HomeLatest Newsರೈಲಿನಲ್ಲೇ ಹೋಮ-ಹವನ ಮಾಡಿದ ಭಕ್ತರು; ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೇ ಇಲಾಖೆಯಿಂದ ಸ್ಪಷ್ಟನೆ | Watch...

ರೈಲಿನಲ್ಲೇ ಹೋಮ-ಹವನ ಮಾಡಿದ ಭಕ್ತರು; ವಿಡಿಯೋ ವೈರಲ್ ಬೆನ್ನಲ್ಲೇ ರೈಲ್ವೇ ಇಲಾಖೆಯಿಂದ ಸ್ಪಷ್ಟನೆ | Watch Video

ಚಲಿಸುವ ರೈಲಿನ ಬೋಗಿಯೊಳಗೆ ಅರ್ಚಕರು ಸಾಂಪ್ರದಾಯಿಕ ಉಡುಪಿನಲ್ಲಿ ದೇವರಿಗೆ ಅಭಿಷೇಕ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೊನೆಗೂ ಭಾರತೀಯ ರೈಲ್ವೆ ಇಲಾಖೆಯು ಅಧಿಕೃತ ಸ್ಪಷ್ಟನೆ ನೀಡಿದ್ದು, ಪೂಜೆ ಮಾಡಿದ ಪ್ರಯಾಣಿಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ರೈಲ್ವೆ ಇಲಾಖೆಯು ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಈ ಪೂಜೆಯು ನಿಯಮಾವಳಿಗಳ ಪ್ರಕಾರವೇ ನಡೆದಿದೆ ಎಂದು ಗೊಂದಲಗಳಿಗೆ ತೆರೆ ಎಳೆದಿದೆ.

ಬರೋಬ್ಬರಿ 3 ಲಕ್ಷ ರೂ. ನೀಡಿ ಬುಕ್ ಮಾಡಲಾಗಿತ್ತು ವಿಶೇಷ ಬೋಗಿ !

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲ್ವೆ ಇಲಾಖೆ ನೀಡಿರುವ ವಿವರಗಳ ಪ್ರಕಾರ, ಈ ವೈರಲ್ ವಿಡಿಯೋ ಜುಲೈ 10 ರಂದು ದೆಹಲಿಯಿಂದ ಮುಂಬೈಗೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12926 ಪಶ್ಚಿಮ ಎಕ್ಸ್‌ಪ್ರೆಸ್ (Paschim Express) ರೈಲಿನದ್ದಾಗಿದೆ. ಈ ರೈಲಿಗೆ ಕಮರ್ಷಿಯಲ್ ಉದ್ದೇಶಗಳಿಗಾಗಿ ಮುಂಚಿತವಾಗಿಯೇ ಬುಕ್ ಮಾಡಲಾಗಿದ್ದ ವಿಶೇಷ ‘ಸಲೂನ್ ಕಾರ್’ (Saloon Car) ಬೋಗಿಯನ್ನು ಲಗತ್ತಿಸಲಾಗಿತ್ತು.

ಈ ಐಷಾರಾಮಿ ಬೋಗಿಗಾಗಿ ಸಂಬಂಧಪಟ್ಟ ಪಾರ್ಟಿಯು ಜುಲೈ 8, 2026 ರಂದು ಐಆರ್‌ಸಿಟಿಸಿ (IRCTC) ಮೂಲಕ ಮುಂಗಡವಾಗಿ ಬರೋಬ್ಬರಿ 3,08,580 ರೂಪಾಯಿ ಹಣ ಪಾವತಿಸಿ ಕಾನೂನುಬದ್ಧವಾಗಿಯೇ ಬುಕ್ಕಿಂಗ್ ಮಾಡಿಕೊಂಡಿತ್ತು. ಇದು ಸಾರ್ವಜನಿಕ ಸಾಮಾನ್ಯ ಬೋಗಿಯಾಗಿರದೆ, ಸಂಪೂರ್ಣವಾಗಿ ಅವರ ವೈಯಕ್ತಿಕ ಬಳಕೆಯಲ್ಲಿದ್ದ ಕೋಚ್ ಆಗಿತ್ತು.

ಯಾರಿಗೂ ಗಾಯಗಳಾಗಿಲ್ಲ, ಸುರಕ್ಷತೆಗೆ ಧಕ್ಕೆಯಾಗಿಲ್ಲ !

ವಿಡಿಯೋ ವೈರಲ್ ಆದ ತಕ್ಷಣ ನೆಟ್ಟಿಗರು ರೈಲಿನಲ್ಲಿ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ವಕ್ತಾರರು, “ಪ್ರಯಾಣಿಕರ ಸುರಕ್ಷತೆ, ಭದ್ರತೆ, ಸಮಯ ಪ್ರಜ್ಞೆ ಮತ್ತು ಸೌಕರ್ಯಗಳಿಗೆ ರೈಲ್ವೆ ಇಲಾಖೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಈ ಘಟನೆಯು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಬುಕ್ ಮಾಡಲಾದ ಸಲೂನ್ ಕಾರ್ ಒಳಗೆ ನಡೆದಿದೆ. ಇದರಿಂದ ರೈಲಿನ ಇತರ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಹಾಗೂ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ‘ಸಲೂನ್ ಕಾರ್’ ನಿಯಮ ?

ರೈಲ್ವೆ ಇಲಾಖೆಯ ನಿಯಮಾವಳಿಗಳ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ವೈಯಕ್ತಿಕ ಅಥವಾ ವಾಣಿಜ್ಯ ಬಳಕೆಗೆ ಐಷಾರಾಮಿ ಸೌಲಭ್ಯಗಳುಳ್ಳ ‘ಸಲೂನ್ ಕಾರ್’ ಅನ್ನು ಬುಕ್ ಮಾಡಬಹುದು. ಈ ಬೋಗಿಗಳು ಒಂದು ಚಲಿಸುವ ಮನೆಯಂತೆ (Moving House) ಇರಲಿದ್ದು, ಇವುಗಳಲ್ಲಿ ಬೆಡ್‌ರೂಮ್, ಕಿಚನ್ ಸೇರಿದಂತೆ ಎಲ್ಲಾ ಸ್ವತಂತ್ರ ಸೌಕರ್ಯಗಳಿರುತ್ತವೆ. ಇವುಗಳನ್ನು ಎಕ್ಸ್‌ಪ್ರೆಸ್ ರೈಲುಗಳ ಹಿಂದೆ ಜೋಡಿಸಲಾಗುತ್ತದೆ.

ಕಳೆದ ವಾರವಷ್ಟೇ ನಂದಿಗ್ರಾಮ್ ಎಕ್ಸ್‌ಪ್ರೆಸ್‌ನ ಫಸ್ಟ್ ಎಸಿ ಕೋಚ್ ಅನ್ನು ‘ಹನಿಮೂನ್ ಸೂಟ್’ ಮಾದರಿಯಲ್ಲಿ ಅಲಂಕರಿಸಿದ ವಿಡಿಯೋ ವೈರಲ್ ಆದಾಗ ರೈಲ್ವೆ ಇಲಾಖೆಯು ಟಿಕೆಟ್ ಚೆಕ್ಕರ್ ಅನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿತ್ತು. ಆದರೆ ಪ್ರಸ್ತುತ ಪಶ್ಚಿಮ ಎಕ್ಸ್‌ಪ್ರೆಸ್ ಪ್ರಕರಣದಲ್ಲಿ ಪ್ರಯಾಣಿಕರು ಲಕ್ಷಾಂತರ ರೂಪಾಯಿ ನೀಡಿ ಅಧಿಕೃತವಾಗಿಯೇ ಬೋಗಿ ಬುಕ್‌ ಮಾಡಿದ್ದರಿಂದ ಇಲಾಖೆ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ.

हेलो @AshwiniVaishnaw जी,

क्या ऐसा करना रेलवे के नियम के अंतर्गत आता है?
क्या इस पर भी कोई कार्यवाही होगी?@RailMinIndiapic.twitter.com/vpsOkgKgaF

— खुचरेंप (@khuchrep) July 12, 2026

“>View tweet

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular