HomeIndiaBREAKING: ಸುಪ್ರೀಂ ಕೋರ್ಟ್‌ ಮೆಟ್ರೋ ನಿಲ್ದಾಣವನ್ನು ಮಧ್ಯಾಹ್ನದೊಳಗೆ ತೆರೆಯದಿದ್ದರೆ ಮಧ್ಯಪ್ರವೇಶಿಸಬೇಕಾಗುತ್ತೆ: ಸಿಜೆಐ ಎಚ್ಚರಿಕೆ

BREAKING: ಸುಪ್ರೀಂ ಕೋರ್ಟ್‌ ಮೆಟ್ರೋ ನಿಲ್ದಾಣವನ್ನು ಮಧ್ಯಾಹ್ನದೊಳಗೆ ತೆರೆಯದಿದ್ದರೆ ಮಧ್ಯಪ್ರವೇಶಿಸಬೇಕಾಗುತ್ತೆ: ಸಿಜೆಐ ಎಚ್ಚರಿಕೆ

ನವದೆಹಲಿ: ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 16 ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಜೆಪಿ ಗರಂ ಆಗಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣವನ್ನು ಕೂಡ ಬಂದ್ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣ ಬಂದ್ ಆಗಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ವಿಕಾಸ್ ಸಿಂಗ್ ಅವರು ಸಿಜೆಐ ಸುರ್ಯಕಾಂತ್ ಅವರ ಗಮನಕ್ಕೆ ತಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಾಲಯಕ್ಕೆ ಬರಲು ಸೂಕ್ತ ಪ್ರವೇಶ ಪತ್ರ (Access Pass) ಹೊಂದಿರುವ ವಕೀಲರು, ನ್ಯಾಯವಾದಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಕನಿಷ್ಠ ಈ ಮೆಟ್ರೋ ನಿಲ್ದಾಣವನ್ನು ಬಳಸಲು ಅನುಮತಿ ನೀಡಬೇಕು ಎಂದು ಅವರು ಕೋರಿದರು.

ಇದರ ಬೆನ್ನಲ್ಲೇ ಸಿಜೆಐ ಸೂರ್ಯಕಾಂತ್ ಮಧ್ಯಾಹ್ನದೊಳಗೆ ಸುಪ್ರಿಂ ಕೋರ್ಟ್ ಮೆಟ್ರೋ ನಿಲ್ದಾಣವನ್ನು ತೆರೆಯಿರಿ ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular