HomeIndiaಕುಡಿಯುವ ನೀರು ಎಂದು Acid ಕುಡಿದ ಮಹಿಳಾ ಶಿಕ್ಷಕಿ: ಉತ್ತರ ಪ್ರದೇಶದ ಆಭರಣ ಅಂಗಡಿಯಲ್ಲಿ ಭೀಕರ...

ಕುಡಿಯುವ ನೀರು ಎಂದು Acid ಕುಡಿದ ಮಹಿಳಾ ಶಿಕ್ಷಕಿ: ಉತ್ತರ ಪ್ರದೇಶದ ಆಭರಣ ಅಂಗಡಿಯಲ್ಲಿ ಭೀಕರ ಘಟನೆ

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಮತ್ತು ಜನರನ್ನು ಬೆಚ್ಚಿಬೀಳಿಸುವ ಘಟನೆಯೊಂದು ಸಂಭವಿಸಿದೆ. ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿದ್ದು, ಸದ್ಯ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಇಡೀ ಭೀಕರ ದೃಶ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮೂಡಿಸಿದೆ.

ನಡೆದಿದ್ದೇನು? ಶುಕ್ರವಾರ ಸಂಜೆ ಶಿಕ್ಷಕಿಯೊಬ್ಬರು ತಮ್ಮ ತಾಯಿಯೊಂದಿಗೆ ಅರ್ಜುನ್ ನಗರದ ಜ jewellery shop ಒಂದಕ್ಕೆ ಚಿನ್ನಾಭರಣ ಖರೀದಿಸಲು ಬಂದಿದ್ದರು. ಈ ವೇಳೆ ಅವರು ಕುಡಿಯಲು ನೀರು ಕೇಳಿದ್ದಾರೆ. ತಕ್ಷಣವೇ ಅಂಗಡಿಯ ಮಾಲೀಕರು ಪಕ್ಕದ ಬೇಕರಿಯಿಂದ ನೀರಿನ ಬಾಟಲಿ ತರುವಂತೆ ತಮ್ಮ ಸಹಾಯಕನಿಗೆ ಸೂಚಿಸಿದ್ದಾರೆ. ಸಹಾಯಕ ತಂದುಕೊಟ್ಟ ಬಾಟಲಿಯಿಂದ ಶಿಕ್ಷಕಿಯ ತಾಯಿ ತನ್ನ ಮಗಳಿಗೆ ನೀರನ್ನು ನೀಡಿದ್ದಾರೆ. ಆದರೆ ಆ ಬಾಟಲಿಯಲ್ಲಿದ್ದ ದ್ರವವನ್ನು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಶಿಕ್ಷಕಿಗೆ ಗಂಟಲಿನಲ್ಲಿ ತೀವ್ರ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಗಾಬರಿಯಿಂದ ಅಂಗಡಿಯಿಂದ ಹೊರಗೆ ಓಡಿದ್ದಾರೆ. ಏನಾಗುತ್ತಿದೆ ಎಂದು ತಿಳಿಯದ ತಾಯಿ ಮತ್ತು ಅಂಗಡಿ ಮಾಲೀಕರು ತಬ್ಬಿಬ್ಬಾಗಿ ಅವರ ಹಿಂದೆಯೇ ಓಡಿದ್ದಾರೆ.

ಆಸ್ಪತ್ರೆಗೆ ದಾಖಲು ಆಸಿಡ್ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದ ಶಿಕ್ಷಕಿಯನ್ನು ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಶಿಕ್ಷಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಭರಣಗಳನ್ನು ಸ್ವಚ್ಛಗೊಳಿಸಲು ಅಂಗಡಿಗಳಲ್ಲಿ ಆಸಿಡ್ ಬಳಸುವುದರಿಂದ, ನೀರಿನ ಬಾಟಲಿ ಮತ್ತು ಆಸಿಡ್ ಬಾಟಲಿ ಅದಲು ಬದಲಾಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಗೆ ಬೇಜವಾಬ್ದಾರಿಯೇ ಕಾರಣವೇ ಅಥವಾ ಇದರ ಹಿಂದೆ ಬೇರೆನಾದರೂ ಸಂಚಿದೆಯೇ ಎಂಬ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಈ ಸಿಸಿಟಿವಿ ವಿಡಿಯೋ ಅಂತರಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಗಡಿ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಇನ್ನು ಕೆಲವರು, ಹೊರಗಡೆ ಓಡಾಡುವಾಗ ಇಂತಹ ಅಪಾಯಗಳಿಂದ ಪಾರಾಗಲು ಯಾವಾಗಲೂ ನಮ್ಮದೇ ಆದ ಕುಡಿಯುವ ನೀರಿನ ಬಾಟಲಿಯನ್ನು ಕೊಂಡೊಯ್ಯುವುದು ಉತ್ತಮ ಎಂದು ಕಳಕಳಿಯ ಸಲಹೆ ನೀಡುತ್ತಿದ್ದಾರೆ.

View tweet

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular