್ ಇಂಟರ್‌ನ್ಯಾಷನಲ್ (KSH International)

6 ತಿಂಗಳ ರಿಟರ್ನ್ಸ್: 138%

ಪ್ರಸ್ತುತ ಬೆಲೆ: ₹865

FII ಪಾಲು ಏರಿಕೆ: 3.72% ನಿಂದ 5.71% ಗೆ

ಖಾಸಗಿ ತೆರಿಗೆ ಸಲ್ಲಿಕೆ ವೆಬ್‌ಸೈಟ್‌ಗಳಲ್ಲಿ 2 ಪ್ರಮುಖ ಸೇವೆಗಳು:

ಎಐ (AI) ಆಧಾರಿತ ಸ್ವಯಂ ಫೈಲಿಂಗ್ : ಕಂಪ್ಯೂಟರ್ ಅಲ್ಗಾರಿದಮ್ ಅಥವಾ AI ತಂತ್ರಜ್ಞಾನವು ನಿಮ್ಮ ಫಾರ್ಮ್ 16, AIS, ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಕ್ಯಾಪಿಟಲ್ ಗೇನ್ಸ್ ಮಾಹಿತಿಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಿ ITR ಫಾರ್ಮ್‌ನಲ್ಲಿ ಭರ್ತಿ ಮಾಡುತ್ತದೆ. ಇದನ್ನು ಒಮ್ಮೆ ಪರಿಶೀಲಿಸಿ ನೀವೇ ಸಲ್ಲಿಸಬೇಕು.

ಸಿಎ ಬೆಂಬಲಿತ ಫೈಲಿಂಗ್ : ಅನುಭವಿ ಚಾರ್ಟರ್ಡ್ ಅಕೌಂಟೆಂಟ್ (CA) ನೇರವಾಗಿ ನಿಮ್ಮ ತೆರಿಗೆ ಲೆಕ್ಕಾಚಾರ ಮಾಡಿ, ಸೂಕ್ತ ಹೂಡಿಕೆ ಸಲಹೆ ನೀಡಿ ನಿಮ್ಮ ಪರವಾಗಿ ಸರಿ ಹೊಂದುವ ITR ಸಿದ್ಧಪಡಿಸಿ ಸಲ್ಲಿಸುತ್ತಾರೆ.

ಎಐ ಆಧಾರಿತ ಸ್ವಯಂ ಫೈಲಿಂಗ್ ದರಗಳ ಪಟ್ಟಿ:

ನೀವೇ ಖುದ್ದಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಪ್ರಕ್ರಿಯೆಗೊಳಿಸಲು ಪ್ರಮುಖ ವೆಬ್‌ಸೈಟ್‌ಗಳು ವಿಧಿಸುವ ಆರಂಭಿಕ ಮತ್ತು ಗರಿಷ್ಠ ಶುಲ್ಕಗಳು ಈ ಕೆಳಗಿನಂತಿವೆ:

ವಿವಿಧ ವೆಬ್‌ಸೈಟ್‌ಗಳ ITR ಫೈಲಿಂಗ್ ಶುಲ್ಕ

Quicko – ಉಚಿತ (Free)

ClearTax – ₹299 ರಿಂದ ₹2,999

Taxspanner – ₹399 ರಿಂದ ₹959

Tax2Win – ₹648 ರಿಂದ ₹1,787

TaxBuddy – ₹699 ರಿಂದ ₹2,999

ನಿಮ್ಮ ಆದಾಯದ ಮಾದರಿಗೆ ಸೂಕ್ತವಾದ ಪ್ಲಾಟ್‌ಫಾರ್ಮ್ ಆರಿಸಿಕೊಳ್ಳಿ:

ವಿದ್ಯಾರ್ಥಿಗಳು ಹಾಗೂ ಸರಳ ವೇತನದಾರರು: ಕೇವಲ ಫಾರ್ಮ್ 16 ಹೊಂದಿದ್ದು, ಇತರೆ ಯಾವುದೇ ಸಂಕೀರ್ಣ ಆದಾಯ ಇಲ್ಲದಿದ್ದರೆ Quicko ಸಂಪೂರ್ಣ ಉಚಿತ ಸೇವೆ ನೀಡುತ್ತದೆ. ಇನ್ನು Taxspanner ಹಾಗೂ TaxBuddy ಅತಿ ಕಡಿಮೆ ದರದಲ್ಲಿ ಸಿಎ ನೆರವು ನೀಡಿ ಸಲ್ಲಿಕೆ ಸರಳಗೊಳಿಸುತ್ತವೆ.

ಷೇರು ಮಾರುಕಟ್ಟೆ ಹಾಗೂ F&O ಹೂಡಿಕೆದಾರರು: ಶೇರು ಮಾರುಕಟ್ಟೆ ವಹಿವಾಟು ಹೆಚ್ಚಿದ್ದಲ್ಲಿ TaxBuddy ಅಥವಾ Quicko ಅತ್ಯಂತ ಆರ್ಥಿಕ ಬೆಲೆಯಲ್ಲಿ ಸೇವೆ ನೀಡುತ್ತವೆ. ಹೆಚ್ಚಿನ ಸಂಕೀರ್ಣ ವಹಿವಾಟುಗಳಿಗೆ ClearTax ಹಾಗೂ Tax2Win ಸಮಗ್ರ ಬೆಂಬಲ ನೀಡುತ್ತವೆ.

ಅನಿವಾಸಿ ಭಾರತೀಯರು : ಎನ್‌ಆರ್‌ಐ ತೆರಿಗೆದಾರರಿಗಾಗಿಯೇ ಪ್ರತ್ಯೇಕ ಸಿಎ ಪ್ಲಾನ್‌ಗಳು ಲಭ್ಯವಿದ್ದು, ಅವರ ವಿದೇಶಿ ಆದಾಯ ಮತ್ತು ಭಾರತದಲ್ಲಿನ ತೆರಿಗೆ ಹೊಂದಾಣಿಕೆಗೆ ಈ ವೆಬ್‌ಸೈಟ್‌ಗಳು ವಿಶೇಷ ನೆರವು ನೀಡುತ್ತವೆ.ಕೊನೆಯ ದಿನದವರೆಗೂ ಕಾಯದೆ ದಂಡ ಹಾಗೂ ತಾಂತ್ರಿಕ ಕಿರಿಕಿರಿ ತಪ್ಪಿಸಲು ಇಂದೇ ಸೂಕ್ತ ಮಾರ್ಗವನ್ನು ಆಯ್ದುಕೊಂಡು ನಿಮ್ಮ ITR ಫೈಲ್ ಮಾಡಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular