HomeLatest NewsALERT : ರೈಲ್ವೇ ಪ್ರಯಾಣಿಕರೇ ಎಚ್ಚರ ; ಇನ್ಮುಂದೆ ಮೊಬೈಲ್'ನಲ್ಲಿ ಟಿಕೆಟ್ ತೋರಿಸಿದರೆ ದಂಡ...

ALERT : ರೈಲ್ವೇ ಪ್ರಯಾಣಿಕರೇ ಎಚ್ಚರ ; ಇನ್ಮುಂದೆ ಮೊಬೈಲ್’ನಲ್ಲಿ ಟಿಕೆಟ್ ತೋರಿಸಿದರೆ ದಂಡ ಫಿಕ್ಸ್.!

ನವದೆಹಲಿ: ರೈಲು ನಿಲ್ದಾಣಗಳಲ್ಲಿ ಕೌಂಟರ್‌ಗಳ ಮುಂದೆ ಸಾಲಿನಲ್ಲಿ ನಿಲ್ಲದೆ ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬುಕ್ ಮಾಡಿಕೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ.

ಇನ್ನು ಮುಂದೆ ಪ್ರಯಾಣದ ವೇಳೆ ರೈಲ್‌ವನ್ (RailOne) ಆ್ಯಪ್ ಮೂಲಕ ಬುಕ್ ಮಾಡಿದ ಮೂಲ (Original) ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯವಾಗುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಮಹಿಳಾ ಪ್ರಯಾಣಿಕೆಯೊಬ್ಬರು ವಾಟ್ಸ್‌ಆಪ್‌ನಲ್ಲಿ ಬಂದ ಟಿಕೆಟ್‌ನ ಸ್ಕ್ರೀನ್‌ಶಾಟ್ ತೋರಿಸಿದ್ದರು. ಆದರೆ ಪರಿಶೀಲಿಸಿದಾಗ ರೈಲು ಹೊರಟ ನಂತರವೇ ಟಿಕೆಟ್ ಬುಕ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಪರಿಶೀಲಕ (ಟಿಟಿಇ) ದಂಡ ವಿಧಿಸಿದ್ದರು. ಈ ಘಟನೆಯ ನಂತರ ರೈಲ್ವೆ ಇಲಾಖೆ ರೈಲ್‌ವನ್ ಆ್ಯಪ್ ಮೂಲಕ ಬುಕ್ ಮಾಡುವ ಅನ್‌ರಿಸರ್ವ್ಡ್ ಟಿಕೆಟ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹೊಸ ನಿಯಮಗಳು: ಇವುಗಳಿಗೆ ಮಾನ್ಯತೆ ಇಲ್ಲ!

ರೈಲ್ವೆ ಮಂಡಳಿ ಪರಿಷ್ಕರಿಸಿದ ನಿಯಮಗಳ ಪ್ರಕಾರ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಟಿಕೆಟ್‌ನ ಸ್ಕ್ರೀನ್‌ಶಾಟ್,
  • ಮೊಬೈಲ್‌ನಲ್ಲಿ ಉಳಿಸಿಕೊಂಡಿರುವ ಟಿಕೆಟ್ ಫೋಟೋ,
  • ಪಿಡಿಎಫ್ (PDF) ಪ್ರತಿಗಳು,
  • ವಾಟ್ಸ್‌ಆಪ್ ಅಥವಾ ಇತರ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಬಂದ ಟಿಕೆಟ್‌ಗಳು ಇನ್ನು ಮುಂದೆ ಮಾನ್ಯವಾಗುವುದಿಲ್ಲ.

ಇಂತಹ ದಾಖಲೆಗಳನ್ನು ತೋರಿಸಿ ಪ್ರಯಾಣಿಸಿದರೆ, ಅವರನ್ನು ಟಿಕೆಟ್ ಇಲ್ಲದ ಪ್ರಯಾಣಿಕರು ಎಂದು ಪರಿಗಣಿಸಿ ಭಾರಿ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಅದೇ ಮೊಬೈಲ್ ಸಂಖ್ಯೆ ಮತ್ತು ಅದೇ ಮೊಬೈಲ್‌ನಲ್ಲಿ ರೈಲ್‌ವನ್ ಆ್ಯಪ್ ತೆರೆಯುವ ಮೂಲಕ ಮೂಲ ಡಿಜಿಟಲ್ ಟಿಕೆಟ್‌ನ್ನು ಟಿಕೆಟ್ ಪರಿಶೀಲಕರಿಗೆ ತೋರಿಸಬೇಕು.

ಹೊಸ ನಿಯಮಗಳ ಪ್ರಕಾರ, ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್‌ಗಳನ್ನು ರೈಲು ಹೊರಡುವ ಮುನ್ನವೇ, ಪ್ರಯಾಣಿಕರು ಏರಬೇಕಾದ ಬೋರ್ಡಿಂಗ್ ನಿಲ್ದಾಣದಿಂದಲೇ ಬುಕ್ ಮಾಡಿರಬೇಕು. ರೈಲು ನಿಲ್ದಾಣವನ್ನು ಬಿಟ್ಟ ನಂತರ ಜನರೇಟ್ ಆಗುವ ಯಾವುದೇ ಡಿಜಿಟಲ್ ಟಿಕೆಟ್ ಮಾನ್ಯವಾಗುವುದಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಈ ಹೊಸ ನಿಯಮಗಳು ಅನ್‌ರಿಸರ್ವ್ಡ್ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ. ಸ್ಲೀಪರ್, ಎಸಿ ಸೇರಿದಂತೆ ರಿಸರ್ವ್ಡ್ ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅಂತಹ ಟಿಕೆಟ್‌ಗಳನ್ನು ಆಧಾರ್, ಪ್ಯಾನ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿಗಳ ಮೂಲಕ ಪರಿಶೀಲಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular