HomeEntertainmentಟೈಗರ್ ಪ್ರಿಂಟ್ ಉಡುಪಿನಲ್ಲಿ ದಿಶಾ ಪಟಾನಿ ಬೋಲ್ಡ್ ಲುಕ್: ನಟಿಯ ಹೊಸ ಸ್ಟೈಲ್‌ಗೆ ನೆಟ್ಟಿಗರು ಫುಲ್...

ಟೈಗರ್ ಪ್ರಿಂಟ್ ಉಡುಪಿನಲ್ಲಿ ದಿಶಾ ಪಟಾನಿ ಬೋಲ್ಡ್ ಲುಕ್: ನಟಿಯ ಹೊಸ ಸ್ಟೈಲ್‌ಗೆ ನೆಟ್ಟಿಗರು ಫುಲ್ ಫ್ಲಾಟ್

ಬಾಲಿವುಡ್‌ನ ಅತ್ಯಂತ ಫಿಟ್ ಹಾಗೂ ಗ್ಲಾಮರಸ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ಹಂಚಿಕೊಳ್ಳುವ ಫೋಟೋಗಳು ಕ್ಷಣಾರ್ಧದಲ್ಲಿ ಇಂಟರ್ನೆಟ್‌ನಲ್ಲಿ ಸದ್ದು ಮಾಡುವುದು ಹೊಸದೇನಲ್ಲ. ಇದೀಗ ಜನ್ಮದಿನದ ಮರುದಿನವೇ ನಟಿ ಹಂಚಿಕೊಂಡಿರುವ ಹೊಸ ಫೋಟೋ ಸರಣಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ಜೂನ್ 13 ರಂದು ದಿಶಾ ಪಟಾನಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನ ಯಾವುದೇ ಪೋಸ್ಟ್ ಹಂಚಿಕೊಳ್ಳದ ನಟಿ, ಅದರ ಮರುದಿನವೇ ತಮ್ಮ ಅತ್ಯಂತ ಆಕರ್ಷಕ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಈ ಫೋಟೋಗಳಲ್ಲಿ ಅವರು ಟೈಗರ್ ಪ್ರಿಂಟ್‌ನ ಕಟೌಟ್ ಡ್ರೆಸ್ ಧರಿಸಿದ್ದು, ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುದ್ದಿನ ಬೆಕ್ಕಿನೊಂದಿಗೆ ಪೋಸ್ ನೀಡಿರುವ ದಿಶಾ ಅವರ ಈ ಹೊಸ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ತಮ್ಮ ಈ ಹೊಸ ಲುಕ್‌ಗಾಗಿ ದಿಶಾ ಪಟಾನಿ ಯಾವುದೇ ಕಿವಿಯೋಲೆಗಳನ್ನು ಧರಿಸದೆ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಚ್ಚಿದ ಕೂದಲು, ನ್ಯೂಡ್ ಮೇಕಪ್ ಹಾಗೂ ಕಂದು ಬಣ್ಣದ ಬಳೆಗಳನ್ನು ತೊಡುವ ಮೂಲಕ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿಯ ಫಿಟ್‌ನೆಸ್ ಹಾಗೂ ಗ್ಲಾಮರಸ್‌ ಲುಕ್‌ಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇವರನ್ನು ಕಾಡಿನ ಬೆಕ್ಕಿಗೆ ಹೋಲಿಸಿದರೆ, ಇನ್ನು ಕೆಲವರು ನಟಿಯ ಅಂದವನ್ನು ಕೊಂಡಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ದಿಶಾ ಪಟಾನಿ ಬಾಲಿವುಡ್‌ನ ಬಹುನಿರೀಕ್ಷಿತ ಕಾಮಿಡಿ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ ನಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಊಂಚಾ ಲಂಬಾ ಕದ್’ ರೀಮಿಕ್ಸ್ ಹಾಡಿನಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ದಿಶಾ ಹೆಜ್ಜೆ ಹಾಕಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular