HomeLatest Newsಮೋಟೊ ಜಿಪಿಯಲ್ಲಿ ಶಾಕಿಂಗ್ ಘಟನೆ: ಟ್ರ್ಯಾಕ್ ಮಾರ್ಷಲ್ ಕೆನ್ನೆಗೆ ಬಾರಿಸಿದ ರೈಡರ್; ವಿಡಿಯೊ

ಮೋಟೊ ಜಿಪಿಯಲ್ಲಿ ಶಾಕಿಂಗ್ ಘಟನೆ: ಟ್ರ್ಯಾಕ್ ಮಾರ್ಷಲ್ ಕೆನ್ನೆಗೆ ಬಾರಿಸಿದ ರೈಡರ್; ವಿಡಿಯೊ

ಮೋಟೋ ಜಿಪಿ ರೇಸ್ ಪ್ರೇಮಿಗಳು ಬೆಚ್ಚಿಬೀಳುವಂತಹ ಘಟನೆಯೊಂದು ವೀಕೆಂಡ್ ರೇಸ್‌ನಲ್ಲಿ ನಡೆದಿದೆ. ಸ್ಪ್ರಿಂಟ್ ರೇಸ್‌ನಲ್ಲಿ ಬೈಕ್ ಅಪಘಾತಕ್ಕೀಡಾದ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡ ಇಟಲಿಯ ಖ್ಯಾತ ರೈಡರ್ ಮಾರ್ಕೊ ಬೆಜೆಚಿ, ಟ್ರ್ಯಾಕ್‌ನಲ್ಲಿದ್ದ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಅಶಿಸ್ತಿನ ವರ್ತನೆಗಾಗಿ ಅವರನ್ನು ಭಾನುವಾರದ ಮುಖ್ಯ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ನಿಂದ ಅಮಾನತುಗೊಳಿಸಿ ರೇಸ್ ಡೈರೆಕ್ಷನ್ ಕಡಕ್ ಆದೇಶ ಹೊರಡಿಸಿದೆ.

ಏನಿದು ಘಟನೆ? ರೇಸ್ ಮಧ್ಯೆ ನಿಯಂತ್ರಣ ತಪ್ಪಿ ಮಾರ್ಕೊ ಬೆಜೆಚಿ ಕೆಳಗೆ ಬಿದ್ದಿದ್ದರು. ಈ ವೇಳೆ ಬಿದ್ದಿದ್ದ ಬೈಕ್ ಇಂಜಿನ್ ಆಫ್ ಮಾಡಲು ಅವರು ತರಾತುರಿಯಲ್ಲಿ ಧಾವಿಸಿದರು. ಈ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಬಂದ ಟ್ರ್ಯಾಕ್ ಮಾರ್ಷಲ್ ಒಬ್ಬರನ್ನು ಬೆಜೆಚಿ ಮೊದಲು ಜೋರಾಗಿ ತಳ್ಳಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಇಂಜಿನ್ ಸ್ವಿಚ್ ಆಫ್ ಮಾಡಿದ ತಕ್ಷಣವೇ ತೀವ್ರ ಆಕ್ರೋಶದಿಂದ ಆ ಅಧಿಕಾರಿಯ ಕೆನ್ನೆಗೆ ಬಿಗಿದಿದ್ದಾರೆ. ಈ ಇಡೀ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳು ಮತ್ತು ಮೋಟೋ ಜಿಪಿ ಮಂಡಳಿ ರೈಡರ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಠಿಣ ಕ್ರಮ ಕೈಗೊಂಡ ಮಂಡಳಿ: ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ರೇಸ್ ಡೈರೆಕ್ಷನ್ ಅಧಿಕಾರಿಗಳು ಘಟನೆಯ ತನಿಖೆ ನಡೆಸಿದರು. ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದ ಬೆಜೆಚಿ ವರ್ತನೆ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ ಅಧಿಕಾರಿಗಳು, ಅವರನ್ನು ಭಾನುವಾರದ ಮುಖ್ಯ ರೇಸ್‌ನಿಂದ ಹೊರಗಿಡುವ ನಿರ್ಧಾರ ಪ್ರಕಟಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಭಾನುವಾರದ ಪಂದ್ಯದಲ್ಲಿ ಪೋಡಿಯಂ ಫಿನಿಶ್ ಮಾಡುವ ಉತ್ತಮ ಅವಕಾಶ ಹೊಂದಿದ್ದ ಬೆಜೆಚಿ, ಈಗ ತಮ್ಮದೇ ಕೈಚಳಕದಿಂದಾಗಿ ರೇಸ್‌ನಿಂದ ಹೊರಗುಳಿಯುವಂತಾಗಿದೆ. ಚಾಂಪಿಯನ್‌ಶಿಪ್ ರೇಸ್‌ನಲ್ಲಿ ಪ್ರತಿ ಪಾಯಿಂಟ್ ಪ್ರಮುಖವಾಗಿರುವಾಗ, ಈ ಅಮಾನತು ಅವರ ಮುಂದಿನ ಸ್ಥಾನದ ಮೇಲೆ ಭಾರಿ ಹೊಡೆತ ನೀಡಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular