HomeLatest Newsಅನುಮಾನಗಳಿಗೆ ತೆರೆ ಎಳೆಯಲು ಬರ್ತಿದ್ದಾಳೆ 'ಡಿಟೆಕ್ಟಿವ್ ತೀಕ್ಷ್ಣ': ಆಗಸ್ಟ್ 7ರಂದು ಪ್ರಿಯಾಂಕಾ ಉಪೇಂದ್ರ ಸಿನಿಮಾ ರಿಲೀಸ್!

ಅನುಮಾನಗಳಿಗೆ ತೆರೆ ಎಳೆಯಲು ಬರ್ತಿದ್ದಾಳೆ ‘ಡಿಟೆಕ್ಟಿವ್ ತೀಕ್ಷ್ಣ’: ಆಗಸ್ಟ್ 7ರಂದು ಪ್ರಿಯಾಂಕಾ ಉಪೇಂದ್ರ ಸಿನಿಮಾ ರಿಲೀಸ್!

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಡಿಟೆಕ್ಟಿವ್ ತೀಕ್ಷ್ಣ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಚಿತ್ರತಂಡ, ಮುಂಬರುವ ಆಗಸ್ಟ್ 7ರಂದು ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುವುದಾಗಿ ಘೋಷಿಸಿದೆ. ಪ್ರಿಯಾಂಕಾ ಉಪೇಂದ್ರ ಅವರೇ ಪ್ರಸ್ತುತಪಡಿಸುತ್ತಿರುವ ಈ ಸಿನಿಮಾ ಈಗಾಗಲೇ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ತ್ರಿವಿಕ್ರಮ್ ರಘು ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಒಂದು ವಿಭಿನ್ನ ಹಾಗೂ ರೋಚಕ ಕಥಾಹಂದರವನ್ನು ಹೊಂದಿರಲಿದೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಮುನಿ ವೆಂಕಟ್ ಚರಣ್, ವಿಜಯ್ ಸೂರ್ಯ, ಅವಿನಾಶ್ ಹಾಗೂ ಸಿಡ್ಲಿಂಗು ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಬಿಗ್ ಬಜೆಟ್ ಚಿತ್ರವನ್ನು ‘ಈವೆಂಟ್ ಲಿಂಕ್ಸ್ ಎಂಟರ್‌ಟೈನ್‌ಮೆಂಟ್’ ಮತ್ತು ‘ಎಸ್‌ಡಿಸಿ ಸಿನೆ ಕ್ರಿಯೇಷನ್ಸ್’ ಬ್ಯಾನರ್‌ಗಳ ಅಡಿಯಲ್ಲಿ ಗುಪ್ತಾ ಮುನಿ ಪ್ರಸನ್ನ, ಮುನಿ ವೆಂಕಟ್ ಚರಣ್ ಹಾಗೂ ಪುರುಷೋತ್ತಮ್ ಬಿ ಕೊಯ್ಯೂರು ಜಂಟಿಯಾಗಿ ನಿರ್ಮಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರಕ್ಕೆ ಪಿಆರ್ (ಪೆದ್ದಪಲ್ಲಿ ರೋಹಿತ್) ಸಂಗೀತ ಸಂಯೋಜಿಸಿದ್ದು, ಮನು ದಾಸಪ್ಪ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶ್ರೀಧರ್ ವೈಎಸ್ ಸಂಕಲನ, ನವೀನ್ ಕುಮಾರ್ ಬಿಎಮ್ ಕಲಾ ನಿರ್ದೇಶನ ಹಾಗೂ ಗೌತಮ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಶಕ್ತಿ ಗ್ರಾಫಿಸ್ಟ್ ಮತ್ತು ರಾಕೇಶ್ ಆರ್ ಪ್ರಚಾರ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿರುವ ‘ಡಿಟೆಕ್ಟಿವ್ ತೀಕ್ಷ್ಣ’ ಸಿನಿಮಾ ಥ್ರಿಲ್ಲರ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

https://www.instagram.com/p/DbFTr1CRBt0

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular