HomeLatest Newsಹಾರರ್ ಜಗತ್ತಿಗೆ ಕಾಲಿಟ್ಟ ಮೈತ್ರಿ ಮೂವಿ ಮೇಕರ್ಸ್: ಜುಲೈ 31ಕ್ಕೆ ಬರಲಿದೆ ರೋಚಕ ಚಿತ್ರ 418

ಹಾರರ್ ಜಗತ್ತಿಗೆ ಕಾಲಿಟ್ಟ ಮೈತ್ರಿ ಮೂವಿ ಮೇಕರ್ಸ್: ಜುಲೈ 31ಕ್ಕೆ ಬರಲಿದೆ ರೋಚಕ ಚಿತ್ರ 418

ಇಲ್ಲಿಯವರೆಗೆ ಭರ್ಜರಿ ಆ್ಯಕ್ಷನ್ ಹಾಗೂ ಕಮರ್ಷಿಯಲ್ ಸಿನಿಮಾಗಳನ್ನು ನೀಡಿ ಸೌಂಡ್ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ, ಇದೀಗ ಮೊದಲ ಬಾರಿಗೆ ಹಾರರ್ ಜಾನರ್ ಕಡೆ ಮುಖ ಮಾಡಿದೆ. ಹೌದು, ಪ್ರಶಾಂತ್ ನೀಲ್ ಪ್ರೆಸೆಂಟ್ಸ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ತೆಲುಗು ಹಾರರ್ ಸಿನಿಮಾ 418 ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವು ಜುಲೈ 31ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಸದ್ದಿಲ್ಲದೆ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿರುವ ಚಿತ್ರತಂಡ, ಮುಂಬರುವ ದಿನಗಳಲ್ಲಿ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ಹಾಗೂ ಟ್ರೈಲರ್ ಲಾಂಚ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ಪತಂಗ್ ವೆಬ್ ಸೀರೀಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ಪ್ರೀತಿ ಪಗದಾಲ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಚರಣ್ ಲಕ್ಕರಾಜು, ಸೂರ್ಯ ರಾಜ್ ಸೇರಿದಂತೆ ಹಲವು ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೀರ್ತನ್ ನಡಗೌಡ ಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ದಿನೇಶ್ ದಿವಾಕರನ್ ಛಾಯಾಗ್ರಹಣ ಹಾಗೂ ವೆಂಕಿ ಜಿಜಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಮೊದಲ ಬಾರಿಗೆ ಮೈತ್ರಿ ಸಂಸ್ಥೆ ಹಾರರ್ ಜಗತ್ತಿಗೆ ಕಾಲಿಟ್ಟಿರುವುದರಿಂದ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Behind this door lies the beginning of all your fears#418TheFilm Grand Release on July 31st, 2026💥#418TheFilmOnJuly31

Produced by @MythriOfficial
Directed by @kirtannadagouda
Presented by #PrashanthNeel
DOP: @dineshdivakar_
Starring #SuryaRaj, @CharanLakkaraju &… pic.twitter.com/SqIDZd5pMJ

— Mythri Movie Makers (@MythriOfficial) July 19, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular