“ಒಂದೇ ಹೊಡೆತದಲ್ಲಿ” ಇರಾನ್‌ನ ಉನ್ನತ ನಾಯಕತ್ವವನ್ನು ಅಮೆರಿಕ ಕೊನೆಗೊಳಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆದರೆ, ಇರಾನ್ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅವರನ್ನು ಗುರಿಯಾಗಿಸಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲಾಗಿದೆ. ಅಂತಹ ದಾಳಿಯು ಟೆಹ್ರಾನ್‌ನೊಂದಿಗೆ ಮಾತುಕತೆಗಳ ಯಾವುದೇ ಸಾಧ್ಯತೆಯನ್ನು ಕೊನೆಗೊಳಿಸುತ್ತಿತ್ತು ಎಂದು ಅವರು ಹೇಳಿದರು.
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಇರಾನ್ ನಾಯಕರ ಮೇಲೆ ಅಮೆರಿಕ ದಾಳಿ ಮಾಡಬಹುದು. ಆದರೆ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
“ಅವರೆಲ್ಲರೂ ಇದ್ದಾರೆ. ಒಂದು ಹೊಡೆತಕ್ಕೆ ನಾವು ಅವರೆಲ್ಲರನ್ನೂ ತೆಗೆದುಹಾಕಬಹುದು, ಆದರೆ ನಾವು ಅದನ್ನು ಮಾಡಲು ಹೋಗುವುದಿಲ್ಲ ಏಕೆಂದರೆ ಆಗ ನಮಗೆ ಮಾತುಕತೆ ನಡೆಸಲು ಯಾರೂ ಇರುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಪ್ರಕಾರ, ವಾಷಿಂಗ್ಟನ್ ಮತ್ತು ಟೆಹ್ರಾನ್ ಎರಡೂ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವಾಗ ಮಿಲಿಟರಿ ಕ್ರಮವನ್ನು ತಪ್ಪಿಸಲು ಒಪ್ಪಿಕೊಂಡಿವೆ. ‘ಇರಾನಿಯನ್ನರು ಒಪ್ಪಂದ ಮಾಡಿಕೊಳ್ಳಲು ಬೇಡಿಕೊಳ್ಳುತ್ತಿದ್ದಾರೆ’. ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ವಿಶಾಲ ಪ್ರಾದೇಶಿಕ ಸಮಸ್ಯೆಗಳ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಉತ್ಸುಕವಾಗಿದೆ. ಖಮೇನಿ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯುವವರೆಗೆ ಎರಡೂ ಕಡೆಯವರು ಸುಮಾರು ಒಂದು ವಾರ ಮಾತುಕತೆಗಳನ್ನು ವಿರಾಮಗೊಳಿಸಲು ನಿರ್ಧರಿಸಿದ್ದಾರೆ. ತಾತ್ಕಾಲಿಕ ವಿರಾಮವು ಆ ಅವಧಿಯಲ್ಲಿ ಎರಡೂ ಕಡೆಯವರು ಮಿಲಿಟರಿ ದಾಳಿಗಳನ್ನು ನಡೆಸುವುದಿಲ್ಲ ಎಂಬ ತಿಳಿವಳಿಕೆಯನ್ನು ಸಹ ಒಳಗೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಖಮೇನಿ ಅವರ ಅಂತ್ಯಕ್ರಿಯೆಯ ದೃಶ್ಯಗಳಿಂದ ತಮಗೆ ಆಶ್ಚರ್ಯವಾಗಿದೆ ಎಂದು ಸಾರ್ವಜನಿಕ ಶೋಕವನ್ನು ಟ್ರಂಪ್ ಪ್ರಶ್ನಿಸಿದ್ದಾರೆ. ಅಲ್ಲಿ ದೊಡ್ಡ ಜನಸಮೂಹವು ಮಾಜಿ ಇರಾನಿನ ನಾಯಕನ ಮೇಲೆ ಶೋಕ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. “ಜನರು ಅವರನ್ನು ದ್ವೇಷಿಸುತ್ತಿದ್ದಾರೆ ಎಂದು ನಾನು ಭಾವಿಸಿದೆ”. “ಬಹುಶಃ ಅದು ನಕಲಿ ಕಣ್ಣೀರು” ಎಂದು ಟ್ರಂಪ್ ಹೇಳಿದ್ದಾರೆ.

