HomeKarnatakaಸರ್ಕಾರಿ ನೌಕರರ ಗಮನಕ್ಕೆ: ಕುಟುಂಬದ ಹಿತದೃಷ್ಟಿಯಿಂದ ವೇತನ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಖಾತೆಗೆ ಪರಿವರ್ತಿಸಿ ಉಚಿತ...

ಸರ್ಕಾರಿ ನೌಕರರ ಗಮನಕ್ಕೆ: ಕುಟುಂಬದ ಹಿತದೃಷ್ಟಿಯಿಂದ ವೇತನ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಖಾತೆಗೆ ಪರಿವರ್ತಿಸಿ ಉಚಿತ ಸೌಲಭ್ಯ ಪಡೆದುಕೊಳ್ಳಿ

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಕುಟುಂಬದ ಹಿತದೃಷ್ಟಿಯಿಂದ ವೇತನ ಪಡೆಯುವ ಖಾತೆಯನ್ನು “ಸಂಬಳ ಪ್ಯಾಕೇಜ್” (Salary Package) ಖಾತೆಗೆ ಪರಿವರ್ತಿಸಿಕೊಂಡು ಬ್ಯಾಂಕ್‌ಗಳು ನೀಡುವ ಉಚಿತ ಸೌಲಭ್ಯವನ್ನು ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ಅನಿರೀಕ್ಷಿತ ದುರ್ಘಟನೆಗಳು ಸಂಭವಿಸಿದಾಗ ನೌಕರರ ಕುಟುಂಬಗಳು ಆರ್ಥಿಕವಾಗಿ ಅಸಹಾಯಕ ಸ್ಥಿತಿಗೆ ತಲುಪಬಾರದು ಎಂಬ ದೃಢ ಸಂಕಲ್ಪದಿಂದ ಸರ್ಕಾರವು; ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಮತ್ತು ವಿವಿಧ ನಿಗಮ, ಮಂಡಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೊಂದಿರುವ ವೇತನ ಖಾತೆಯನ್ನು ‘ಸಂಬಳ ಪ್ಯಾಕೇಜ್’ (Salary Package) ಖಾತೆಗೆ ಪರಿವರ್ತಿಸಿ, ಈ ಖಾತೆಗಳ ಅಡಿಯಲ್ಲಿ ನೌಕರರಿಗೆ ಉಚಿತ ವೈಯಕ್ತಿಕ ಅಪಘಾತ ವಿಮೆ ಪಡೆಯುವ ಸೌಲಭ್ಯವನ್ನು ಜಾರಿಗೆ ತಂದಿದೆ.

ಈವರೆಗೆ ಶೇ. 52% ನೌಕರರು ಮಾತ್ರ ‘ಸಂಬಳ ಪ್ಯಾಕೇಜ್’ (Salary Package) ಖಾತೆಗೆ ಪರಿವರ್ತನೆ ಮಾಡಿಕೊಂಡಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯೋಜನೆ ವ್ಯಾಪ್ತಿಗೆ ಒಳಪಡಲು ‘ಸಿ ಮತ್ತು ‘ಡಿ’ ಗುಂಪಿನ ನೌಕರರು ನಿರಾಸಕ್ತಿ ಹೊಂದಿರುವುದು ಸರ್ಕಾರವು ನೀಡಿರುವ ಅಂಕಿ-ಅಂಶಗಳಿಂದ ಕಂಡುಬಂದಿದೆ.

ಈ ಯೋಜನೆಗೆ ವ್ಯಾಪ್ತಿಗೆ ನೋಂದಾಯಿಸಿಕೊಂಡಿರುವ ನೌಕರರು ಅಪಘಾತಕ್ಕೆ ಈಡಾಗಿದ್ದಂತಹ ಸಂದರ್ಭದಲ್ಲಿ ಅಂತಹ ನೌಕರರ ಸಾಕಷ್ಟು ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿವೆ.

ಕಳೆದ ಎರಡು-ಮೂರು ದಿನಗಳಲ್ಲಿ ಬಿ.ಎಲ್.ಒ. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಇಬ್ಬರು ಮಹಿಳಾ ಮತ್ತು ಒಬ್ಬ ಪುರುಷ ನೌಕರರು ಅಪಘಾತ ಮತ್ತು ಹೃದಯಾಘಾತದಿಂದ ನಿಧನರಾಗಿದ್ದು, ಇಂತಹ ಘಟನೆಯಿಂದ ಮೃತ ನೌಕರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ.

ಪ್ರತಿಯೊಬ್ಬ ಸರ್ಕಾರಿ ನೌಕರರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂಬುದು ಸಂಘದ ಆಶಯವಾಗಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಸಾಮಾನ್ಯ ಉಳಿತಾಯ ಖಾತೆಯನ್ನು ಸಂಬಳ ಪ್ಯಾಕೇಜ್ ಖಾತೆಯನ್ನಾಗಿ ಪರಿವರ್ತಿಸಲು ಮತ್ತು ಅದಕ್ಕೆ ಪೂರಕವಾದ ವಿಮಾ ಸೌಲಭ್ಯಗಳನ್ನು ಸಕ್ರಿಯಗೊಳಿಸಲು(Activate) ತಮಗೆ ಇಷ್ಟದ ಅಥವಾ ಅನುಕೂಲಕರವಾದ ಬ್ಯಾಂಕಿಗೆ ಬೇಟಿ ನೀಡಿ ಸಂಬಳ ಪ್ಯಾಕೇಜ್(Salary Package) ಖಾತೆಯನ್ನಾಗಿ ಪರಿವರ್ತಿಸಿಕೊಳ್ಳುವುದು.

ಈ ಯೋಜನೆಯಿಂದ ಸಿಗುವ ಆರ್ಥಿಕ ಭದ್ರತೆಯು ಅವರ ಪತ್ನಿ/ಪತಿ, ಮಕ್ಕಳು ಮತ್ತು ವೃದ್ಧ ಪೋಷಕರಿಗೆ ಆಪತ್ಕಾಲದಲ್ಲಿ ಅತಿ ದೊಡ್ಡ ಆಸರೆಯಾಗಲಿದ್ದು, ಈ ಉದೇಶಕ್ಕಾಗಿ ಯಾವುದೇ ಹೆಚ್ಚುವರಿ ಪ್ರೀಮಿಯಂಗಳನ್ನು ನೀಡಬೇಕಾಗುವುದಿಲ್ಲ.

ತಮ್ಮ ಕುಟುಂಬಗಳ ಹಿತದೃಷ್ಟಿ ಹಾಗೂ ಆರ್ಥಿಕ ಭದ್ರತೆಗಾಗಿ ರಾಜ್ಯ ಸರ್ಕಾರದ ಸಮಸ್ತ ಅಧಿಕಾರಿ-ನೌಕರರು ಸ್ವಯಂಪ್ರೇರಿತರಾಗಿ 2026ರ ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ತಮ್ಮ ಆಯ್ಕೆಯ ಯಾವುದೇ ಬ್ಯಾಂಕ್‌ನಲ್ಲಿ ಸಂಬಳ ಪ್ಯಾಕೇಜ್ (Salary Package) ಖಾತೆಗೆ ನೋಂದಾಯಿಸಿಕೊಳ್ಳುವ ಮೂಲಕ ಬ್ಯಾಂಕ್‌ಗಳು ನೀಡುವ ಉಚಿತ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular