HomeLatest Newsಮೋದಿ ನಿಂದಿಸುವ ಬದಲು ಸ್ವದೇಶಿ ವಸ್ತು ಬಳಸಿ ರೂಪಾಯಿ ಸ್ಟ್ರಾಂಗ್ ಆಗುತ್ತೆ ಎಂದ ಮಹಿಳೆ: ಅಕ್ಕ...

ಮೋದಿ ನಿಂದಿಸುವ ಬದಲು ಸ್ವದೇಶಿ ವಸ್ತು ಬಳಸಿ ರೂಪಾಯಿ ಸ್ಟ್ರಾಂಗ್ ಆಗುತ್ತೆ ಎಂದ ಮಹಿಳೆ: ಅಕ್ಕ ನೀವು ಜಪಾನ್ ಕಾರಿನಲ್ಲಿ ಕುಳಿತು ಈ ಮಾತು ಹೇಳಬಹುದಾ ಎಂದು ಬಾಯಿಮುಚ್ಚಿಸಿದ ಪತ್ರಕರ್ತ; ವಿಡಿಯೊ

ಸದ್ಯ ಭಾರತದ ಜನತೆ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ಅನೇಕ ಕಾರಣಗಳಿಗೆ ಟೀಕಿಸುತ್ತಿದ್ದು, ಅತಿ ಹೆಚ್ಚಾಗಿ ಕಾಲೆಳೆಯುತ್ತಿರುವುದು ಡಾಲರ್ ಎದುರು ರೂಪಾಯಿ ಮೌಲ್ಯ ಹೀನಾಯ ಕುಸಿತ ಕಂಡಿರುವ ಕುರಿತು.

ಹೌದು, ಪ್ರಸ್ತುತ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಮೋದಿ ಪ್ರಧಾನಿಯಾದರೆ ಡಾಲರ್ ಮುಂದೆ ರೂಪಾಯಿ ಬಲಿಷ್ಠವಾಗಲಿದೆ ಎಂದು ಹಲವಾರು ಮಂದಿ ವಿಶ್ವಾಸದಿಂದ ಕೂಗಿ ಹೇಳಿದ್ದರು .

ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಡಾಲರ್‌ಗಿಂತ ರೂಪಾಯಿ ಮೌಲ್ಯ ಹೆಚ್ಚಾಗಲಿದೆ ಎಂದು ಮೈಕ್ ಹಿಡಿದು ಭಾಷಣ ಬಿಗಿದಿದ್ದರು. ಆದರೆ ಆದದ್ದೆಲ್ಲ ಉಲ್ಟಾ. ಡಾಲರ್ ಎದುರು 2014ರಲ್ಲಿ 60 ರೂ ಇದ್ದ ರೂಪಾಯಿ ಮೌಲ್ಯ ಸದ್ಯ 94 ರೂಪಾಯಿ ಮುಟ್ಟಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ತಂದರೂ ಸಹ ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಸಾಧ್ಯವಾಗುತ್ತಲೇ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿಯೇ ಈ ಕುರಿತು ಚರ್ಚೆಗಳು ಏರ್ಪಟ್ಟಿದ್ದು, ಸುದ್ದಿ ವಾಹಿನಿಯೊಂದರ ನಿರೂಪಕ ಸಾರ್ವಜನಿಕರ ಬಳಿ ಈ ಬಗ್ಗೆ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಈ ವೇಳೆ ಕಾರಿನಲ್ಲಿ ಕುಳಿತ ಮಹಿಳೆಯೊಬ್ಬರು ‘ಮೋದಿ ಸರ್ಕಾರವನ್ನು ನಿಂದಿಸುವ ಬದಲು ಯಾವಾಗ ದೇಶದ ಜನತೆ ಸ್ವದೇಶಿ ಉತ್ಪನ್ನಗಳನ್ನು ಬಳಸಲು ಶುರು ಮಾಡುತ್ತಾರೋ ಅಂದು ರೂಪಾಯಿ ಮೌಲ್ಯ ಬಲಿಷ್ಠಗೊಂಡು ಇರುವ ತೊಂದರೆಗಳೆಲ್ಲ ಬಗೆಹರಿಯಲಿದೆ’ ಎಂದು ಹೇಳಿದ್ದಾರೆ.

ಹೀಗೆ ಮಹಿಳೆ ಉತ್ತರ ನೀಡುತ್ತಿದ್ದಂತೆ ಮರು ಪ್ರಶ್ನೆ ಹಾಕಿದ ನಿರೂಪಕ ‘ಹಾಗಾದರೆ ನೀವ್ಯಾಕೆ ಜಪಾನ್ ದೇಶದ ಫಾರ್ಚುನರ್ ಕಾರನ್ನು ಬಳಸುತ್ತಿದ್ದೀರಿ?’ ಎಂದು ಕೌಂಟರ್ ಕೊಟ್ಟಿದ್ದಾರೆ.

ಈ ಪ್ರಶ್ನೆಗೆ ತಬ್ಬಿಬ್ಬಾದ ಮಹಿಳೆ ‘ನೀವು ಯಾಕೆ ನನ್ನ ಕಾರಿನ ಬಗ್ಗೆ ಪ್ರಶ್ನೆ ಮಾಡುತ್ತಿದ್ದೀರಿ? ಟಾಟಾ ಕಂಪನಿ ಓವರ್ ರತನ್ ಟಾಟಾ ಬಳಿ ಸಹ ಈ ಕಾರಿದೆ’ ಎಂದು ಉತ್ತರಿಸಿದ್ದಾರೆ.

ಹೀಗೆ ಸ್ವದೇಶಿ ಉತ್ಪನ್ನ ಬಳಸಿ ಎಂದು ಇತರರಿಗೆ ಉಪದೇಶ ಮಾಡುವ ಈಕೆಯೇ ಸ್ವದೇಶಿ ಕಾರು ಖರೀದಿಸದೇ ಜಪಾನಿನ ಕಾರನ್ನು ಖರೀದಿಸಿರುವುದನ್ನು ಕಂಡು ನೆಟ್ಟಿಗರು ವಿಡಿಯೊ ಹಂಚಿಕೊಂಡು ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular