HomeLatest NewsSHOCKING : ಮಧ್ಯರಾತ್ರಿ ಗಾಂಜಾ ಗ್ಯಾಂಗ್‌ ಅಟ್ಟಹಾಸ ; ಕಾರು ಬೆನ್ನಟ್ಟಿ ಕುಟುಂಬಕ್ಕೆ ಬೆದರಿಕೆ |WATCH...

SHOCKING : ಮಧ್ಯರಾತ್ರಿ ಗಾಂಜಾ ಗ್ಯಾಂಗ್‌ ಅಟ್ಟಹಾಸ ; ಕಾರು ಬೆನ್ನಟ್ಟಿ ಕುಟುಂಬಕ್ಕೆ ಬೆದರಿಕೆ |WATCH VIDEO

ಹೈದರಾಬಾದ್‌ನ ಘಟ್‌ಕೇಸರ್–ಬೋಡುಪ್ಪಲ್ ಹೆದ್ದಾರಿಯಲ್ಲಿ ಮಧ್ಯರಾತ್ರಿ ಮದುವೆ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಕುಟುಂಬವನ್ನು ಗಾಂಜಾ ಸೇವನೆ ಮಾಡಿದ್ದರೆಂದು ಶಂಕಿಸಲಾದ ಯುವಕರ ಗುಂಪೊಂದು ಬೈಕ್‌ಗಳಲ್ಲಿ ಬೆನ್ನಟ್ಟಿ ಭಯಭೀತರನ್ನಾಗಿಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಾರಿನೊಳಗೆ ಮಹಿಳೆಯರು ಮತ್ತು ಮಕ್ಕಳು ಇದ್ದರೂ ದುಷ್ಕರ್ಮಿಗಳು ದಾಂಧಲೆ ನಡೆಸಿದ ದೃಶ್ಯಗಳು ವೈರಲ್ ಆಗಿವೆ.

ಹೌದು,  ನಗರದಲ್ಲಿ ದಿನದಿಂದ ದಿನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಸಮರ್ಪಕ ನಿಗಾವಹಿಸುವಿಕೆಯ ಕೊರತೆಯಿಂದಾಗಿ ಪುಂಡರ ಅಟ್ಟಹಾಸ ಹೆಚ್ಚುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ನಗರ ಹೊರವಲಯದ ಘಟ್‌ಕೇಸರ್‌ನಿಂದ ಬೋಡುಪ್ಪಲ್ ಹೆದ್ದಾರಿಯಲ್ಲಿ, ಮಧ್ಯರಾತ್ರಿ ಮದುವೆ ಸಮಾರಂಭ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಕುಟುಂಬವನ್ನು ಕೆಲವರು ಬೈಕ್‌ಗಳಲ್ಲಿ ಬೆನ್ನಟ್ಟುತ್ತಾ ಭಯಭೀತರನ್ನಾಗಿಸಿದ ಘಟನೆ ಸಂಚಲನ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರಿನೊಳಗೆ ಮಹಿಳೆಯರು ಹಾಗೂ ಪುಟ್ಟ ಮಕ್ಕಳು ಇದ್ದರೂ ಗಮನಿಸದೆ ದುಷ್ಕರ್ಮಿಗಳು ಇನ್ನಷ್ಟು ಉದ್ದಂಡತನ ಮೆರೆದಿದ್ದಾರೆ. ಬೈಕ್‌ಗಳನ್ನು ಕಾರಿನ ಮುಂದೆ ಅಡ್ಡವಾಗಿ ಚಲಾಯಿಸಿ, ಜೋರಾಗಿ ಕೂಗುತ್ತಾ ಕುಟುಂಬವನ್ನು ಬೆದರಿಸಲು ಯತ್ನಿಸಿದ್ದಾರೆ.

ನಡುರಸ್ತೆಯಲ್ಲಿ ಇಂತಹ ಘಟನೆ ನಡೆದರೂ ತಡೆಯುವವರು ಯಾರೂ ಇರಲಿಲ್ಲವೇ? ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವೈಫಲ್ಯದ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular