HomeKarnatakaಕೆಪಿಎಸ್ ಸಿಯಲ್ಲಿ ಮತ್ತೊಂದು ಬ್ರಂಹ್ಮಾಂಡ ಭ್ರಷ್ಟಾಚಾರ ಆರೋಪ: ಒಂದು ಹುದ್ದೆ 80 ಲಕ್ಷ ರೂಪಾಯಿಗೆ ಸೇಲ್:...

ಕೆಪಿಎಸ್ ಸಿಯಲ್ಲಿ ಮತ್ತೊಂದು ಬ್ರಂಹ್ಮಾಂಡ ಭ್ರಷ್ಟಾಚಾರ ಆರೋಪ: ಒಂದು ಹುದ್ದೆ 80 ಲಕ್ಷ ರೂಪಾಯಿಗೆ ಸೇಲ್: ನೇಮಕಾತಿ ರದ್ದುಗೊಳಿಸುವಂತೆ ಆಗ್ರಹ

ಬೆಂಗಳೂರು: ಭ್ರಷ್ಟಾಚಾರ ಆರೋಪ ಸೇರಿದಂತೆ ಹಲವು ಗಂಭೀರ ಆರೋಪಗಳ ಮೇರೆಗೆ ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತ್ತಿನ ಬೆನ್ನಲ್ಲೇ ಕೆಪಿಎಸ್​​ಸಿಯಲ್ಲಿ ಮತ್ತೊಂದು ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಒಂದು ಹುದ್ದೆಗೆ 80 ಲಕ್ಷ ರೂಪಾಯಿಗೆ ಸೇಲ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇಮಕಾತಿಯಲ್ಲಿ ಶೇ.60ರಷ್ಟು ಅಕ್ರಮ ಆಗಿರುವ ಬಗ್ಗೆ ಆರೋಪಿಸಲಾಗಿದ್ದು, ಇದರಲ್ಲಿಯೂ ಇತ್ತೀಚೆಗಷ್ಟೇ ಅಮಾನತ್ತಾಗಿರುವ ಶಿವಶಂಕರಪ್ಪ ಸಾಹುಕಾರ್ ಹೆಸರು ಕೂಡ ಕೇಳಿಬಂದಿದೆ. ಜನವರಿ 8 ರಂದು 400 ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಪರೀಕ್ಷೆ ನಡೆದಿದ್ದು, ಜುಲೈ 17ರಂದು ಹೊರಬಿದ್ದ ಫಲಿತಾಂಶ ಅಭ್ಯರ್ಥಿಗಳಿಗೆ ಆಘಾತ ತಂದಿದೆ.

ಒಂದು ಹುದ್ದೆ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬಿಕರಿ ಆಗಿರುವ ಆರೋಪವಿದ್ದು, ಈ ಸಂಬಂಧ 50ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಧಾನಸೌಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ವಿದ್ಯಾಅರ್ಥಿ ಸಂಘಟನೆ ಅಧ್ಯಕ್ಷ ಕಾಂತ ಕುಮಾರ್, ಗ್ರೂಪ್ ಎ ಹುದ್ದೆಯಾಗಿರುವ ಪಶು ವೈದ್ಯಾಧಿಕಾರಿಗಳ ಸೀಟ್​​​ಗೆ ದುಡ್ಡು ಕೊಡಿ ಎಂದು ಅಭ್ಯರ್ಥಿಗಳಿಗೆ ಕರೆ ಮಾಡಿ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಶಿವಶಂಕರಪ್ಪ ಸೇರಿ ಹಲವರು ಭಾಗಿಯಾಗಿದ್ದಾರೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. UPSC ಬರೆದ ಅಭ್ಯರ್ಥಿಗಳು ಪಾಸ್ ಆಗಲು ಕಷ್ಟ ಪಟ್ಟಿದ್ದರೆ, ಶಿವಶಂಕರಪ್ಪ ಸಂಬಂಧಿಕರು ಮೆರಿಟ್ ಅಂಕ ಗಳಿಸಿದ್ದಾರೆ. ಇದೆಲ್ಲವೂ ಅಕ್ರಮವಾಅಗಿ ನಡೆದಿದೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular