ಧಾರವಾಡ: ಬಸ್ ನಲ್ಲಿ ಪ್ರಯಾಣಿಸುವಾಗ ಉಗಿಯಲು ಕಿಟಕಿಯಿಂದ ವಿದ್ಯಾರ್ಥಿಯೊಬ್ಬ ತಲೆ ಹೊರ ಹಾಕಿದ್ದು, ಹಿಂಬದಿಯಿಂದ ಟಿಪ್ಪರ್ ತಲೆಗೆ ಬಡಿದು ತಲೆಯೇ ಕಟ್ ಆಗಿದೆ.
ಧಾರವಾಡ ಜಿಲ್ಲೆ ಕುಂದಗೋಳ ಹೊರವಲಯದಲ್ಲಿ ನಡೆದಿದೆ. ಶಿರೂರು ಗ್ರಾಮದ ಐಟಿಐ ವಿದ್ಯಾರ್ಥಿ ಫಕೀರೇಶ(17) ತಲೆ ಕಟ್ ಆಗಿದೆ. ಹುಬ್ಬಳ್ಳಿಯಿಂದ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಬಸ್ ತೆರಳುತ್ತಿತ್ತು. ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ. ಬಸ್ ಹಿಂಬದಿ ಸೀಟ್ ನಲ್ಲಿ ಫಕೀರೇಶ ಕುಳಿತಿದ್ದ. ಬಸ್ ಚಲಿಸುವಾಗ ಉಗಿಯಲು ಬಸ್ ಕಿಟಕಿಯಿಂದ ತಲೆ ಹೊರಗೆ ಹಾಕಿದ್ದ. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಗೆ ಫಕೀರೇಶನ ತಲೆಗೆ ತಾಗಿದ್ದರಿಂದ ಕಟ್ ಆಗಿದೆ ಎನ್ನಲಾಗಿದೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

