HomeBusinessಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆ ಮತ್ತೆ ₹1,360 ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರ...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆ ಮತ್ತೆ ₹1,360 ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?

ಬೆಂಗಳೂರು: ಆಭರಣ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದೆ. ಜುಲೈ ತಿಂಗಳ ಎರಡನೇ ವಾರ ಆರಂಭವಾಗುತ್ತಿದ್ದಂತೆ ಹಳದಿ ಲೋಹದ ದರ ಸತತವಾಗಿ ಇಳಿಮುಖವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಉತ್ತಮ ಅವಕಾಶ ಸೃಷ್ಟಿಯಾಗಿದೆ. ಜುಲೈ 3 ರಂದು ಗರಿಷ್ಠ ಮಟ್ಟ ತಲುಪಿದ್ದ ಬಂಗಾರದ ದರ, ಇಂದು ಮಂಗಳವಾರ (ಜುಲೈ 7) ಮತ್ತೆ ಕುಸಿತ ಕಂಡಿದೆ.

ಇಂದಿನ ಚಿನ್ನದ ದರಗಳ ಕಂಪ್ಲೀಟ್ ಡಿಟೇಲ್ಸ್:

ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಎರಡೂ ಮಾದರಿಯ ಚಿನ್ನದ ದರಗಳು ಅಲ್ಪ ಇಳಿಕೆ ಕಂಡಿವೆ. ಇಂದಿನ ನಿಖರ ದರಗಳ ಪಟ್ಟಿ ಈ ಕೆಳಗಿನಂತಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿನ ಚಿನ್ನದ ದರಗಳ ಪಟ್ಟಿ:

24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ):

1 ಗ್ರಾಂ ಬೆಲೆ: ರೂ. 14,526

10 ಗ್ರಾಂ ಬೆಲೆ: ರೂ. 1,45,260

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):

1 ಗ್ರಾಂ ಬೆಲೆ: ರೂ. 13,315

10 ಗ್ರಾಂ ಬೆಲೆ: ರೂ. 1,33,150

18 ಕ್ಯಾರೆಟ್ ಚಿನ್ನ:

1 ಗ್ರಾಂ ಬೆಲೆ: ರೂ. 10,894

10 ಗ್ರಾಂ ಬೆಲೆ: ರೂ. 1,08,940

24 ಕ್ಯಾರೆಟ್ ಶುದ್ಧ ಚಿನ್ನ: ಇಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 136 ರೂ. ಇಳಿಕೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ದರದಲ್ಲಿ ಒಟ್ಟು 1,360 ರೂ. ಭಾರಿ ಕುಸಿತ ಕಂಡುಬಂದಿದೆ.

22 ಕ್ಯಾರೆಟ್ ಆಭರಣ ಚಿನ್ನ: ಇತ್ತ ಒಡವೆ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, 1 ಗ್ರಾಂಗೆ 125 ರೂ. ತಗ್ಗಿದೆ.

ತಟಸ್ಥವಾಗಿ ಉಳಿದ ಬೆಳ್ಳಿ ದರ:

ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ, ಸಿಟಿ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ದರ ಸ್ಥಿರವಾಗಿದೆ (ತಟಸ್ಥವಾಗಿದೆ). ಬೆಂಗಳೂರಿನಲ್ಲಿ ಸದ್ಯ 1 ಗ್ರಾಂ ಬೆಳ್ಳಿ ಬೆಲೆ 245 ರೂ. ಇದ್ದು, ಕೆಜಿ ಬೆಳ್ಳಿ ದರ 2,45,000 ರೂಪಾಯಿ ದಾಖಲಾಗಿದೆ. (ಕಳೆದ ವಾರಾಂತ್ಯದಲ್ಲಿ ಬೆಳ್ಳಿ ಬೆಲೆ ಗ್ರಾಂಗೆ 5 ರೂ. ನಷ್ಟು ತಗ್ಗಿ 245 ರೂ. ತಲುಪಿತ್ತು).

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,45,260

ನಾಗ್ಪುರ ₹1,45,260

ಮುಂಬೈ ₹1,45,260

ಚೆನ್ನೈ ₹1,46,180

ಕೋಲ್ಕತ್ತಾ ₹1,45,260

ಪಾಟ್ನಾ ₹1,45,310

ಸೂರತ್‌ ₹1,45,310

ಚಂಡೀಗಢ ₹1,45,410

ಲಕ್ನೋ ₹1,45,410

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular