ತಮಿಳು ಚಿತ್ರರಂಗದ ಬಹುನಿರೀಕ್ಷಿತ ಹಾಗೂ ನಟ ವಿಜಯ್ ಅಭಿನಯದ ಕೊನೆಯ ಚಿತ್ರ ಜನನಾಯಗನ್ ಗುರುವಾರ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ತೆರೆಕಂಡ ಮೊದಲ ದಿನವೇ ಅಭಿಮಾನಿಗಳಿಗೆ ಮತ್ತು ಚಿತ್ರಪ್ರೇಮಿಗಳಿಗೆ ಬಿಗ್ ಸರ್ಪ್ರೈಸ್ ಒಂದ ಸಿಕ್ಕಿದೆ. ದಳಪತಿ ವಿಜಯ್ ಅಭಿನಯದ ಈ ಕೊನೆಯ ಚಿತ್ರವನ್ನು ವೀಕ್ಷಿಸಲು ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಚೆನ್ನೈನ ರೋಹಿಣಿ ಥಿಯೇಟರ್ಗೆ ಆಗಮಿಸಿ ಗಮನ ಸೆಳೆದಿದ್ದಾರೆ.
ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸಿ ಸರಳ ಉಡುಪಿನಲ್ಲಿ ಥಿಯೇಟರ್ಗೆ ಬಂದಿಳಿದ ತ್ರಿಶಾ ಅವರ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ನೆಚ್ಚಿನ ನಟಿಯನ್ನು ಹತ್ತಿರದಿಂದ ಕಂಡ ಅಭಿಮಾನಿಗಳು ಕೇಕೆ ಹಾಗೂ ಶಿಳ್ಳೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿಜಯ್ ಅವರ ಬಿಡುಗಡೆಯ ದಿನವೇ ತ್ರಿಶಾ ಸಾರ್ವಜನಿಕವಾಗಿ ಥಿಯೇಟರ್ಗೆ ಆಗಮಿಸಿ ಸಿನಿಮಾ ವೀಕ್ಷಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಜಯ್ ಮತ್ತು ತ್ರಿಶಾ ಇಬ್ಬರೂ ಕಾಲಿವುಡ್ನ ಹಿಟ್ ಜೋಡಿ ಎಂದು ಹೆಸರು ಪಡೆದವರು. ಗಿಲ್ಲಿ, ತಿರುಪಾಚಿ, ಆಧಿ, ಕುರುವಿ ಹಾಗೂ ಲಿಯೋ ಸಿನಿಮಾಗಳಲ್ಲಿ ಇಬ್ಬರ ಜೋಡಿ ಅಭಿಮಾನಿಗಳ ಮನ ಗೆದ್ದಿದೆ. ಅಲ್ಲದೆ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದಲ್ಲೂ ತ್ರಿಶಾ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಇವರ ಬಾಂಧವ್ಯದ ಕುರಿತು ಹಲವು ವದಂತಿಗಳು ಹರಿದಾಡುತ್ತಿದ್ದವು. ಈಗ ವಿಜಯ್ ಅವರ ಕೊನೆಯ ಸಿನಿಮಾದ ಮೊದಲ ಪ್ರದರ್ಶನಕ್ಕೇ ತ್ರಿಶಾ ಹಾಜರಾಗಿರುವುದು ಕುತೂಹಲ ಮೂಡಿಸಿದೆ.
ಎಚ್ ವಿನೋತ್ ನಿರ್ದೇಶನದಲ್ಲಿ ಮೂಡಿಬಂದಿರುವ ಜನನಾಯಗನ್ ರಾಜಕೀಯ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣ ಪ್ರಮಾಣದ ರಾಜಕೀಯ ರಂಗಪ್ರವೇಶ ಮಾಡುವ ಮುನ್ನ ವಿಜಯ್ ಅಭಿನಯಿಸಿರುವ ಕೊನೆಯ ಚಿತ್ರ ಇದಾಗಿದ್ದರಿಂದ ಥಿಯೇಟರ್ಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
Actor Trisha Krishnan leaves from theatre after watching actor and Tamil Nadu Chief Minister C Joseph Vijay’s movie ‘Jana Nayagan’
.
.
.
.
Video: ANI pic.twitter.com/A0iSGbCHSD— WION Showbiz (@WIONShowbiz) July 23, 2026

