ಬೆಂಗಳೂರು: ರಾಜ್ಯದಲ್ಲಿ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಕೆಎಂಎಫ್ ನಂದಿನಿ ತುಪ್ಪ, ಬೆಣ್ಣೆ ದರ ಏರಿಕೆ ಮಾಡಲಾಗಿದೆ.
ನಂದಿನಿ ತುಪ್ಪದ ಬೆಲೆ ಕೆಜಿಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 700 ರಿಂದ 715 ಗೆ ಏರಿಕೆಯಾಗಿದೆ. ಗೃಹ ಬಳಕೆ ಮತ್ತು ಹೋಟೆಲ್ ಉದ್ಯಮದ ಮೇಲೆಯೂ ಬೆಲೆ ಏರಿಕೆಯಿಂದ ಪರಿಣಾಮ ಬೀರಲಿದೆ.
ನಂದಿನಿ ತುಪ್ಪದ ಬೆಲೆಯನ್ನು ಕೆಜಿಗೆ 15 ರೂಪಾಯಿ ಹಾಗೂ ಬೆಣ್ಣೆಯ ದರವನ್ನು ಕೆಜಿಗೆ 22 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲಿಯೂ ಬೆಣ್ಣೆ ಮತ್ತು ತುಪ್ಪದ ದರ ಏರಿಕೆಯಾಗಲಿದೆ.

