HomeKarnatakaಪದ್ಮಭೂಷಣ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದ ಗಾಯಕಿ ಎಸ್.ಜಾನಕಿ: ಕಾರಣವೇನು?

ಪದ್ಮಭೂಷಣ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದ ಗಾಯಕಿ ಎಸ್.ಜಾನಕಿ: ಕಾರಣವೇನು?

ಮೈಸೂರು: ಲೆಜೆಂಡರಿ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ನಿಧನ ಭಾರತೀಯ ಸಂಗೀತ ಳೊಕಕ್ಕೆ ತುಂಬಲಾರದ ನಷ್ಟವುಂಟುಮಾಡಿದೆ. ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಆರ್​ಪಿ ಪಟ್ನಾಯಕ್ ಅವರು, ಜಾನಕಮ್ಮ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರು ಕೇಂದ್ರ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಎಸ್.ಜಾನಕಿ ಅಮ್ಮ ಕೇವಲ ಗಾಯಕಿಯಲ್ಲ, ಅವರೊಂದು ಸಂಗೀತ ಶಾಲೆ. ಇಳಯರಾಜ ಅವರ ಸಂಗೀತ, ಎಸ್​.ಪಿ.ಬಾಅಲಸುಬ್ರಹ್ಮಣ್ಯಂ ಅವರ ಧ್ವನಿ ಹಾಗೂ ಜಾನಕಮ್ಮ ಅವರ ಗಾಯನವೇ ನಾನು ಸಂಗೀತ ಕ್ಷೇತ್ರಕ್ಕೆ ಬರಲು ಪ್ರಮುಖ ಪ್ರೇರಣೆ. ಎಸ್​ಪಿ ಬಾಲಸುಬ್ರಹ್ಮಣ್ಯಂ ಮತ್ತು ಜಾನಕಿ ಅವರ ಕಾಂಬಿನೇಷನ್ ಒಂದು ಅದ್ಭುತ ಮ್ಯಾಜಿಕ್. ಇಂದು ನಾವು ಬಾಲಣ್ಣನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆಯೋ, ಅದೇ ಮಟ್ಟದಲ್ಲಿ ಜಾನಕಮ್ಮ ಅವರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಕಳೆದ ಮಾರ್ಚ್ 21ರಂದು ನಾನು ವೈಜಾಗ್‌ನಲ್ಲಿ ಅವರನ್ನು ಕೊನೆಯ ಬಾರಿಗೆ ಭೇಟಿಯಾಗಿದ್ದೆ. 87ರ ಹರೆಯದಲ್ಲೂ ಅವರು ತಾಯಿಯಂತೆ ನಮ್ಮನ್ನು ಬರಮಾಡಿಕೊಂಡು ಅತ್ಯಂತ ಉತ್ಸಾಹದಿಂದ ಮಾತನಾಡಿಸಿದ್ದರು ಎಂದು ಪಟ್ನಾಯಕ್ ಸ್ಮರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾನಕಮ್ಮ ಅವರ ಧ್ವನಿಯಲ್ಲಿ ನೂರಾರು ಭಾವನೆಗಳು ಮೂಡಿಬರುತ್ತಿದ್ದವು. ಒಮ್ಮೆ ಎಸ್​.ಪಿ ಬಾಲಸುಬ್ರಹ್ಮಣ್ಯಂ ಅವರು ನನ್ನ ಬಳಿ ಹೇಳಿದ್ದರು. ಹಾಡುವಾಗ ಜಾನಕಮ್ಮ ಗಂಟಲಿನಲ್ಲಿ ಎಷ್ಟೇ ಎಕ್ಸ್‌ಪ್ರೆಶನ್ ತಂದರೂ, ಅವರ ಮುಖದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುತ್ತಿರಲಿಲ್ಲ, ಒಂದೇ ಮುಖಭಾವ ಇರುತ್ತಿತ್ತು. ಅದು ಹೇಗೆ ಸಾಧ್ಯವಾಗುತ್ತದೆಯೋ ಆ ಮಹಾತಾಯಿಗೆ ಅಂತ ಬಾಲಸುಬ್ರಹ್ಮಣ್ಯಂ ಅವರು ಜಾನಕಮ್ಮ ಅವರ ಪ್ರತಿಭೆಯನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಅವರು ಒಂದೇ ಟೇಕ್‌ನಲ್ಲಿ ಹಾಡಿದ ‘ನೀ ಲೀಲಾ ಪಾಡೆದ ದೇವಾ’ ಹಾಡು ಇಂದಿಗೂ ನನಗೆ ಒಂದು ದೊಡ್ಡ ವಿಸ್ಮಯ ಎಂದಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಜಾನಕಿ ಅವರು ತಿರಸ್ಕರಿಸಿದ್ದರು. ಪ್ರಶಸ್ತಿಗಳಿಗೆ ಜಾನಕಮ್ಮ ಅವರ ಹೆಸರು ಸೇರಿದರೆ ಆ ಪ್ರಶಸ್ತಿಗೆ ಗೌರವ ಬರುತ್ತದೆ ವಿನಃ, ಪ್ರಶಸ್ತಿಗಳಿಂದ ಜಾನಕಮ್ಮ ಅವರಿಗೆ ಸಿಗುವ ಗೌರವ ಏನೂ ಇಲ್ಲ. ಅವರು ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲಾದ ಎತ್ತರದಲ್ಲಿದ್ದಾರೆ. ಅವರಿಗೆ ಪದ್ಮಭೂಷಣ ಪ್ರಶಸ್ತಿ ಎಷ್ಟೋ ವರ್ಷಗಳ ಹಿಂದೆಯೇ ಸಿಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಅತ್ಯಂತ ತಡವಾಗಿ ಅಂದರೆ ಅವರ ವೃತ್ತಿಜೀವನದ ಕೊನೆಯ ದಿನಗಳಲ್ಲಿ ಪ್ರಶಸ್ತಿ ಪ್ರಕಟಿಸಿತು. ದಕ್ಷಿಣ ಭಾರತದ ಕಲಾವಿದರಿಗೆ ಮಾಡಿದ ಈ ತಾರತಮ್ಯ ಹಾಗೂ ವಿಳಂಬ ನೀತಿಯಿಂದ ಜಾನಕಮ್ಮನವರು ತೀವ್ರವಾಗಿ ನೊಂದುಕೊಂಡಿದ್ದರು. ಹಾಗಾಗಿ ಅವರು ಆ ಪ್ರಶಸ್ತಿಯನ್ನು ಗೌರವಪೂರ್ವಕವಾಗಿಯೇ ತಿರಸ್ಕರಿಸಿದ್ದರು. ಅವರು ಪ್ರಶಸ್ತಿಗಳಿಗಿಂತ ಮಿಗಿಲಾದ ಜನಮನದ ಕಲಾ ಸರಸ್ವತಿ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular