HomeLatest Newsಕಳ್ಳತನವಾಗಬಾರದೆಂದು ವಾಷಿಂಗ್ ಮಷಿನ್ ನಲ್ಲಿ ಬಚ್ಚಿಟ್ಟಿದ್ದ 1.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕಳ್ಳತನವಾಗಬಾರದೆಂದು ವಾಷಿಂಗ್ ಮಷಿನ್ ನಲ್ಲಿ ಬಚ್ಚಿಟ್ಟಿದ್ದ 1.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನವಾಗಬಾರದು ಎಂದು ವಾಷಿಂಗ್ ಮಷಿನ್ ನಲ್ಲಿ ಬಚ್ಚಿಟ್ಟಿದ್ದ ಸುಮಾರು 1.49 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ.

ಕಲಬುರಗಿಯ ಪ್ರಶಾಂತನಗರದ ನಿವೃತ್ತ ಸರ್ಕಾರಿ ನೌಕರ ಮಧ್ವೇಶ್ ಕುಲಕರ್ಣಿ ಅವರು ಕಳೆದ ಮಾರ್ಚ್ ನಲ್ಲಿ ಬೆಂಗಳೂರಿನ ಮಗನ ಮನೆಗೆ ಪತ್ನಿಯೊಂದಿಗೆ ಹೋಗಿದ್ದರು. ಹೋಗುವ ಸಂದರ್ಭದಲ್ಲಿ ಚಿನ್ನಾಭರಣಗಳನ್ನು ಮನೆಯ ವಾಷಿಂಗ್ ಮಷಿನ್ ನಲ್ಲಿ ಇಟ್ಟಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಮನೆಯೆನ್ನೆಲ್ಲ ಹುಡುಕಾಡಿದ್ದಾರೆ. ಕೊನೆಗೆ ವಾಷಿಂಗ್ ಮಷಿನ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ನಗದು ಕಳವು ಮಾಡಿದ್ದಾರೆ.

ಜೂನ್ 6ರಂದು ಬೆಂಗಳೂರಿನಿಂದ ವಾಪಸ್ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ನಂತರ ಮಧ್ವೇಶ್ ಕುಲಕರ್ಣಿ ಅವರು ಮನೆಯಲ್ಲಿದ್ದ ಚಿನ್ನದ ತಾಳಿ, ಬೆಳ್ಳಿಯ ಪೂಜಾ ಸಾಮಗ್ರಿ, 80 ಸಾವಿರ ರೂ. ನಗದು ಸೇರಿ 1.49 ಲಕ್ಷ ರೂ ಮೌಲ್ಯದ ಸ್ವತ್ತುಗಳು ಕಳವಾದ ಬಗ್ಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular