HomeLatest Newsಬೆಂಗಳೂರಿನಲ್ಲಿ ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ ಹಣ ವಸೂಲಿ ಮಾಡ್ತಿದ್ದ...

ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ ಹಣ ವಸೂಲಿ ಮಾಡ್ತಿದ್ದ ಖದೀಮ ಲಾಕ್

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಚ್‌ಎಸ್‌ಆರ್ ಲೇಔಟ್ (HSR Layout) ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ ಅಸಲಿ ಪೊಲೀಸರಿಗೇ ಶಾಕ್ ಕೊಡುವಂತೆ ಖಾಕಿ ಯೂನಿಫಾರ್ಮ್ ಧರಿಸಿ, ರಸ್ತೆಯಲ್ಲಿ ಹೋಗುವ ಬೈಕ್ ಸವಾರರನ್ನು ತಡೆದು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌ನ ಕರಾಳ ಮುಖ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಯಲಾಗಿದೆ.ಖಾಕಿ ಬಟ್ಟೆ ಧರಿಸಿ, ಕೈಯಲ್ಲೊಂದು ಮೊಬೈಲ್ ಹಿಡಿದು ನಿರಪರಾಧಿ ವಾಹನ ಸವಾರರನ್ನು ಹೆದರಿಸುತ್ತಿದ್ದ ಈ ನಕಲಿ ಅಸಾಮಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

View this post on Instagram

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

A post shared by Siliconcity.bengaluru (@siliconcity.bengaluru)

ಏನಿದು ಘಟನೆ? ಅಸಲಿ ಕಥೆ ಇಲ್ಲಿದೆ:

ಪೊಲೀಸ್ ಹೆಸರಲ್ಲಿ ಸುಲಿಗೆ: ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸ್ ತರಹ ಯೂನಿಫಾರ್ಮ್ ಮತ್ತು ಜಾಕೆಟ್ ಧರಿಸಿ ನಿಂತಿದ್ದನು. ಅಲ್ಲಿಗೆ ಬರುವ ಪ್ರತಿಯೊಂದು ಬೈಕ್ ಹಾಗೂ ವಾಹನಗಳನ್ನು ತಡೆದು ತಪಾಸಣೆ ನಡೆಸುವ ನಾಟಕ ವಾಡುತ್ತಿದ್ದನು.

ದಂಡದ ನೆಪದಲ್ಲಿ ಲೂಟಿ: ವಾಹನ ಸವಾರರ ಬಳಿ ದಾಖಲೆಗಳನ್ನು ಕೇಳಿ, ಇಲ್ಲದಿದ್ದರೆ ಕೇಸ್ ದಾಖಲಿಸುವುದಾಗಿ ಹೆದರಿಸಿ ಅವರಿಂದ ಅಕ್ರಮವಾಗಿ ಹಣ ಪೀಕುತ್ತಿದ್ದ ಎನ್ನಲಾಗಿದೆ.

ಈತನ ನಡವಳಿಕೆಯ ಮೇಲೆ ಅನುಮಾನಗೊಂಡ ಸಾರ್ವಜನಿಕರು ಹಾಗೂ ವಾಹನ ಸವಾರರು ತಕ್ಷಣವೇ ಆತನನ್ನು ಪ್ರಶ್ನಿಸಿದ್ದಾರೆ. ಆತ ಅಸಲಿ ಪೊಲೀಸ್ ಅಲ್ಲ, ಬದಲಿಗೆ ಖಾಕಿ ಯೂನಿಫಾರ್ಮ್ ದುರುಪಯೋಗಪಡಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದ ವಂಚಕ ಎಂಬುದು ಗೊತ್ತಾಗುತ್ತಿದ್ದಂತೆ ಸ್ಥಳೀಯರು ಆತನ ಕ್ಲಾಸ್ ತಗೆದುಕೊಂಡಿದ್ದಾರೆ ಮತ್ತು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಸಾರ್ವಜನಿಕರೇ ಎಚ್ಚರ

ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ಇಂತಹ ನಕಲಿ ಪೊಲೀಸರ ಕಾಟ ಹೆಚ್ಚಾಗುತ್ತಿದ್ದು, ವಾಹನ ಸವಾರರು ಜಾಗರೂಕರಾಗಿರಬೇಕಿದೆ. ಯಾವುದೇ ಅಧಿಕೃತ ಪೊಲೀಸ್ ಸಿಬ್ಬಂದಿ ದಂಡ ವಿಧಿಸುವಾಗ ರಶೀದಿ (Receipt) ನೀಡಬೇಕು ಅಥವಾ ಡಿಜಿಟಲ್ ಚಲನ್ ಮೂಲಕವೇ ಪ್ರಕ್ರಿಯೆ ನಡೆಸಬೇಕು. ಹೀಗೆ ರಸ್ತೆ ಬದಿಯಲ್ಲಿ ನಿಂತು ಹಣ ಕೇಳುವವರ ಬಗ್ಗೆ ಅನುಮಾನ ಬಂದರೆ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ದೂರು ನೀಡಿ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular