HomeLatest Newsಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್ ; ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power cut

ಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್ ; ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power cut

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಜುಲೈ 24 ಮತ್ತು 25, ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. ಕೆಲವೆಡೆ 6 ಗಂಟೆಗಳವರೆಗೆ, ಮತ್ತೂ ಕೆಲವು ಪ್ರದೇಶಗಳಲ್ಲಿ 4 ಗಂಟೆಗಳವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ವೀಕೆಂಡ್‌ನಲ್ಲಿ ಬೆಂಗಳೂರಿಗರಿಗೆ ಮತ್ತೆ ಪವರ್ ಶಾಕ್ ಎದುರಾಗಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜುಲೈ 24 ಮತ್ತು 25ರಂದು ನಗರದ ಹಲವು ಪ್ರದೇಶಗಳಲ್ಲಿ 4ರಿಂದ 6 ಗಂಟೆಗಳವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಜುಲೈ 24 (ಶುಕ್ರವಾರ) ವಿದ್ಯುತ್ ವ್ಯತ್ಯಯ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಯಲಹಂಕ 66/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

  • ಕೆಎಂಎಫ್ (KMF)
  • ಯಲಹಂಕ ನ್ಯೂ ಟೌನ್ (208, 407, ‘ಬಿ’ ಸೆಕ್ಟರ್)
  • ಸಿಬಿ ಸಂದ್ರ (CB Sandra)
  • ಅಲ್ಲಾಳಸಂದ್ರ
  • ಶಾರದಾನಗರ
  • ಪಾಪ್ಯುಲರ್ ಲೇಔಟ್
  • ಆಂದ್ರಿಯಾ ಲೇಔಟ್
  • ಮಾರುತಿನಗರ
  • ಕೋಗಿಲು
  • ಬಿಬಿ ರಸ್ತೆ (ಯಲಹಂಕ)
  • ಬಾಗಲೂರು ಕ್ರಾಸ್
  • ವೆಂಕಟಾಲ
  • ನಿಟ್ಟೆ ಕಾಲೇಜು
  • ಬಿಎಸ್‌ಎಫ್ ಪ್ರದೇಶ
  • ಭಾರತೀಯ ವಾಯುಪಡೆ (IAF) ಪ್ರದೇಶ
  • ಇಂಟರ್‌ನ್ಯಾಷನಲ್ ಸ್ಕೂಲ್ ಸುತ್ತಮುತ್ತ
  • ಕಾಗೀನ್ ಅಡ್ವಾನ್ಸ್ ಕಾಲೇಜು
  • ರಾಯಣ್ಣ ಶಾಲೆ, ಪಾಲನಹಳ್ಳಿ
  • ದ್ವಾರಕಾನಗರ
  • ಪೂರ್ವಂಕರಾ ಆರ್‌ಎಂಝಡ್ ಗ್ಯಾಲೇರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಜುಲೈ 25 (ಶನಿವಾರ) ವಿದ್ಯುತ್ ವ್ಯತ್ಯಯ

ಅಬ್ಬಿಗೆರೆ 66/11 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

  • ಕಮ್ಮಗೊಂಡನಹಳ್ಳಿ
  • ಲಕ್ಷ್ಮೀಪುರ
  • ವಡೇರಹಳ್ಳಿ
  • ಅಬ್ಬಿಗೆರೆ ಕೈಗಾರಿಕಾ ಪ್ರದೇಶ
  • ಸಿಂಗಾಪುರ
  • ಪೈಪ್‌ಲೈನ್ ರಸ್ತೆ ಸುತ್ತಮುತ್ತ
  • ಕಾಶೀರಾಮನಗರ
  • ಕುವೆಂಪುನಗರ
  • ವಿಶ್ವೇಶ್ವರಯ್ಯ ಲೇಔಟ್
  • ಬ್ರಿಗೇಡ್ ಪಾರ್ಕ್‌ಸೈಡ್ ನಾರ್ತ್ ಅಪಾರ್ಟ್‌ಮೆಂಟ್
  • ಸುತ್ತಮುತ್ತಲಿನ ನಿವಾಸಿ ಪ್ರದೇಶಗಳು.

ಬೆಸ್ಕಾಂನ ಮಾಹಿತಿ ಪ್ರಕಾರ, ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ಬಳಿಕ ವಿದ್ಯುತ್ ಪೂರೈಕೆ ಪುನಃ ಆರಂಭವಾಗಲಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular