HomeKarnatakaBIG NEWS : ರಾಜ್ಯದ ರೈತರೇ ಗಮನಿಸಿ ; ಕೃಷಿ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳ...

BIG NEWS : ರಾಜ್ಯದ ರೈತರೇ ಗಮನಿಸಿ ; ಕೃಷಿ ಇಲಾಖೆಯಿಂದ ಸಿಗುವ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.!

ಬೆಂಗಳೂರು: ರಾಜ್ಯ ಸರ್ಕಾರ ರೈತರ ಆದಾಯ ಹೆಚ್ಚಿಸುವುದು, ಕೃಷಿ ಉತ್ಪಾದಕತೆ ಸುಧಾರಿಸುವುದು ಹಾಗೂ ಆಧುನಿಕ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ವಿಧಾನಸಭೆಯಲ್ಲಿ ಕೃಷಿ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ, ರೈತರಿಗೆ ಬೆಳೆ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ಬೆಳೆ ವಿಮೆ, ಸಾವಯವ ಕೃಷಿ, ತೋಟಗಾರಿಕೆ, ಮಣ್ಣಿನ ಪರೀಕ್ಷೆ, ಕೃಷಿ ಯಂತ್ರೋಪಕರಣಗಳ ಖರೀದಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಾಯಧನ ನೀಡಲಾಗುತ್ತಿದೆ.

ಸರ್ಕಾರದ ಮಾಹಿತಿಯಂತೆ ಪ್ರಮುಖ ಯೋಜನೆಗಳಲ್ಲಿ ಬೀಜ ಗ್ರಾಮ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆ (SMAM), ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSM), ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ (CDP), ಎಣ್ಣೆಕಾಳು ಅಭಿವೃದ್ಧಿ ಯೋಜನೆ (NMEO-Oilseeds), ಸಾವಯವ ಕೃಷಿ ಉತ್ತೇಜನ, ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆ, ಬೆಳೆ ಸರ್ವೇ, ರೈತ ಸಂಪರ್ಕ ಕೇಂದ್ರಗಳ ಬಲವರ್ಧನೆ, ರೈತರಿಗೆ ಡ್ರೋನ್ ಹಾಗೂ ಆಧುನಿಕ ಯಂತ್ರೋಪಕರಣಗಳ ಬಳಕೆ ಉತ್ತೇಜನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸೇರಿವೆ.

ಇದಲ್ಲದೆ, ರಾಜ್ಯದ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಸಹಾಯಧನ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚಿನ ಅನುದಾನ, ತೋಟಗಾರಿಕೆ ಬೆಳೆಗಳ ಅಭಿವೃದ್ಧಿ, ಪೌಷ್ಟಿಕ ಆಹಾರ ಭದ್ರತೆ, ಮಣ್ಣಿನ ಪರೀಕ್ಷಾ ಸೇವೆಗಳು, ರೈತರಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಕೃಷಿ ವಿಸ್ತರಣಾ ಚಟುವಟಿಕೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರ ಕೃಷಿ ಕ್ಷೇತ್ರದಲ್ಲಿ ಬೆಳೆ ಉತ್ಪಾದನೆ ಹೆಚ್ಚಿಸುವುದು, ವೆಚ್ಚ ಕಡಿಮೆ ಮಾಡುವುದು, ರೈತರ ಆದಾಯ ವೃದ್ಧಿ, ಹವಾಮಾನ ಸ್ನೇಹಿ ಕೃಷಿ ಪದ್ಧತಿ, ಯಾಂತ್ರೀಕರಣ, ಬೆಳೆ ವೈವಿಧ್ಯೀಕರಣ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಗೆ ವಿಶೇಷ ಒತ್ತು ನೀಡಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಪ್ರಮುಖ ಯೋಜನೆಗಳ ಪಟ್ಟಿ:

  1. ಬೀಜ ಗ್ರಾಮ ಯೋಜನೆ
  2. ಕೃಷಿ ಯಾಂತ್ರೀಕರಣ ಯೋಜನೆ (SMAM)
  3. ಕೃಷಿ ಸಂಜೀವಿನಿ
  4. ಸಾವಯವ ಇಂಗಾಲ ಅಭಿವೃದ್ಧಿ
  5. ಬೆಳೆ ಸಂರಕ್ಷಣೆ
  6. ಇ-ಕೃಷಿ ಸೇವೆಗಳು
  7. ಬೆಳೆ ಸರ್ವೇ ಹಾಗೂ ಸಿದ್ಧಗಂಗಾ ಆ್ಯಪ್
  8. ಬೆಳೆ ತಳಿಗಳ ಸಂರಕ್ಷಣೆ
  9. ಸಾವಯವ ಇಂಗಾಲ ಅಭಿಯಾನ
  10. ಬೆಳೆ ಬೆಲೆ ವಿಮೆ ಯೋಜನೆ
  11. ಬೆಳೆ ಸಮೀಕ್ಷೆ
  12. ಆತ್ಮ ಯೋಜನೆ (ATMA)
  13. ಕೃಷಿ ಭಾಗ್ಯ
  14. ಕೃಷಿ ಭಾಗ್ಯ (SDMF)
  15. ನೈಸರ್ಗಿಕ ನೀರಾವರಿ ಯೋಜನೆ
  16. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSM)
  17. ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM)
  18. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
  19. ರಾಷ್ಟ್ರೀಯ ಎಣ್ಣೆಕಾಳು ಅಭಿಯಾನ (NMEO-Oilseeds)
  20. ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ (CDP)
  21. ಕೃಷಿ ವಿಸ್ತರಣೆ ಉಪ ಅಭಿಯಾನ (SMAE)
  22. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಯೋಜನೆ (SHF)
  23. ರೈತ ಬೆಳೆ ಕಣ್ಗಾವಲು ಕಾರ್ಯಕ್ರಮ
  24. ಕರ್ನಾಟಕ ಕೃಷಿ ಸಮೃದ್ಧಿ ಯೋಜನೆ
  25. ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆ (PMFME).

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular