HomeLatest NewsSHOCKING : ಪತ್ನಿಯನ್ನು ಕೊಂದು ಶವದ ಫೋಟೋ ಲವರ್'ಗೆ ಕಳುಹಿಸಿದ ಆರೋಪ ; ಅಮೆರಿಕದಲ್ಲಿ ಭಾರತೀಯ...

SHOCKING : ಪತ್ನಿಯನ್ನು ಕೊಂದು ಶವದ ಫೋಟೋ ಲವರ್’ಗೆ ಕಳುಹಿಸಿದ ಆರೋಪ ; ಅಮೆರಿಕದಲ್ಲಿ ಭಾರತೀಯ ಮೂಲದ ಟೆಕ್ಕಿ ಅರೆಸ್ಟ್

ಮದುವೆಯಾಗಿ ಕೇವಲ ನಾಲ್ಕೇ ತಿಂಗಳಲ್ಲೇ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಆರೋಪದ ಮೇಲೆ ತೆಲಂಗಾಣ ಮೂಲದ ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ‘ನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಬಳಿಕ ಪತ್ನಿಯ ಶವದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರಿಯತಮೆಗೆ ಕಳುಹಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ವಾಟ್ಸಾಪ್ ಚಾಟ್ಗಳು, ಡಿಜಿಟಲ್ ದಾಖಲೆಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣದ ತನಿಖೆ ಮುಂದುವರಿದಿದೆ.

ಹೌದು, ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ಲೆವ್ಯೂ ನಗರದಲ್ಲಿ ವಾಸಿಸುತ್ತಿದ್ದ ತೆಲಂಗಾಣ ಮೂಲದ ಭಾರತೀಯ ಸಾಫ್ಟ್ವೇರ್ ಎಂಜಿನಿಯರ್ ಅವಿನಾಶ್ ನಾರ್ನೆ (30) ತನ್ನ ಪತ್ನಿ ರಾಜಿತಾ ಸಬ್ಬಿನೇನಿ (27) ಅವರನ್ನು ಮದುವೆಯಾದ ನಾಲ್ಕೇ ತಿಂಗಳಲ್ಲಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾನೆ.

ಹತ್ಯೆಯ ನಂತರ ಪತ್ನಿಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರಿಯತಮೆಗೆ ಕಳುಹಿಸಿದ್ದಾನೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.ವರದಿಗಳ ಪ್ರಕಾರ, ಹತ್ಯೆ ನಡೆದ ದಿನವೇ ಅವಿನಾಶ್ ತನ್ನ ಪ್ರಿಯತಮೆಯೊಂದಿಗೆ ನಾಲ್ಕು ಬಾರಿ ದೂರವಾಣಿ ಮೂಲಕ ಮಾತನಾಡಿದ್ದಾನೆ. ಅಲ್ಲದೆ, ಮೃತದೇಹದ ಫೋಟೋವನ್ನೂ ಆಕೆಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಮವಾರ ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ ಅವಿನಾಶ್ ನಾರ್ನೆ ತನ್ನ ವಿರುದ್ಧದ ಪ್ರಥಮ ದರ್ಜೆ ಕೊಲೆ (First-Degree Murder) ಆರೋಪವನ್ನು ನಿರಾಕರಿಸಿದ್ದಾನೆ. ಆದರೆ ನ್ಯಾಯಾಧೀಶರು ಟಿವಿ ಕ್ಯಾಮೆರಾಗಳಿಂದ ಮುಖ ಮುಚ್ಚಿಕೊಳ್ಳಲು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶಿಸಿದ್ದಾರೆ. ಜೊತೆಗೆ 50 ಲಕ್ಷ ಡಾಲರ್ (5 ಮಿಲಿಯನ್ ಡಾಲರ್) ಜಾಮೀನನ್ನೂ ಯಥಾಸ್ಥಿತಿಯಲ್ಲಿ ಮುಂದುವರಿಸಿದ್ದಾರೆ.ಪ್ರಸ್ತುತ ಅವಿನಾಶ್ ಕಿಂಗ್ ಕೌಂಟಿ ಜೈಲುದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಗೆ ಕಾಯುತ್ತಿದ್ದಾನೆ.

ಘಟನೆ ಹೇಗೆ ಬೆಳಕಿಗೆ ಬಂತು?
2025ರ ಅಕ್ಟೋಬರ್ 27ರಂದು ಅವಿನಾಶ್ 911ಕ್ಕೆ ಕರೆ ಮಾಡಿ, ತನ್ನ ಪತ್ನಿ ಬಾತ್ರೂಮ್ನಲ್ಲಿ ಅಚೇತನ ಸ್ಥಿತಿಯಲ್ಲಿ ಬಿದ್ದಿದ್ದಾಳೆ ಎಂದು ಮಾಹಿತಿ ನೀಡಿದ್ದ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಾರ್ಟ್ಮೆಂಟ್ನ ಬಾತ್ರೂಮ್ನಲ್ಲಿ ರಾಜಿತಾ ಮೃತದೇಹವನ್ನು ಪತ್ತೆಹಚ್ಚಿದರು. ವೈದ್ಯಕೀಯ ಸಿಬ್ಬಂದಿ ಜೀವ ಉಳಿಸಲು ಪ್ರಯತ್ನಿಸಿದರೂ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.ಆರಂಭದಲ್ಲಿ ಅವಿನಾಶ್, “ಮನೆಗೆ ಬಂದಾಗ ಈ ಸ್ಥಿತಿಯಲ್ಲಿ ಪತ್ನಿಯನ್ನು ಕಂಡೆ” ಎಂದು ಪೊಲೀಸರಿಗೆ ಹೇಳಿದ್ದ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ
ಆದರೆ ಕಿಂಗ್ ಕೌಂಟಿ ವೈದ್ಯಕೀಯ ಪರೀಕ್ಷಾಧಿಕಾರಿಗಳ ಕಚೇರಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ, ರಾಜಿತಾ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ದೃಢಪಟ್ಟಿತು. ಇದಾದ ಬಳಿಕ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿದರು.

ವಾಟ್ಸಾಪ್ ಚಾಟ್, ಡಿಜಿಟಲ್ ದಾಖಲೆಗಳು ಪ್ರಮುಖ ಸಾಕ್ಷಿ
ತನಿಖಾಧಿಕಾರಿಗಳು ವಾಟ್ಸಾಪ್ ಸಂದೇಶಗಳು, ಎಲೆಕ್ಟ್ರಾನಿಕ್ ಡೋರ್ ಲಾಕ್ ದಾಖಲೆಗಳು ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅವಿನಾಶ್ ಹೊರತುಪಡಿಸಿ ಬೇರೆ ಯಾರೂ ಅಪಾರ್ಟ್ಮೆಂಟ್ಗೆ ಪ್ರವೇಶಿಸಿಲ್ಲ ಎಂಬುದು ಎಲೆಕ್ಟ್ರಾನಿಕ್ ದಾಖಲೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇದಲ್ಲದೆ, ವಿಚಾರಣೆ ವೇಳೆ ಅವಿನಾಶ್ ಅಳಿಸಿ ಹಾಕಿದ್ದ ಮೃತದೇಹದ ಫೋಟೋ ಕುರಿತು ಸ್ವತಃ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಇದನ್ನೂ ತನಿಖಾಧಿಕಾರಿಗಳು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ.

ಭಾರತದಲ್ಲಿದ್ದ ಪ್ರಿಯತಮೆಯೊಂದಿಗೆ ಸಂಬಂಧ

ರಾಜಿತಾ ಸಾವಿನ ಸಮಯದಲ್ಲೇ ಅವಿನಾಶ್ ಭಾರತದಲ್ಲಿದ್ದ ಮತ್ತೊಬ್ಬ ಯುವತಿಯೊಂದಿಗೆ ರಹಸ್ಯ ಪ್ರೇಮ ಸಂಬಂಧ ಹೊಂದಿದ್ದನು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಹತ್ಯೆಯ ಬಳಿಕವೂ ಅವಳೊಂದಿಗೆ ಸಂಪರ್ಕದಲ್ಲಿದ್ದನೆಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅವಿನಾಶ್ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ಪ್ರಕರಣದ ವಿಚಾರಣೆ ಮುಂದುವರಿಯುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular