HomeKarnatakaಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಬ್ಲ್ಯಾಕ್ ಮೇಲ್: ಪವರ್ ಫಿಟ್ನೆಸ್ ಜಿಮ್‌ ಟ್ರೇನರ್ ವಿರುದ್ಧ ಪ್ರಕರಣ...

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಬ್ಲ್ಯಾಕ್ ಮೇಲ್: ಪವರ್ ಫಿಟ್ನೆಸ್ ಜಿಮ್‌ ಟ್ರೇನರ್ ವಿರುದ್ಧ ಪ್ರಕರಣ ದಾಖಲು; ಕಾಮುಕನ ಬಂಧನಕ್ಕೆ ಆಗ್ರಹ

ದಾವಣಗೆರೆ: ಹಿಂದೂ ಹೆಸರು ಹೇಳಿಕೊಂಡು ಜಿಮ್ ಟ್ರೇನರ್ ಓರ್ವ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಹಾಗೂ ಬ್ಲ್ಯಾಕ್ ಮೇಲ್ ನಡೆಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಪವರ್ ಫಿಟ್ನೆಸ್ ಜಿಮ್‌ನ ಟ್ರೈನರ್ ಇಸ್ಮಾಯಿಲ್ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪಿ. ಈತ ತಾನು ಹಿಂದು ಎಂಬಂತೆ ಆಕಾಂಕ್ಷ್ ಎಂಬ ಹೆಸರಲ್ಲಿ ಕಳ್ಳಾಟ ನಡೆಸುತ್ತಿದ್ದ. ಇಸ್ಮಾಯಿಲ್ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಿದ್ದು, ಆತನ ಕರಾಳ ಮುಖ ಬಯಲು ಮಾಡಿದ್ದಾರೆ.

ದಾವಣಗೆರೆಯ ಪವರ್ ಫಿಟ್ನೆಸ್ ಜಿಮ್ ಮಾಲೀಕ ಇಸ್ಮಾಯಿಲ್‌ನ ಜಿಮ್ ಜಿಹಾದ್ ಕಹಾನಿಗಳು ಒಂದೊಂದಾಗಿ ಹೊರಬರ್ತಿವೆ. ದಾವಣಗೆರೆ ಮಹಿಳಾ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ಕೊನೆಗೂ ಧೈರ್ಯ ಮಾಡಿ ದೂರು ದಾಖಲಿಸಿದ್ದಾರೆ. ಇನ್ನೂ ಇಸ್ಮಾಯಿಲ್ ತಾಯಿ ಸುದ್ದಿಗೋಷ್ಠಿ ನಡೆಸಿ ಸಂತ್ರಸ್ತೆ ವಿರುದ್ದ ಗಂಭೀರ ಆರೋಪ ಮಾಡಿದ್ರು, ನನ್ನ ಮಗನ ಮೇಲೆ ಹನಿಟ್ರ‍್ಯಾಪ್ ನಡೆದಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಂತ್ರಸ್ತೆಯೊಬ್ಬರು ಇಸ್ಮಾಯಿಲ್ ಮಾಡಿದ ದೌರ್ಜನ್ಯ ತೆರೆದಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದೂವರೆ ವರ್ಷದಿಂದ ಇಲ್ಲಿಗೆ ಬರುತ್ತಿದ್ದ ಈ ಮಹಿಳೆಗೆ ಜಿಮ್ ಟ್ರೈನರ್ ಆಕಾಂಕ್ಷ್ ಅಂತಲೇ ಪರಿಚಯವಾಗಿದ್ದ. ಜಿಮ್ ವಾತಾವರಣ ನೋಡಿ ಇದೊಂದು ಹಿಂದೂ ಜಿಮ್ ಎಂದೇ ಭಾವಿಸಿ ಮಹಿಳೆ ಅಡ್ಮಿಷನ್ ಪಡೆದಿದ್ದರು. ಆದರೆ, ಕೇವಲ ಆರು ತಿಂಗಳ ಹಿಂದೆಯಷ್ಟೇ ಆತನ ಅಸಲಿ ಹೆಸರು `ಇಸ್ಮಾಯಿಲ್’ ಅನ್ನೋದು ಬಯಲಾಗಿದೆ. ಅಷ್ಟೇ ಅಲ್ಲ, ಜಿಮ್‌ನ ಡ್ರೆಸ್ಸಿಂಗ್ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ಮಹಿಳೆಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡುವ ನೀಚ ದಂಧೆ ಮಾಡುವುದಾಗಿ ತಿಳಿಸಿದ್ದಾರೆ.

ಆಕಾಂಕ್ಷ್ ಅಂತ ಆತ ನನ್ನನ್ನು ಪರಿಚಯ ಮಾಡಿಕೊಂಡಿದ್ದ. ಡ್ರೆಸ್ಸಿಂಗ್ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಇಟ್ಟು ನನ್ನ ವಿಡಿಯೋ ರೆಕಾರ್ಡ್ ಮಾಡಿದ್ದ. ನನಗೆ ದುಡ್ಡು ಬೇಕು, ನಾನು ಕರೆದಾಗಲೆಲ್ಲ ಬರಬೇಕು, ಇಲ್ಲವಾದ್ರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕ್ತೀನಿ ಅಂತ ಬೆದರಿಕೆ ಹಾಕುತ್ತಿದ್ದ. ಬೆದರಿಕೆ ಮಾತ್ರವಲ್ಲ, ಮೂರ್ನಾಲ್ಕು ತಿಂಗಳಿಂದ ಸಂತ್ರಸ್ತೆಯ ಪತಿಗೂ ಕರೆ ಮಾಡಿ ಬೆದರಿಸಿದ್ದಾನೆ. ನಾವೊಂದು ಸುಸಂಸ್ಕೃತಕುಟುಂಬದಿಂದ ಬಂದಿದ್ದು, ಹನಿಟ್ರ‍್ಯಾಪ್ ಮಾಡುವ ಯಾವುದೇ ಅಗತ್ಯ ತಮಗಿಲ್ಲ ಎಂದು ಸಂತ್ರಸ್ತೆ ಸ್ಪಷ್ಟಪಡಿಸಿದ್ದಾರೆ.

ಇನ್ನು, ಇಸ್ಮಾಯಿಲ್‌ನ ಟಾರ್ಗೆಟ್ ಆಗಿದ್ದೇ ಜಿಮ್‌ಗೆ ಬರುವ ಹಿಂದೂ ಹೆಣ್ಣುಮಕ್ಕಳು. ಆಕಾಶ್, ಕಿರಣ್, ಆಕಾಂಕ್ಷ್ ಎಂದು ಬೇರೆ ಬೇರೆ ಹೆಸರು ಹೇಳಿ ಮಹಿಳೆಯರ ಬ್ರೈನ್ ವಾಶ್ ಮಾಡುವುದು ಇವನ ಚಾಳಿ. ಈತನ ಈ ಕೃತ್ಯಕ್ಕೆ ಬರೋಬ್ಬರಿ 15ಕ್ಕೂ ಹೆಚ್ಚು ಮಹಿಳೆಯರು ಬಲಿಯಾಗಿದ್ದಾರೆ. ಫೋನ್ ಪೇ ಮತ್ತು ಕ್ಯಾಶ್ ಮೂಲಕ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದಾನೆ. ಮಾನಕ್ಕೆ ಅಂಜಿ ಯಾವ ಹೆಣ್ಣುಮಕ್ಕಳೂ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈತ ಮೊದಲ ಮದುವೆ ಕೂಡ ಆತನ 10 ವರ್ಷಗಳ ಅನೈತಿಕ ಸಂಬಂಧದಿಂದಲೇ ಮುರಿದುಬಿದ್ದಿತ್ತು. ಆ ಮಹಿಳೆಯ ಮನೆ ಬಳಿ ಹೋಗಿ ಈತ ಗಲಾಟೆ ಮಾಡಿದ ಹಿನ್ನೆಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ ಎಂದು ಸಂತ್ರಸ್ತೆ ದೂರಿದ್ದಾಳೆ.

ಒಟ್ಟಿನಲ್ಲಿ ಜಿಮ್ ಜಿಹಾದ್ ಪ್ರಕರಣ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಜಿಮ್‌ಗಳಲ್ಲಿ ಹಾಗೂ ಎಸ್‌ಪಿ ಕಚೇರಿಯಲ್ಲಿ ಟ್ರೈನರ್, ಮಾಲೀಕರ ಸಭೆ ನಡೆಸಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಇನ್ನು ಪ್ರಕರಣದ ತನಿಖೆ ಮುಂದಿವರೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular