HomeLatest NewsIndian Railways : ತತ್ಕಾಲ್ ಟಿಕೆಟ್ ಬುಕ್ಕಿಂಗ್‌'ನಲ್ಲಿ ಸರ್ವರ್ ಸಮಸ್ಯೆಗೆ ಬ್ರೇಕ್! ಭಾರತೀಯ ರೈಲ್ವೆಯ ಹೊಸ...

Indian Railways : ತತ್ಕಾಲ್ ಟಿಕೆಟ್ ಬುಕ್ಕಿಂಗ್‌’ನಲ್ಲಿ ಸರ್ವರ್ ಸಮಸ್ಯೆಗೆ ಬ್ರೇಕ್! ಭಾರತೀಯ ರೈಲ್ವೆಯ ಹೊಸ ರಿಸರ್ವೇಶನ್ ವ್ಯವಸ್ಥೆ

ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ. ಇನ್ನು ಮುಂದೆ ತತ್ಕಾಲ್ ಟಿಕೆಟ್‌ಗಳನ್ನು ಅತ್ಯಂತ ವೇಗವಾಗಿ ಬುಕ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇದಕ್ಕಾಗಿ ಭಾರತೀಯ ರೈಲ್ವೆ ಹೊಸ ಆನ್‌ಲೈನ್ ರಿಸರ್ವೇಶನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಹಳೆಯ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಬದಲಿಗೆ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರ ಮೂಲಕ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಇನ್ನಷ್ಟು ಸುಲಭ ಹಾಗೂ ವೇಗವಾಗಲಿದೆ.

ಪ್ರಸ್ತುತ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಸರ್ವರ್ ಡೌನ್ ಆಗುವುದು, ವೆಬ್‌ಸೈಟ್ ಅಥವಾ ಆ್ಯಪ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆಯ ಮಾಹಿತಿ ತಂತ್ರಜ್ಞಾನ ಸಂಸ್ಥೆ CRIS (Centre for Railway Information Systems) ಹೊಸ ರಿಸರ್ವೇಶನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ.

ನಿಮಿಷಕ್ಕೆ 1.25 ಲಕ್ಷ ಟಿಕೆಟ್ ಬುಕ್ಕಿಂಗ್ ಸಾಮರ್ಥ್ಯ

ಹೊಸ ವ್ಯವಸ್ಥೆಯ ಮೂಲಕ ಒಂದೇ ನಿಮಿಷದಲ್ಲಿ 1,25,000 ಟಿಕೆಟ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯ ಇರಲಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಈ ಸಾಮರ್ಥ್ಯ ಕೇವಲ 25,000 ಟಿಕೆಟ್‌ಗಳು ಮಾತ್ರ. ಅಂದರೆ, ಹೊಸ ವ್ಯವಸ್ಥೆಯಿಂದ ಟಿಕೆಟ್ ಬುಕ್ಕಿಂಗ್ ವೇಗವು ಐದು ಪಟ್ಟು ಹೆಚ್ಚಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿದಿನ ಬೆಳಗ್ಗೆ 10 ಮತ್ತು 11 ಗಂಟೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆರಂಭವಾಗುವ ವೇಳೆ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ವೆಬ್‌ಸೈಟ್ ಹಾಗೂ ಆ್ಯಪ್ ಹ್ಯಾಂಗ್ ಆಗುವ ಸಮಸ್ಯೆ ಎದುರಾಗುತ್ತದೆ. ಆದರೆ ಹೊಸ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆ ಇಲ್ಲದೆ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್‌ವನ್ ಆ್ಯಪ್‌ನಲ್ಲಿ AI ಸೌಲಭ್ಯ

ಕಳೆದ 40 ವರ್ಷಗಳಿಂದ ರೈಲ್ವೆಯ ಡಿಜಿಟಲ್ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿರುವ CRIS, ಟಿಕೆಟ್ ಬುಕ್ಕಿಂಗ್, ಸರಕು ಸಾಗಣೆ ಹಾಗೂ ಇತರ ಡಿಜಿಟಲ್ ಸೇವೆಗಳನ್ನು ನಿರ್ವಹಿಸುತ್ತಿದೆ. ಇದೀಗ ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುತ್ತಿರುವ RailOne ಆ್ಯಪ್‌ಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗುತ್ತಿದೆ.

ಈ AI ವ್ಯವಸ್ಥೆಯ ಮೂಲಕ ಪ್ರಯಾಣಿಕರ ಆದ್ಯತೆಗಳಿಗೆ ಅನುಗುಣವಾಗಿ ಉತ್ತಮ ಸೇವೆಗಳನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ತತ್ಕಾಲ್ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆ, ವೇಯಿಟಿಂಗ್ ಲಿಸ್ಟ್ ಟಿಕೆಟ್ ಕನ್ಫರ್ಮ್ ಆಗುವ ಅವಕಾಶ ಎಷ್ಟು ಎಂಬುದನ್ನು ಸುಮಾರು 90 ಶೇಕಡಾ ನಿಖರತೆಯೊಂದಿಗೆ ಮುಂಚಿತವಾಗಿ ಅಂದಾಜಿಸಿ ಮಾಹಿತಿ ನೀಡಲಿದೆ.

ಇದರಿಂದ ಪ್ರಯಾಣಿಕರು ಮುಂಚಿತವಾಗಿಯೇ ಪರಿಸ್ಥಿತಿಯನ್ನು ತಿಳಿದು ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಪ್ರಸ್ತುತ ಚಾರ್ಟ್ ಸಿದ್ಧವಾದ ಬಳಿಕವೂ ಟಿಕೆಟ್ ವೇಯಿಟಿಂಗ್‌ನಲ್ಲೇ ಉಳಿದರೆ ಪ್ರಯಾಣಿಕರು ಕೊನೆಯ ಕ್ಷಣದಲ್ಲಿ ಪರದಾಡಬೇಕಾಗುತ್ತದೆ. ಹೊಸ AI ವೈಶಿಷ್ಟ್ಯದಿಂದ ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular