HomeIndiaಮಗನ ಎತ್ತರ ಹೆಚ್ಚಿಸಲು ಬಾಗಿಲ ಫ್ರೇಮ್‌ಗೆ ಕಟ್ಟಿ ಹಾಕಿ ಪೋಷಕರಿಂದಲೇ ಕ್ರೂರ ಟಾರ್ಚರ್: ವಿಡಿಯೋ ವೈರಲ್

ಮಗನ ಎತ್ತರ ಹೆಚ್ಚಿಸಲು ಬಾಗಿಲ ಫ್ರೇಮ್‌ಗೆ ಕಟ್ಟಿ ಹಾಕಿ ಪೋಷಕರಿಂದಲೇ ಕ್ರೂರ ಟಾರ್ಚರ್: ವಿಡಿಯೋ ವೈರಲ್

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಘಾತಕಾರಿ ವಿಡಿಯೋವೊಂದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಗನ ಎತ್ತರ (Height) ಹೆಚ್ಚಾಗಲಿ ಎಂಬ ಅವೈಜ್ಞಾನಿಕ ಹಾಗೂ ಮೂರ್ಖತನದ ನಂಬಿಕೆಯಿಂದ ಹೆತ್ತ ಪೋಷಕರೇ ಮಗನನ್ನು ಬಾಗಿಲಿನ ಫ್ರೇಮ್‌ಗೆ ಕಟ್ಟಿ ಹಾಕಿ ವಿಕೃತವಾಗಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ.

ನೆರೆಮನೆಯ ಮಹಿಳೆಯಿಂದ ಪೋಷಕರ ತರಾಟೆ:

ಮಗುವಿನ ತೀವ್ರ ಆಕ್ರಂದನ ಮತ್ತು ಕಿರುಚಾಟ ಕೇಳಿ ಧಾವಿಸಿದ ನೆರೆಮನೆಯ ಮಹಿಳೆಯೊಬ್ಬರು ಈ ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವ ಮೂಲಕ ಪೋಷಕರನ್ನು ತರಾಟೆಗೆ ತಗೆದುಕೊಂಡಿದ್ದಾರೆ. “ಮಗುವಿಗೆ ಈ ರೀತಿ ಟಾರ್ಚರ್ ಕೊಡ್ತಾರಾ?” ಎಂದು ಮಹಿಳೆ ಪ್ರಶ್ನಿಸಿದಾಗ, ಮಗುವಿನ ತಾಯಿ ತೀವ್ರ ಅಹಂಕಾರದಿಂದ, “ಇಲ್ಲಿ ಏನು ನಡೀತಿದೆ ಅಂತ ನಿಮಗೆ ಗೊತ್ತಾ? ಇದು ನಮ್ಮ ವೈಯಕ್ತಿಕ ವಿಷಯ, ನಮ್ಮ ಮನೆ ವಿಚಾರಕ್ಕೆ ತಲೆ ಹಾಕಬೇಡಿ” ಎಂದು ಜಗಳಕ್ಕೆ ನಿಂತಿದ್ದಾರೆ.

ಎತ್ತರ ಹೆಚ್ಚಿಸಲು ಈ ಶಿಕ್ಷೆ ತಂದೆಯ ಅಸಂಬದ್ಧ ಸಮರ್ಥನೆ:

ಮಗುವಿನ ಅಳು ನಿಲ್ಲದಿದ್ದಾಗ, ಕೊನೆಗೆ ತಂದೆಯು ಮತ್ತೊಬ್ಬರ ಸಹಾಯದೊಂದಿಗೆ ಮಗುವನ್ನು ಬಾಗಿಲಿನ ಫ್ರೇಮ್‌ನಿಂದ ಕೆಳಗೆ ಇಳಿಸಿದ್ದಾನೆ. ಮಹಿಳೆ ಪ್ರಶ್ನಿಸುವುದನ್ನು ಮುಂದುವರಿಸಿದಾಗ, “ಮಗುವಿನ ಹೈಟ್ ಜಾಸ್ತಿ ಮಾಡಲು ಹೀಗೆ ಮಾಡಿದ್ದೇವೆ” ಎಂದು ತಂದೆ ಅಚ್ಚರಿಯ ಸಮರ್ಥನೆ ನೀಡಿದ್ದಾನೆ ಅಷ್ಟೇ ಅಲ್ಲದೆ, ತಮ್ಮ ಅನುಮತಿ ಇಲ್ಲದೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದಾಗಿ ನೆರೆಮನೆಯ ಮಹಿಳೆಯ ಮೇಲೆಯೇ ಆರೋಪ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಠಿಣ ಕ್ರಮಕ್ಕೆ ನೆಟ್ಟಿಗರ ಆಗ್ರಹ:

ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಹೆತ್ತ ಪೋಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಶಿಸ್ತು ಕಲಿಸುವ ಪೋಷಣೆಯಲ್ಲ, ಬದಲಿಗೆ ಮಕ್ಕಳ ಮೇಲಿನ ಕ್ರೂರ ದೌರ್ಜನ್ಯ (Child Abuse) ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ತಕ್ಷಣವೇ ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರು ಮಧ್ಯಪ್ರವೇಶಿಸಿ, ಈ ಕ್ರೂರಿ ಪೋಷಕರನ್ನು ಬಂಧಿಸಬೇಕು ಹಾಗೂ ಮಗುವನ್ನು ಅವರ ವಶದಿಂದ ಮುಕ್ತಗೊಳಿಸಿ ಸುರಕ್ಷಿತ ಜಾಗಕ್ಕೆ ಕಳುಹಿಸಬೇಕು ಎಂದು ಆನ್‌ಲೈನ್‌ನಲ್ಲಿ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಒತ್ತಾಯಿಸಲಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular