HomeLatest Newsಬೆಂಗಳೂರಲ್ಲಿ ಮನೆ ಖಾಲಿ ಮಾಡುವ ಮುನ್ನ ಎಚ್ಚರ: 1 ಲಕ್ಷ ಅಡ್ವಾನ್ಸ್‌ನಲ್ಲಿ ₹80,000 ಕಟ್‌ ಮಾಡಿದ...

ಬೆಂಗಳೂರಲ್ಲಿ ಮನೆ ಖಾಲಿ ಮಾಡುವ ಮುನ್ನ ಎಚ್ಚರ: 1 ಲಕ್ಷ ಅಡ್ವಾನ್ಸ್‌ನಲ್ಲಿ ₹80,000 ಕಟ್‌ ಮಾಡಿದ ಮಾಲೀಕ, ನೆಟ್ಟಿಗರ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಪ್ರತಿಯೊಬ್ಬರಿಗೂ ಸುರಕ್ಷಿತ ನೆರಳು ಕಂಡುಕೊಳ್ಳುವುದು ಮತ್ತು ಮನೆ ಬಾಡಿಗೆ ನೀಡುವುದು ದೊಡ್ಡ ಸವಾಲಿನ ಕೆಲಸ. ದುಡಿದ ಹಣದ ಅರ್ಧ ಭಾಗ ಬಾಡಿಗೆಗೆ ಹೋಗುವುದಲ್ಲದೆ, ಮನೆ ಮಾಲೀಕರು ಕೇಳುವ ಭಾರಿ ಮೊತ್ತದ ಮುಂಗಡ (Advance) ಹಣವನ್ನು ಪಾವತಿಸುವುದು ಸಾಮಾನ್ಯವಾಗಿದೆ. ಆದರೆ, ಮನೆ ಖಾಲಿ ಮಾಡುವಾಗ ನೀಡಿದ ಅಡ್ವಾನ್ಸ್ ಹಣ ಪೂರ್ತಿಯಾಗಿ ವಾಪಸ್ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎನ್ನುವುದಕ್ಕೆ ಮತ್ತೊಂದು ಶಾಕಿಂಗ್ ಘಟನೆ ಸಾಕ್ಷಿಯಾಗಿದೆ.

ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿಸಿದ್ದರೂ, ಮನೆ ಖಾಲಿ ಮಾಡುವಾಗ ಮಾಲೀಕನೊಬ್ಬ ಒಟ್ಟು ₹1 ಲಕ್ಷ ಅಡ್ವಾನ್ಸ್ ಪೈಕಿ ಬರೋಬ್ಬರಿ ₹80,396 ಕಡಿತಗೊಳಿಸಿ, ಕೈಗೆ ಕೇವಲ ₹20,000 ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

https://twitter.com/poojaofficial5/status/2079095440956600830

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೂಜಾ ಎಂಬುವವರಿಗೆ ಎದುರಾದ ಅನುಭವ

ಪೂಜಾ ಎಂಬ ಬಳಕೆದಾರರು ಬೆಂಗಳೂರಿನಲ್ಲಿ 2BHK ಅಪಾರ್ಟ್‌ಮೆಂಟ್ ಒಂದನ್ನು ಬಾಡಿಗೆಗೆ ಪಡೆದು, ₹1 ಲಕ್ಷ ಮುಂಗಡ ಹಣ ನೀಡಿದ್ದರು. ಪೋಸ್ಟ್‌ನಲ್ಲಿ ತಿಳಿಸಿರುವಂತೆ, ಅವರು ಒಂದು ವರ್ಷಗಳ ಕಾಲ ಅದೇ ಅಪಾರ್ಟ್‌ಮೆಂಟ್‌ನಲ್ಲಿದ್ದು, ಯಾವುದೇ ವಿಳಂಬವಿಲ್ಲದೆ ಪ್ರತಿ ತಿಂಗಳು ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದರು. ಕೆಲಸದ ನಿಮಿತ್ತ ಅವರು ಆಗಾಗ್ಗೆ ಪ್ರಯಾಣಿಸುತ್ತಿದ್ದುದರಿಂದ, ತಿಂಗಳಿಗೆ ಕೇವಲ 6 ರಿಂದ 7 ದಿನಗಳಷ್ಟೇ ಮನೆಯಲ್ಲಿದ್ದರು.

ಮನೆಯಲ್ಲಿದ್ದಷ್ಟು ದಿನ ಯಾವುದೇ ಪಾರ್ಟಿಗಳನ್ನು ಮಾಡದೆ, ಅಪಾರ್ಟ್‌ಮೆಂಟ್ ಅನ್ನು ಅತ್ಯಂತ ಸ್ವಚ್ಛವಾಗಿ ನಿರ್ವಹಿಸಿದ್ದರು. ಮಾಲೀಕರ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದರು. ಆದರೆ, ವರ್ಷದ ಬಳಿಕ ಮನೆ ಖಾಲಿ ಮಾಡಲು ನಿರ್ಧರಿಸಿ ಸೆಟಲ್‌ಮೆಂಟ್ ಬಿಲ್ ನೋಡಿದಾಗ ಅವರಿಗೆ ಶಾಕ್ ಆಗಿದೆ!

ಸಾಲು ಸಾಲು ನೆಪ: ₹80 ಸಾವಿರಕ್ಕೂ ಹೆಚ್ಚು ಡಿಡಕ್ಷನ್

ಮನೆ ಖಾಲಿ ಮಾಡುವ ವೇಳೆ ಮಾಲೀಕ ನೀಡಿದ ಸೆಟಲ್‌ಮೆಂಟ್ ಪಟ್ಟಿಯಲ್ಲಿ ವಿಚಿತ್ರ ನೆಪಗಳನ್ನು ಹೇಳಿ ಹಣ ಕಡಿತಗೊಳಿಸಲಾಗಿತ್ತು.

ಅಪಾರ್ಟ್‌ಮೆಂಟ್‌ಗೆ ಸುಣ್ಣ/ಪೇಂಟ್ ಬಳಿಯುವುದು

ಇಡೀ ಮನೆ ಶುಚಿಗೊಳಿಸುವಿಕೆ (Deep Cleaning)

ಸೋಫಾ ಕ್ಲೀನಿಂಗ್ ಹಾಗೂ ರೆಫ್ರಿಜರೇಟರ್ ಸರ್ವಿಸ್

ಶವರ್ ಹಾಗೂ ಬಾಗಿಲಿನ ಲಾಕ್ ಬದಲಾವಣೆ

ಇತರೆ ಸರ್ವಿಸ್ ಚಾರ್ಜ್‌ಗಳು

ಹೀಗೆ ಸಣ್ಣಪುಟ್ಟ ಕಾರಣಗಳನ್ನು ನೀಡಿ ಒಟ್ಟು ₹80,396 ಕಡಿತಗೊಳಿಸಿ, ಬಾಕಿ ಕೇವಲ ₹20,000 ನೀಡಲಾಗಿದೆ.

ನೆಟ್ಟಿಗರ ಆಕ್ರೋಶ: ಇದು ಹಗಲು ದರೋಡೆ

ಈ ಕುರಿತು ಪೂಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಇದೀಗ ವೈರಲ್ ಆಗಿದ್ದು, ಮನೆ ಮಾಲೀಕನ ನಡವಳಿಕೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆ ಮುಂಗಡ ಹಣದ ಹೆಸರಿನಲ್ಲಿ ದೊಡ್ಡ ದಂದೆಯೇ ನಡೆಯುತ್ತಿದೆ. ಮನೆ ಮಾಲೀಕರು ತಮ್ಮ ಮನೆಯನ್ನು ಅಪ್‌ಗ್ರೇಡ್ (ಅಲಂಕಾರ/ರಿಪೇರಿ) ಮಾಡಿಕೊಳ್ಳಲು ಬಾಡಿಗೆದಾರರ ಅಡ್ವಾನ್ಸ್ ಹಣವನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ, ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, ಮಾಲೀಕನ ಈ ವಂಚನೆ ವಿರುದ್ಧ ತಕ್ಷಣವೇ ಗ್ರಾಹಕ ನ್ಯಾಯಾಲಯವನ್ನು (Consumer Court) ಸಂಪರ್ಕಿಸುವುದು ಸೂಕ್ತ,” ಎಂದು ಸಲಹೆ ನೀಡಿದ್ದರೆ, ಇನ್ನು ಕೆಲವರು ಇಂತಹ ಮನೆ ಮಾಲೀಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬರುವ ಯುವಕ-ಯುವತಿಯರಿಗೆ ಮನೆ ಮಾಲೀಕರ ಈ ರೀತಿಯ ಕಿರುಕುಳ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular