HomeLatest NewsBREAKING: ಹಳಿ ತಪ್ಪಿದ ಗೂಡ್ಸ್ ರೈಲು: 53 ರೈಲುಗಳ ಸಂಚಾರ ರದ್ದು

BREAKING: ಹಳಿ ತಪ್ಪಿದ ಗೂಡ್ಸ್ ರೈಲು: 53 ರೈಲುಗಳ ಸಂಚಾರ ರದ್ದು

ನವದೆಹಲಿ: ಗೂಡ್ಸ್ ರೈಲೊಂದು ಹಳಿತಪ್ಪಿದ ಪರಿಣಾಮ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಗಾಜಿಯಾಬಾದ್-ದೆಹಲಿ ರೈಲು ಮಾರ್ಗದಲ್ಲಿ ಗೂಡ್ಸ್ ರೈಲು ಹಳಿತಪ್ಪಿದೆ. ಪರಿಣಾಮ ಸುಮಾರು 53 ರೈಲುಗಳ ಸಂಚಾರ ರದ್ದಾಗಿದೆ. ದೆಹಲಿ-ನವದೆಹಲಿ ಮಾರ್ಗದ ಮೂಲಕ 24 ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದ್ದು, 16 ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಗಾಜಿಯಾಬಾದ್-ದೆಹಲಿ, ದೆಹಲಿ ಶಾಹಿಬಾಬದ್, ನವದೆಹಲಿ ಗಾಜಿಯಾಬಾದ್, ಗಾಜಿಯಾಬಾದ್-ನವದೆಹಲಿ ಸೇರಿದಂತೆ 53 ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular