HomeEntertainmentKalki 2898 AD ವಿಮರ್ಶಕರಿಗೆ ನಾಗ್ ಅಶ್ವಿನ್ ಖಡಕ್ ಉತ್ತರ: Kalki ಭಾಗ 2 ಮೇಲೆ...

Kalki 2898 AD ವಿಮರ್ಶಕರಿಗೆ ನಾಗ್ ಅಶ್ವಿನ್ ಖಡಕ್ ಉತ್ತರ: Kalki ಭಾಗ 2 ಮೇಲೆ ನಿರೀಕ್ಷೆ

ಸಿನಿಮಾ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳಿಂದ ಸಾಮಾನ್ಯವಾಗಿ ದೂರ ಉಳಿಯುವ ಕಲ್ಕಿ 2898 ಎಡಿ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್, ಇದೀಗ ತಮ್ಮ ಚಿತ್ರದ ಮೇಲಿನ ಟೀಕೆಗಳಿಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಚಿತ್ರದಲ್ಲಿ ಕರ್ಣನ ಪಾತ್ರವನ್ನು ಬಿಂಬಿಸಿದ ರೀತಿಗೆ ಕೇಳಿಬಂದ ಅಪಸ್ವರಕ್ಕೆ ಅವರು ನೇರವಾಗಿಯೇ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಅಖಿಲ್ ನಟನೆಯ ಲೆನಿನ್ ಚಿತ್ರದಲ್ಲಿ ಪ್ರಮೋದ್ ಪಂಜು ಅವರ ನಟನೆಯನ್ನು ಶ್ಲಾಘಿಸಿದ್ದ ನೆಟ್ಟಿಗರೊಬ್ಬರು, ದೊಡ್ಡ ಪರದೆಯ ಮೇಲೆ ಕರ್ಣನ ಪಾತ್ರವನ್ನು ಹೀಗೆಯೇ ತೋರಿಸಬೇಕು ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಕ್ರಮೇಣ ಕಲ್ಕಿ ಚಿತ್ರದ ಮೇಲಿನ ನೇರ ವಾಗ್ದಾಳಿಯಾಗಿ ಮಾರ್ಪಟ್ಟಿತ್ತು. ನಾಗ್ ಅಶ್ವಿನ್ ಅವರು ಚಿತ್ರದಲ್ಲಿ ಕರ್ಣನನ್ನು ಅತಿಯಾಗಿ ವೈಭವೀಕರಿಸಿದ್ದಾರೆ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ಇತಿಹಾಸಕ್ಕೆ ಮಾಡಿದ ಅಪಚಾರ ಎಂದು ಕೆಲವರು ಆರೋಪಿಸಿದ್ದರು.

ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆ, ನಿರ್ದೇಶಕ ನಾಗ್ ಅಶ್ವಿನ್ ಅವರು ಮಹಾಭಾರತದ ಆಧಾರ ಸಹಿತ ವಿಮರ್ಶಕರಿಗೆ ಬಾಯಿ ಮುಚ್ಚಿಸಿದ್ದಾರೆ. ಪ್ರಖ್ಯಾತ ಲೇಖಕ ಬಿಬೆಕ್ ಡೆಬ್ರಾಯ್ ಅವರ ಮಹಾಭಾರತ ಅನುವಾದಿತ ಪುಸ್ತಕದ ಪುಟವೊಂದನ್ನು ಹಂಚಿಕೊಂಡಿರುವ ಅವರು, ಮೊದಲು ಮಹಾಭಾರತವನ್ನು ಸರಿಯಾಗಿ ಓದಿ ಎಂದು ಸಲಹೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದ್ರೋಣ ವಧ ಪರ್ವದಲ್ಲಿ ಶ್ರೀಕೃಷ್ಣನೇ ಸ್ವತಃ ಅರ್ಜುನನಿಗೆ ಕರ್ಣನ ಬಗ್ಗೆ ಹೇಳಿರುವ ಮಾತುಗಳು ಇವು ಎಂದು ಉಲ್ಲೇಖಿಸಿರುವ ನಾಗ್ ಅಶ್ವಿನ್, ಮಹಾಭಾರತದಲ್ಲಿ ಕೃಷ್ಣನು ಅರ್ಜುನನ ಮುಂದೆ ಕರ್ಣನನ್ನು ಎಷ್ಟು ಬಾರಿ ಹೊಗಳಿದ್ದಾನೆ ಎಂಬುದನ್ನು ಗೂಗಲ್ ಮಾಡಿ ನೋಡಿ ಎಂದಿದ್ದಾರೆ. ನಮ್ಮ ಇತಿಹಾಸ ಮತ್ತು ಪುರಾಣಗಳ ಮೇಲೆ ನನಗೆ ಅಪಾರ ಗೌರವವಿದೆ. ನಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ನನಗಿದೆ. ಚಿತ್ರದ ಎರಡನೇ ಭಾಗ ಬರುವವರೆಗೂ ಕಾಯಿರಿ ಎಂದು ಬರೆಯುವ ಮೂಲಕ ಟೀಕಾಕಾರರ ಸವಾಲನ್ನು ಸ್ವೀಕರಿಸಿದ್ದಾರೆ.

ನಿರ್ದೇಶಕರ ಈ ಖಡಕ್ ಪ್ರತಿಕ್ರಿಯೆ ಈಗ ಅಂತರ್ಜಾಲದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಹೇಳಿರುವ ಎರಡನೇ ಭಾಗದವರೆಗೂ ಕಾಯಿರಿ ಎಂಬ ಮಾತು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮುಂದಿನ ಭಾಗದಲ್ಲಿ ಕರ್ಣನ ಕಥೆಯನ್ನು ಅವರು ಹೇಗೆ ಮುಂದುವರಿಸಲಿದ್ದಾರೆ ಎಂಬುದನ್ನು ನೋಡಲು ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ. ಇದರ ನಡುವೆ, ನಾಗ್ ಅಶ್ವಿನ್ ಅವರು ಇತ್ತೀಚೆಗೆ ದಂತಕಥೆ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಸಿಂಗ್ ಗೀತಂ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular