ತುಮಕೂರು: ಯಲಹಂಕ -ಅರಸೀಕೆರೆ -ಯಲಹಂಕ ಮೆಮು ರೈಲು ಸೇವೆ ಪ್ರಾರಂಭಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಮೆಮು ರೈಲು ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 6:45 ಕ್ಕೆ ಯಲಹಂಕದಿಂದ ಹೊರಟು 11 ಗಂಟೆ ವೇಳೆಗೆ ಅರಸೀಕೆರೆಗೆ ತಲುಪಲಿದೆ. ಅದೇ ರೈಲು ಮಧ್ಯಾಹ್ನ 2.10ಕ್ಕೆ ಅರಸೀಕೆರೆಯಿಂದ ಹೊರಟು ಸಂಜೆ 7:15ಕ್ಕೆ ಯಲಹಂಕ ತಲುಪಲಿದೆ.
ಜುಲೈ 13 ರಂದು ಸಂಜೆ 4:30ಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಪಟೂರಿನಲ್ಲಿ ಈ ಮೆಮು ರೈಲಿ ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಉದ್ಘಾಟನಾ ವಿಶೇಷ ರೈಲು ತಿಪಟೂರು ಯಲಹಂಕ ನಡುವೆ ಕಾರ್ಯಾಚರಣೆ ನಡೆಸಲಿದ್ದು, ತುಮಕೂರು ಯಶವಂತಪುರ ಮೂಲಕ ಹಾದು ಯಲಹಂಕವನ್ನು ರಾತ್ರಿ 8 ಗಂಟೆಗೆ ತಲುಪಲಿದೆ.
ಜುಲೈ 14 ರಿಂದ ನಿಯಮಿತ ರೈಲು ಸಂಚಾರ ಆರಂಭವಾಗಲಿದ್ದು, ಕೊಡಿಗೆಹಳ್ಳಿ, ಯಶವಂತಪುರ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ಬೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡವಂದ, ದಾಬಸ್ ಪೇಟೆ, ಹಿರೇಹಳ್ಳಿ, ಕ್ಯಾತಸಂದ್ರ, ತುಮಕೂರು, ಹೆಗ್ಗರೆ, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರಡಿ, ಬನಶಂಕರಿ, ತಿಪಟೂರು, ಶ್ರೀ ಶಾರದಾ ನಗರ, ಹೊನ್ನವಳ್ಳಿ ರೋಡ್, ಆದಿಹಳ್ಳಿ ನಿಲ್ದಾಣಗಳಲ್ಲಿ ಇರುತ್ತದೆ.

